ಸಾರ್ವಜನಿಕ 100 ಹಾಸಿಗೆಗಳ ಆಸ್ಪತ್ರೆ ಸಂಡೂರುನಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ

0
433

ಸಂಡೂರು:ಪೆ:03:- ತಾಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಬಳ್ಳಾರಿ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಅಸಾಂಕ್ರಾಮಿಕ ರೋಗಗಳು/ಸರ್ವೇಕ್ಷಣ ಘಟಕ ಬಳ್ಳಾರಿ,ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಸಂಡೂರು, ತಾಲೂಕು ಸಾರ್ವಜನಿಕ ಆಸ್ಪತ್ರೆ ಸಂಡೂರು ಎನ್.ಪಿ.ಸಿ.ಡಿ.ಸಿ. ಎಸ್ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆಯ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಹಾಗೂ ಬಾಯಿಯ ತಪಾಸಣಾ ಶಿಬಿರವನ್ನು ದಿನಾಂಕ 04-02-2022 ರಂದು ಶುಕ್ರವಾರ ಹಮ್ಮಿಕೊಳ್ಳಳಾಗಿತ್ತು.

ಕಾರ್ಯಕ್ರಮಕ್ಕೆ ಸ್ವಾಗತವನ್ನು – ಬಸಿರ್ ಸಾಬ್ ಎನ್.ಸಿ.ಡಿ ಆಪ್ತ ಸಮಾಲೋಚಕರು ಹಾಗೂ
ಕಾರ್ಯಕ್ರಮಕ್ಕೆ ಚಾಲನೆಯನ್ನು- ಡಾಕ್ಟರ್ ರಾಮಶೆಟ್ಟಿ ಎಸ್ಎಂ ಮುಖ್ಯ ಆಡಳಿತ ವೈದ್ಯಾಧಿಕಾರಿಗಳು ಸಾ.ಆ ಆಸ್ಪತ್ರೆ ಸಂಡೂರು ನೀಡಿದರು.

ಕಾರ್ಯಕ್ರಮದಲ್ಲಿ ಡಾ.ಕಿರಣ್ ಕುಮಾರ್ ಪಿಜಿಷಿಯನ್, ಡಾ. ಅಪ್ರೋಜ್ ಬಾನು ದಂತವೈದ್ಯರು, ಮಂಜುನಾಥ ಎನ್.ಸಿ.ಡಿ ಲ್ಯಾಬ್ ಟೆಕ್ನಿಷನ್, ಮಮತಾ ಎನ್.ಸಿ.ಡಿ ಸ್ಟಾಪ್ ನರ್ಸ್, ನಂದಿನಿ ಗಣಕಯಂತ್ರ ಸಹಾಯಕರು, ಕಿರಣ್ ಕುಮಾರ್ ಲ್ಯಾಬ್ ಟೆಕ್ನಿಷಿಯನ್ ಹಾಗೂ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ ವರ್ಗದವರು, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಸಿಬ್ಬಂದಿ ವರ್ಗದವರು ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು

LEAVE A REPLY

Please enter your comment!
Please enter your name here