ಮೀನು ಕೃಷಿ ಮಾಡಿ ಹೆಚ್ಚಿನ ಆದಾಯ ಗಳಿಸಿ :ಇಕ್ರಂ

0
114

ನರೇಗಾ ಯೋಜನೆಯಡಿ ಮೀನುಕೃಷಿಕೊಳ ನಿರ್ಮಿಸಿಕೊಂಡು ಮೀನುಗಾರಿಕೆಯನ್ನು ರೈತರು ತಮ್ಮ ದೈನಂದಿನ ಚಟುವಟಿಕೆಯೊಂದಿಗೆ ಉಪಕಸುಬನ್ನಾಗಿ ಮಾಡಿಕೊಂಡರೆ ಹೆಚ್ಚಿನ‌ ಆದಾಯ‌ ಗಳಿಸಬಹುದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಇಕ್ರಂ ಅವರು ತಿಳಿಸಿದರು.

ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮೀನು ಕೃಷಿ ತರಬೇತಿ‌ ಉದ್ಘಾಟಿಸಿ ಮಾತನಾಡಿದರು.ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗವನ್ನು ಸೃಜಿಸುವ ಉದ್ದೇಶದಿಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಉಪಯೋಗಿಸಿಕೊಂಡು ಹೇಗೆ ಮೀನು ಉತ್ಪಾದನೆ ಮಾಡಬಹುದು ಎಂದು 03 ದಿನಗಳ ತರಬೇತಿ ನೀಡಲಾಗುತ್ತಿದೆ. ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಇದೆ ತರಹ ಪ್ರತಿ ಗ್ರಾಮ ಪಂಚಾಯತಿ ಮಟ್ಟದಲ್ಲೂ ಕನಿಷ್ಠ 100 ಜನ ಮೀನುಕೃಷಿಕರಿಗೆ ತರಬೇತಿ ನೀಡಿ ಮೀನುಕೃಷಿಗೆ ಉತ್ತೇಜನ ನೀಡಲು ಉದ್ದೇಶಿಸಲಾಗಾಗಿದೆ ಎಂದರು.

ತರಬೇತಿ ಕಾರ್ಯಕ್ರಮದಲ್ಲಿ 200 ಜನ ಮೀನು ಕೃಷಿಕರು ಭಾಗವಹಿಸಿದ್ದರು. ಬೆಂಗಳೂರಿನಮೀನುಗಾರಿಕೆ ಸಂಶೋಧನಾ ಮತ್ತು ಮಾಹಿತಿ ಕೇಂದ್ರದ ಪ್ರಾಧ್ಯಪಕರು ಹಾಗೂ ಮುಖ್ಯಸ್ಥರಾದ ಡಾ. ಶಿವಕುಮಾರ ಮಗಧ ಹಾಗೂ ಸಹಾಯಕ ಪ್ರಾಧ್ಯಪಕ ಡಾ.ಮಂಜಪ್ಪ ಏನ್ ಅವರು ಮೀನು ಕೃಷಿಯ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಉಪಕಾರ್ಯದರ್ಶಿ ರಮೇಶ್, ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here