ಕುಸ್ತಿ ಎಂದರೆ ನನಗೆ ಬಲು ಆಸಕ್ತಿದಾಯಕ, ಅಚ್ಚುಮೆಚ್ಚಿನ ಕ್ರೀಡೆ; ಹುಳ್ಳಿ ಪ್ರಕಾಶ್,ಹಿರಿಯ ಪತ್ರಕರ್ತರು

0
143

ಕುಸ್ತಿ ಎಂದರೆ ನನಗೆ ಬಲು ಆಸಕ್ತಿದಾಯಕ, ಅಚ್ಚುಮೆಚ್ಚಿನ ಕ್ರೀಡೆ. ಬಾಲ್ಯ ದಿಂದಲೂ ಗರಡಿ ಮನೆ ಸಂಬಂಧದೊಂದಿಗೆ ಬೆಳೆದವನು ನಾನು. ನಂತರ ಕಳೆದ ಮೂರುವರೇ ದಶಕಗಳಿಂದಲೂ ನಮ್ಮೂರು ಹಾಗೂ ನಮ್ಮ ತಾಲೂಕಿನಲ್ಲಿ ಕುಸ್ತಿ ಪಂದ್ಯಾವಾಳಿಗಳನ್ನು ಆಯೋಜಿಸುವ, ನಿರ್ವಹಿಸುವ ಕಾರ್ಯವನ್ನು ಮಾಡುತ್ತಾ ಬರುತ್ತೀರುವೆ. ಆಗೇನೆ ರಾಜ್ಯ ಮತ್ತು ರಾಜ್ಯ ದಿಂದ ಹೊರಗಡೆ ಆಯೋಜಿಸುವ ಕುಸ್ತಿ ಪಂದ್ಯಗಳ ವೀಕ್ಷಿಸಲು ಹೋಗಿ,ಬರುತ್ತಿರುವೆ.

ಗ್ರಾಮೀಣಾ ಪ್ರದೇಶದಲ್ಲಿ ಕುಸ್ತಿ ಕ್ರೀಡೆಗಳನ್ನು ಆಯೋಜಿಸುವ ಮತ್ತು ಪೈಲ್ವಾನರನ್ನು ಪ್ರೋತ್ಸಾಹಿಸುವ ಕಾರ್ಯವನ್ನು ಮಾಡುತ್ತಾ ಬರುತ್ತಿರುವೆ. ನನ್ನ ದುಡಿಮೆಯಲ್ಲಿ ಒಂದಿಷ್ಟು ಹಣವನ್ನು ಕುಸ್ತಿಗಾಗಿ ಮತ್ತು ಪೈಲ್ವಾನರಿಗೆ ಮೀಸಲಿಟ್ಟು ಖರ್ಚು ಮಾಡುತ್ತಾ ಬಂದಿರುವೆ.

ಇಂದು ಮಂಗಳವಾರ ನಮ್ಮೂರಿನಿಂದ ನಾಲ್ಕು ಕಿಮಿ ದೂರದ ಬಲ್ಲಾಹುಣಸಿ ಗ್ರಾಮದಲ್ಲಿ ಮಹರಂ ಹಬ್ಬದ ಪ್ರಯುಕ್ತ ಕುಸ್ತಿ ಪಂದ್ಯಾವಾಳಿ ಇತ್ತು. ಗ್ರಾಮದ ಜನರು ಪ್ರತಿವರ್ಷ ನನಗೆ ನೆತೃತ್ವವಹಿಸುತ್ತಾ ಬಂದಿದ್ದಾರೆ. ಅವರ ಪ್ರೀತಿಪೂರ್ವಕವಾದ ಈ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿರುವೆ.

ಬೆಳಿಗ್ಗೆನೆ ನನ್ನ ಪುತ್ರನ ಸಮೇತ ಕುಸ್ತಿ ಅಖಾಡದಲ್ಲಿ ಹಾಜರಿದ್ದು ಪಂದ್ಯಾವಾಳಿಯನ್ನು ಯಶಸ್ವಿಯಾಗಿ ನಿರ್ವಹಿಸಿದೆ. ಇಡೀ ಗ್ರಾಮದ ಜನತೆ ನನಗೆ ಗೌರವಿಸಿದರು. ಇದಕ್ಕಿಂತ ಪ್ರೀತಿ ಇನ್ನೊಂದಿಲ್ಲ. ಆಗೇನೆ ಉದಯೋನ್ಮುಖ, ಹಳೇಯ ಪೈಲ್ವಾನರನ್ನು ಕಾಣುವ ಅವಕಾಶ ಸಿಕ್ಕಿತು.
ಕುಸ್ತಿ ಪಂದ್ಯಾವಾಳಿಯ ಮೆಲುಕು ಹಾಕುತ್ತಾ ಊರಿನತ್ತ ಪ್ರಯಾಣಿಸಿದೆ. ಕುಸ್ತಿ ಮತ್ತು ಪೈಲ್ವಾನರನ್ನು ಪ್ರೋತ್ಸಾಹಿಸುವ ಕೆಲಸವನ್ನು ಎಲ್ಲರೂ ಮಾಡಿ ಎನ್ನುವೆ.

  • ಹುಳ್ಳಿಪ್ರಕಾಶ,
    ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here