ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಲ್ಲಿ ಬಲಿದಾನ್ ದಿವಸ ಆಚರಣೆ.

0
121

ಸಂಡೂರು: ಬಿಟ್ರೀಷರ ವಿರುದ್ಧ ಸ್ವಾತಂತ್ರ್ಯ ಪಡೆಯಲು ಚಿಕ್ಕ ವಯಸ್ಸಿನಲ್ಲೇ ತಮ್ಮ ಪ್ರಾಣ ಕಳೆದು ಕೊಂಡ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ದೇಶ ಭಕ್ತಿತನ ಮತ್ತು ಬ್ರಿಟೀಷರ ಎದೆನಡುಗಿಸಿದ ಮಹಾನ್ ಕ್ರಾಂತಿಕಾರಿ ಗುಣಗಳು ಇಂದಿನ ಯುವಕರಲ್ಲಿ ಮೂಡಬೇಕಿದೆ ಎಂದು ಕೆಂದ್ರದ ನಿರ್ದೇಶಕ ಡಾ.ರವಿ.ಬಿ. ಅಭಿಪ್ರಾಯ ಪಟ್ಟರು.
ಅವರು ವಿಜಯ ನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೆಂದ್ರ ನಂದಿಹಳ್ಳಿಯಲ್ಲಿ ಜರುಗಿದ ಬಲಿದಾನ್ ದಿವಸ ಆಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹುತಾತ್ಮರಾದ ಮೂವರು ಮಹಾನ್ ದೇಶಭಕ್ತರ ಹೆಸರಿನಲ್ಲಿ ಸಸಿಗಳನ್ನು ನೆಡಲಾಯಿತು. ಈ ಸಂದರ್ಭದಲ್ಲಿ ಡಾ.ನಾಗನೂರ್, ಪ್ರೋ.ಎಂ. ಖಣದಾಳಿ, ಡಾ.ಶರತ್, ಡಾ.ನಾಯಕರ ಹೊನ್ನೂರ ಸ್ವಾಮಿ, ಡಾ.ಬಸವರಾಜ್ ಹಟ್ಟಿ, ಡಾ.ಗುಡ್ಡಪ್ಪ, ಡಾ.ಮಲ್ಲಯ್ಯ, ಕೆ.ಜಿ.ಸುಮಾ, ಡಾ. ಕರಿಬಸಮ್ಮ, ಲಲಿತಮ್ಮ, ರಮೇಶ್ ರಾಯಚೂರ್, ಕ್ರೀಡಾ ನಿರ್ದೇಶಕ ಶಿವರಾಮ್ ರಾಗಿ, ಪಾಪಯ್ಯ, ಡಾ.ಚೌಡಪ್ಪ, ಬಸವರಾಜ್ ಇಳಗಾನೂರ್ ವಿದ್ಯಾರ್ಥಿಗಳು ಹಾಜರಿದ್ದರು. ಎನ್ನೆಸ್ಸೆಸ್ ಘಟಕ ಹಾಗೂ ಕ್ರೀಡಾವಿಭಾಗದವರು ಕಾರ್ಯಕ್ರಮ ಆಯೋಜಿಸಿದ್ದರು.

LEAVE A REPLY

Please enter your comment!
Please enter your name here