ಶಿಕ್ಷಕರನ್ನು ವಜಾ ಖಂಡಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

0
373

ಕೊಟ್ಟೂರು: ತಾಲೂಕಿನ ಕಂದಗಲ್ಲು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಕಂದಗಲ್ಲು ಗ್ರಾಮದ ಮೊರಾರ್ಜಿ ವಸತಿ ಶಾಲೆಯ ಮಕ್ಕಳಿಂದ ಪ್ರತಿಭಟನೆ.

ಈ ಹಿಂದೆ ಕಂದಗಲ್ಲು ಮುರಾರ್ಜಿ ದೇಸಾಯಿ ಶಾಲೆ ಮತ್ತು ಕಾಲೇಜು ಕೆಲ ವಿದ್ಯಾರ್ಥಿಗಳು ದುಶ್ಚಟದಲ್ಲಿ ತೊಡಗಿದ್ದರು. ಈ ಸುದ್ದಿಯು ಮಾಧ್ಯಮದಲ್ಲಿ ಪ್ರಕಟವಾಗುತ್ತಿದ್ದಂತೆ ಇದರಿಂದ ಎಚ್ಚೆತ್ತುಕೊಂಡ ಮೇಲಾಧಿಕಾರಿಗಳು ಕಂದಗಲ್ಲು ಮೊರಾರ್ಜಿ ದೇಸಾಯಿ ಶಾಲೆಯ ಮತ್ತು ಕಾಲೇಜ್ ಸಿಬ್ಬಂದಿಯಾದ ಪ್ರಿನ್ಸಿಪಾಲ್, ವಾರ್ಡನ್, ದೈಹಿಕ ಶಿಕ್ಷಕರು, ಅಮಾನತ್ತು ಗೊಳಿಸಿದರು ವಜಾ ಗೊಂಡಿರುವ ಶಿಕ್ಷಕರ ವಿಷಯ ತಿಳಿಯುದಂತೆ ವಿದ್ಯಾರ್ಥಿಗಳಿಗೆ ನಿನ್ನೆ ರಾತ್ರಿ ವೇಳೆಯಲ್ಲಿ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರನ್ನು ವಜಾ ಗೊಳಿಸಿದ ಬೆಳಗ್ಗೆ ಯಿಂದ ಪ್ರತಿಭಟನೆಗೆ ಕೈಗೊಂಡರು ನಮ್ಮ ಮೆಚ್ಚಿನ ಶಿಕ್ಷಕರನ್ನು ಮತ್ತೆ ನಮ್ಮ ಶಾಲೆಗೆ ನೇಮಕ ಮಾಡದೆ ಹೋದರೆ ಅಲ್ಲಿವರೆಗೂ ನಮ್ಮ ಪ್ರತಿಭಟನೆಯನ್ನು ಕೈ ಬಿಡುವುದಿಲ್ಲ ಮತ್ತು ತಿಪನ್, ಊಟ, ಯಾವುದನ್ನು ಮಾಡುವುದಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ತೊಡಗಿದರು.

ಈ ಸುದ್ದಿ ತಿಳಿತಿದ್ದಂತೆ ಕೂಡಲೇ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಜಗದೀಶ್ ಕಂದಗಲ್ಲು ಮೋರಾರ್ಜಿ ದೇಸಾಯಿ ಶಾಲೆಗೆ ಭೇಟಿ ನೀಡಿ ಪ್ರತಿಭಟನೆ ತೊಡಗಿದ್ದ ವಿದ್ಯಾರ್ಥಿಗಳ ಸಮಸ್ಯೆಯನ್ನು ಕೇಳಿದರು ನಮ್ಮ ಶಿಕ್ಷಕರನ್ನು ಅಮಾನತ್ತು ಗೊಂಡಿರುವ ಮತ್ತೆ ನಮ್ಮ ಶಾಲೆಗೆ ನೇಮಕ ಮಾಡಬೇಕು ಇಲ್ಲವೆಂದರೆ ಅಲ್ಲಿಯವರೆಗೆ ನಮ್ಮ ಪ್ರತಿಭಟನೆಯನ್ನು ಬಿಡುವುದಿಲ್ಲ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು ನಂತರ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿ ವಜಾ ಗೊಂಡಿರುವ ಶಿಕ್ಷಕರನ್ನು ನೇಮಕ ಮಾಡುತ್ತೇನೆ ಎಂದು ಹೇಳಿದರೂ ವಿದ್ಯಾರ್ಥಿಗಳಿಂದ ಲಿಖಿತ ರೂಪದಲ್ಲಿ ಮನವಿ ಪತ್ರವನ್ನು ಸ್ವೀಕರಿಸಿ ಸಂಬಂಧಪಟ್ಟ ಮತ್ತು ಮೇಲಾಧಿಕಾರಿಗಳ ಜೊತೆ ಮಾತನಾಡುತ್ತೇನೆ ಹಾಗೂ ನಮ್ಮ ಮನವಿಗೆ ಎಂಟು ದಿನದ ಒಳಗಾಗಿ ಶಿಕ್ಷಕರು ಬಾರದೆ ಹೋದರೆ ತಾಲೂಕು ಕಚೇರಿ ಮುಂದೆ ಧರಣಿ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಜಗದೀಶ್, ಕೊಟ್ಟೂರು ಠಾಣೆಯ ಪಿಎಸ್ಐ ವಿಜಯಕೃಷ್ಣ, ಪಂಚಾಯತಿ ಅಧ್ಯಕ್ಷರು, ಕ್ರೈಂ ವಿಭಾಗದ ಪಿಎಸ್ಐ ವಡಕಪ್ಪ , ಕಲ್ಲೇಶ್ , ಪಿ.ಸಿ .ವೀರೇಶ್, ಪಿ ಸಿ ಪಕ್ಕಿರಮ್ಮ ಮತ್ತು ಊರಿನ ಮುಖಂಡರು ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಹಿಂದೆ ಕೆಲ ವಿದ್ಯಾರ್ಥಿಗಳು ದುಶ್ಚಟದಲ್ಲಿ ತೊಡಗಿದ್ದರು ಈ ವಿಷಯ ಮಾಧ್ಯಮದಲ್ಲಿ ಬಿತ್ತಾರವಾಗಿತ್ತು. ಸಂಬಂಧಪಟ್ಟ ವಾರ್ಡನ್, ದೈಹಿಕ ಶಿಕ್ಷಕ, ಮತ್ತು ಪ್ರಿನ್ಸಿಪಾಲರನ್ನು ಅಮಾನತುಗೊಳಿಸಿದ್ದರು ಅವರನ್ನು ಮತ್ತೆ ನಮ್ಮ ಶಾಲೆಗೆ ನೇಮಕ ಮಾಡಬೇಕು ಎಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು ವಿದ್ಯಾರ್ಥಿಗಳಿಂದ ಮನವಿ ಪತ್ರವನ್ನು ಸ್ವೀಕರಿಸಿ ಸಂಬಂಧಪಟ್ಟ ಮೇಲಧಿಕಾರಿ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.

-ಜಗದೀಶ್ ಈಡಗೂರು
ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ,ಕೂಡ್ಲಿಗಿ

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here