ನೇಸರ ಅರ್ಗ್ಯಾನಿಕ್ಸ್ ಮತ್ತು ಮೇಘ ಪರಿಸರ ಬಳಗದವರಿಂದ ಮನೆ ಮನೆಗೆ ತ್ರಿವರ್ಣ ಧ್ವಜ ವಿತರಣೆ.

0
59

ಹಗರಿಬೊಮ್ಮನಹಳ್ಳಿ: ಆ, 13
ತಾಲ್ಲೂಕಿನ ಹೊಸ ಆನಂದ ದೇವನಹಳ್ಳಿ ಗ್ರಾಮದಲ್ಲಿ “ಹರ್ ಗರ್ ತಿರಂಗ” ಅಡಿಯಲ್ಲಿ
ನೇಸರ ಅರ್ಗ್ಯಾನಿಕ್ಸ್ ಮತ್ತು ಮೇಘ ಪರಿಸರ ಬಳಗದವರಿಂದ ಮನೆ ಮನೆಗೆ “ತ್ರಿವರ್ಣ ಧ್ವಜ* ವಿತರಣೆ ಮಾಡಲಾಯಿತು.

ಗ್ರಾಮದ ಹಿರಿಯರಾದ ಶ್ರೀಮತಿ ಗಂಗಮ್ಮಜ್ಜಿ ಭೋರ್ ಶೆಟ್ಟರ್ ಅವರಿಗೆ ತ್ರಿವರ್ಣ ಧ್ವಜವನ್ನು ನೇಸರ ಅರ್ಗ್ಯಾನಿಕ್ಸ್ ಮತ್ತು ಮೇಘ ಪರಿಸರ ಬಳಗ ದಿಂದ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು

ಮೇಘ ಪರಿಸರ ಬಳಗದ ಸಂಸ್ಥಾಪಕರಾದ ವಸಂತ್ ಮಾಲವಿ ಮಾತನಾಡಿ, 75 ನೇ ವರ್ಷದ ಈ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರದಿಂದ ಆಚರಿಸಲೆನ್ನುವ ಸದುದ್ದೇಶದ ಹಿನ್ನೆಲೆಯಲ್ಲಿ ಗ್ರಾಮದ ಪ್ರತಿ ಮನೆಗೆ ನಮ್ಮ ಬಳಗ ದಿಂದ ತ್ರಿವರ್ಣ ಧ್ವಜವನ್ನು ನೀಡುತ್ತಿರುವುದಾಗಿ ತಿಳಿಸಿದರು.

ವೈವಿಧ್ಯಮಯ ಹೊಂದಿರುವ ನಮ್ಮ ರಾಷ್ಟ್ರದಲ್ಲಿ ನಾವೆಲ್ಲರೂ ಸಂತಸದಿಂದ ಬದುಕಿತ್ತಿರುವುದೇ ನಮ್ಮಲ್ಲೆರ ಸೌಭಾಗ್ಯ. ತ್ರಿವರ್ಣ ಧ್ವಜವನ್ನು ನಿಮ್ಮ ಮನೆಯ ದೇವರೆಂದು ಭಾವಿಸಿ. ಅದರ ಪಾವಿತ್ರ್ಯತೆ ಕಾಪಾಡಿಕೊಂಡು ಬನ್ನಿ. ಸಂಭ್ರಮಾಚರಣೆಯಾದ ನಂತರ ಧ್ವಜವನ್ನು ಜೋಪಾನದಿಂದ ತೆಗೆದಿಟ್ಟುಕೊಳ್ಳುವಂತೆ ಅವರು ವಿನಂತಿಸಿಕೊಂಡರು.

ಈ ಸಂದರ್ಭದಲ್ಲಿ ಕಡಲಬಾಳು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಲತಾ ಭೋರ್ ಶೆಟ್ಟರ್, ಸದಸ್ಯರಾದ ಹುಲುಗಪ್ಪ, ಮೇಘ ಪರಿಸರ ಬಳಗದ ಚಂದ್ರರೇಖಾ ಮಾಲವಿ, ರಾಜು ಭೋರಶೆಟ್ಟರ್, ಬಸವರಾಜಪ್ಪ, ಶರತ್ ಭೋರ್ ಶೆಟ್ಟರ್, ಮೀನಾಕ್ಷಿ, ಮೇಘಾ ಇತರರಿದ್ದರು.

  • ಹುಳ್ಳಿಪ್ರಕಾಶ

LEAVE A REPLY

Please enter your comment!
Please enter your name here