ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಜೀವನ ಚರಿತ್ರೆಯ ಬೆಳಕು ಧ್ವನಿವರ್ಧಕ ನಾಟಕ ಪ್ರದರ್ಶನ

0
347

ಕೊಟ್ಟೂರು: ತೇರು ಬಯಲು ಬಸವೇಶ್ವರ ಮಿತ್ರ ಮಂಡಳಿ ಇವರಿಂದ 35ನೇ ವರ್ಷದ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ಶಿವ ಚಾರ್ಯ ಸ್ವಾಮೀಜಿಗಳು ಪೂಜೆಯನ್ನು ನೆರವೇರಿಸಿದರು.

ನಂತರ ಜಗದ್ಗುರು ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿಗಳು ಈ ಗಣೇಶ ಹಬ್ಬವು ಒಂದು ವಿಶಿಷ್ಟವಾದ ಹಬ್ಬವಾಗಿ ಆಚರಿಸುತ್ತೇವೆ ನಮ್ಮ ಹಿಂದೂ ಧರ್ಮದ ಪ್ರಕಾರ 33 ಕೋಟಿ ದೇವರುಗಳು ಇದ್ದರೂ ಸಹ ನಾವು ಮೊದಲು ವಿಘ್ನ ವಿನಾಯಕಗೆ ಮೊದಲ ಪೂಜೆಯನ್ನು ನಡೆಯುತ್ತದೆ ಗಣೇಶನಿಗೆ ನಾನಾ ಹೆಸರುಗಳಿಂದಲೂ ಕರೆಯುತ್ತಾರೆ ಗಣೇಶನ ಒಂದು ಧರ್ಮಕ್ಕೆ ಸೀಮಿತವಾಗದೆ ಎಲ್ಲರೂ ಪೂಜಿಸುವ ದೇವನಾಗಿದ್ದೇನೆ ಯಾವುದೇ ಧರ್ಮ ಜಾತಿ ಎಲ್ಲಾ ಜನರು ಆಚರಣೆ ಮಾಡುತ್ತಾರೆ

ಈ ವರ್ಷವೂ ತೇರು ಬಯಲು ಬಸವೇಶ್ವರ ಮಿತ್ರ ಮಂಡಳಿ ಇವರಿಂದ ನಾಡಿನ ಲಕ್ಷಾಂತರ ದೈವನಾದ ಪವಾಡಪುರುಷ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಜೀವನ ಚರಿತ್ರೆ ಉಳ್ಳ ಧ್ವನಿವರ್ಧಕ ಶ್ರೀ ಗುರು ಕೊಟ್ಟೂರೇಶ್ವರ ಜೀವನ ಚರಿತ್ರೆ ನಾಟಕ ಪ್ರದರ್ಶನ ವಾಗಲಿದೆ ಎಲ್ಲಾ ಭಕ್ತಾದಿಗಳು ಬಂದು ನಾಟಕವನ್ನು ನೋಡಿ ಆ ಗಣೇಶನ ಆಶೀರ್ವಾದ ಪಡೆದುಕೊಳ್ಳಬೇಕು ಎಂದು ಹೇಳಿದರು

ಪಟ್ಟಣದ ಪ್ರತಿಯೊಂದು ಏರಿಯಾದಲ್ಲಿ ಭಕ್ತಿ ಭಾವನೆಯಿಂದ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು ಎಂ ಎಂ ಜೆ ಕಾಲೋನಿಯಲ್ಲಿ ಪುನೀತ್ ರಾಜ್ ಕುಮಾರ್ ಗಣೇಶನ ಸ್ವರ್ಗಕ್ಕೆ ಕರೆದುಕೊಂಡು ಹೋಗುವ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಯಾವುದೇ ಐತಕರ ಘಟನೆ ನಡೆಯಬಾರದು ಎಂದು ನಮ್ಮ ಪೊಲೀಸ್ ಇಲಾಖೆಯು ಸೂಕ್ತ ಬಂದೋಬಸ್ತ್ ನೀಡಲಾಗಿದೆ.

ಈ ಸಂದರ್ಭದಲ್ಲಿ ಅಡಕಿ ಮಂಜುನಾಥ, ಅಟವಾಳಗಿ ಸಂತೋಷ್ ಕುಮಾರ್, ನಟರಾಜ್, ಹಾಗೂ ತೇರು ಬಯಲು ಬಸವೇಶ್ವರ ಮಿತ್ರ ಮಂಡಳಿ ಸದಸ್ಯರು ಮತ್ತು ಭಕ್ತಾದಿಗಳು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here