ನಗರದ ವಿವಿಧೆಡೆ ಎಬಿಎಆರ್‍ಕೆ ಕಾರ್ಡ್ ವಿತರಣೆ : ಕಾರ್ಯಕ್ರಮಕ್ಕೆ ಚಾಲನೆ.

0
141

ದಾವಣಗೆರೆ:ಫೆ:21: ದಾವಣಗೆರೆ ಮಹಾ ನಗರಪಾಲಿಕೆ ಆವರಣದಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ (ಎಬಿಎಆರ್‍ಕೆ) ಯೋಜನೆಯ ಕಾರ್ಡ್ ಅನ್ನು ಫಲಾನುಭವಿಗಳಿಗೆ ವಿತರಿಸುವ ಕಾರ್ಯಕ್ಕೆ ನಗರಪಾಲಿಕೆ ಮಹಾಪೌರರಾದ ಎಸ್.ಟಿ. ವೀರೇಶ್ ಅವರು ಮಹಾನಗರಪಾಲಿಕೆ ಕಚೇರಿ ಆವರಣದಲ್ಲಿ ಸೋಮವಾರದಂದು ಚಾಲನೆ ನೀಡಿದರು.

ಮಹಾನಗರಪಾಲಿಕೆ ಸಹಯೋಗದೊಂದಿಗೆ ಆರೋಗ್ಯ ಇಲಾಖೆಯು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬ ಸದಸ್ಯರಿಗೆ ಎಬಿಎಆರ್‍ಕೆ ಆರೋಗ್ಯ ಕಾರ್ಡ್ ಅನ್ನು ಸ್ಥಳದಲ್ಲಿಯೇ ಸಿದ್ಧಪಡಿಸಿ ವಿತರಿಸುವ ಕಾರ್ಯಕ್ರಮ ಪಾಲಿಕೆ ಆವರಣದಲ್ಲಿ ಫೆ. 22 ಮತ್ತು 23 ರಂದು ಬೆಳಿಗ್ಗೆ 08 ಗಂಟೆಯಿಂದ ರಾತ್ರಿ 08 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ಮಹಾಪೌರರಾದ ಎಸ್.ಟಿ. ವೀರೇಶ್ ಅವರು ಫಲಾನುಭವಿಗೆ ಎಬಿಎಆರ್‍ಕೆ ಕಾರ್ಡ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಗ್ರಾಮೀಣ ಭಾಗದಲ್ಲಿ ಗ್ರಾಮ ಒನ್, ನಾಗರಿಕ ಸೇವಾ ಕೇಂದ್ರಗಳಲ್ಲಿ ಎಬಿಎಆರ್‍ಕೆ ಕಾರ್ಡ್ ವಿತರಣೆ ಮಾಡಲಾಗುವುದು. ಬಿಪಿಎಲ್ ಪಡಿತರ ಕಾರ್ಡ್ ಹೊಂದಿರುವ ಫಲಾನುಭವಿಗಳಿಗೆ ಒಂದು ವರ್ಷಕ್ಕೆ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ಲಭ್ಯವಿರುತ್ತದೆ. ಎಪಿಎಲ್ ಕಾರ್ಡ್ ಫಲಾನುಭವಿಗಳಿಗೆ ಸಹ ಪಾವತಿ ಆಧಾರದ ಮೇಲೆ ಸರ್ಕಾರಿ ಪ್ಯಾಕೇಜ್ ದರದ ಶೇ. 30 ರಷ್ಟು ಚಿಕಿತ್ಸಾ ವೆಚ್ಚ ಲಭ್ಯವಿದ್ದು ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ 1.5 ಲಕ್ಷ ರೂ. ನಿಗದಿಪಡಿಸಿದೆ. ನಗರಪಾಲಿಕೆಯ ವಿವಿಧ ವಾರ್ಡ್‍ಗಳಲ್ಲಿ ಫೆ. 22 ರಂದು ಎಬಿಎಆರ್‍ಕೆ ಕಾರ್ಡ್ ವಿತರಣೆ ಮಾಡುವ ಸ್ಥಳ ವಿವರ ಈ ಕೆಳಗಿನಂತಿದೆ.

ಎಸ್‍ಎಸ್‍ಎಂ ನಗರ ಉರ್ದು ಶಾಲೆ, ಔಲಿಯಾ ಮಸೀದಿ, ಮುಸ್ತಫ ನಗರ ಮದರಸ, ಮಂಡಕ್ಕಿ ಭಟ್ಟಿ ಕಾರ್ಮಿಕರ ಸಂಘ, ಭಾಷಾ ನಗರ ಜಿಕೆ ಪ್ರೈಮರಿ ಸ್ಕೂಲ್, ಬೀಡಿ ಲೇಔಟ್ ಉರ್ದು ಶಾಲೆ, ವಾರ್ಡ್ ನಂ. 22 ಯಲ್ಲಮ್ಮ ನಗರ ಅಂಗನವಾಡಿ, ವಾರ್ಡ್ ನಂ. 44 ವಿನಾಯಕ ನಗರ ಅಂಗನವಾಡಿ, ವಾರ್ಡ್ ಸಂ. 29, ಎಂಸಿಸಿ-ಎ ಬ್ಲಾಕ್ ದೇವಾಂಗ ಹಾಸ್ಟಲ್, ವಾರ್ಡ್ ಸಂ. 03 ಸಿದ್ದವೀರಪ್ಪ ಬಡಾವಣೆ ಮಹಾದೇವಪ್ಪ ಶಾಲೆ, ವಾರ್ಡ್ ಸಂ. 35, ದುರ್ಗಾಂಭಿಕ ದೇವಸ್ಥಾನ, ವಾರ್ಡ್ ಸಂ. 34 ಸೆಂಟ್ ಜಾನ್ಸ್ ಶಾಲೆ ಮತ್ತು ಬನಶಂಕರಿ ದೇವಸ್ಥಾನ, ಸ್ವಕುಳ ಸಮಾಜ ಹೊಂಡದ ಸರ್ಕಲ್, ಮಲ್ಲಿಕಾರ್ಜುನ ದೇವಸ್ಥಾನ ಬಂಬೂಬಜಾರ್, ರಾಘವೇಂದ್ರಸ್ವಾಮಿ ಮಠ ಪಿ.ಜೆ. ಬಡಾವಣೆ, ಬಾಷಾ ನಗರ 12ನೇ ಕ್ರಾಸ್ ಅಂಗನವಾಡಿ, ಬಾಷಾ ನಗರ 9ನೇ ಕ್ರಾಸ್ ಅಂಗನವಾಡಿ ಕೇಂದ್ರ, ಮೆಹಬೂಬನಗರ ಆಂಜನೇಯ ಶಾಲೆ, ಬಾಷಾನಗರ ಮಿಲ್ಲತ್ ಶಾಲೆ, ಎಸ್‍ಒಜಿ ಕಾಲೋನಿ ಸರ್ಕಾರಿ ಶಾಲೆ, ಆವರಗೆರೆ ಸರ್ಕಾರಿ ಶಾಲೆ, ಕೊಟ್ಟೂರೇಶ್ವರ ಬಡಾವಣೆ ನಿಟುವಳ್ಳಿ ಅಂಗನವಾಡಿ ಕೇಂದ್ರ, ಕೆಟಿಜೆ ನಗರ ಸಮುದಾಯಭವನ 10ನೇ ಕ್ರಾಸ್.

ಸಾರ್ವಜನಿಕರು ಎಬಿಎಆರ್‍ಕೆ ಕಾರ್ಡ್ ಪಡೆಯಲು ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ಅಥವಾ ಎಪಿಎಲ್ ಕಾರ್ಡ್ ದಾಖಲೆಯೊಂದಿಗೆ ಆಗಮಿಸಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಲ್.ಡಿ. ವೆಂಕಟೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here