ಮೀಸಲಾತಿಯ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚಿಸಲು ಅವಕಾಶ ಕೇಳುವ ಶಾಸಕರು ಕ್ಷೇತ್ರದಲ್ಲಿ ಅಲೆಮಾರಿ, ಅರೆಅಲೆಮಾರಿ ಸಮುದಾಯಗಳಿಗೆ ಮಾಡಿರುವ ಕೆಲಸಗಳೇನು?

0
225

ಮೀಸಲಾತಿಯ ಬಗ್ಗೆ ವಿಧಾಸಭೆಯಲ್ಲಿ ಚರ್ಚಿಸಲು ಅವಕಾಶ ಕೇಳಿರುವ ಹಗರಿಬೊಮ್ಮನಹಳ್ಳಿ ಶಾಸಕರಾದ ಭೀಮಾನಾಯ್ಕರು ಸಮಯ ಕೇಳಿ, ಸರ್ಕಾರ ಅವಕಾಶ ಕೊಡದೇ ಇದ್ದುದಕ್ಕೆ ಬೇಸರ ವ್ಯಕ್ತಪಡಿಸಿರುವುದು ಎಷ್ಟು ಸರಿಯೋ, ಅಷ್ಟೇ ಸರಿಯಾಗಿ ಕ್ಷೇತ್ರದಲ್ಲಿರುವ ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳಾದ ಕೊರಚ, ಕೊರಮ, ಕೊರವ ಸಮುದಾಯಗಳಿಗೆ ಮಾಡಿರುವ ಕೆಲಸಗಳೇನು? ಎಂದು ಕ್ಷೇತ್ರದ ಈ ಸಮುದಾಯಗಳು ಪ್ರಶ್ನೆ ಮಾಡುತ್ತಿವೆ.
ಸತತವಾಗಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ಇದುವರೆಗೂ ಈ ಸಮುದಾಯಗಳಿಗೆ ಯಾವ ಮೂಲಭೂತ ಸೌಲಭ್ಯವನ್ನು ಒದಗಿಸಿದ್ದಾರೆ ಎಂದು ಪ್ರಶ್ನೆ ಮಾಡಿದರು. ವಿಧಾನಸಭೆಯಲ್ಲಿ ಮೀಸಲಾತಿಯ ಬಗ್ಗೆ ಚರ್ಚಿಸಲು ಮಾತನಾಡಲು ಉತ್ಸುಕತೆ ತೋರುವ ಶಾಸಕರು, ತಮ್ಮದೇ ಕ್ಷೇತ್ರದಲ್ಲಿರುವ ಅಲೆಮಾರಿ ಸಮುದಾಯಗಳಿಗೆ ಅವರು ಮಂಜೂರು ಮಾಡಿರುವ ಕೆಲಸಗಳ ಬಗ್ಗೆ, ಸೂರಿಲ್ಲದವರಿಗೆ ಮನೆ ಕೊಟ್ಟಿರುವುದಾಗಲಿ, ಸಮುದಾಯಕ್ಕೆ ಸಮುದಾಯ ಭವನಗಳಾಗಲೀ ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನೂ ಮಂಜೂರು ಮಾಡಿಸಲು ಉತ್ಸುಕತೆ ತೋರಿಸಿಲ್ಲದಿರುವುದು ನಮಗೆ ಬೇಸರಗೊಳಿಸಿದೆ.
ಕ್ಷೇತ್ರದಲ್ಲಿ ಸರಿಸುಮಾರು 3 ರಿಂದ 6 ಸಾವಿರ ಜನಸಂಖ್ಯೆ ಹೊಂದಿರುವ ನಮ್ಮ ಜನಾಂಗಕ್ಕೆ ತಂದ ಅನುದಾನ ಎಷ್ಟು? ಎಂದು ಸಮುದಾಯದ ಮುಖಂಡರುಗಳಾದ ಹನುಮಂತಪ್ಪ, ಮಂಜುನಾಥ, ಸಿದ್ದಪ್ಪ, ಚೌಡಪ್ಪ, ಕೊಟ್ರೇಶ್, ಪ್ರಸನ್ನ ತಮ್ಮ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಬಗೆಹರಿಸುವಲ್ಲಿ ಶಾಸಕರು ವಿಫಲರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೊಟ್ಟೂರು ಪಟ್ಟಣ ಪಂಚಾಯಿತಿ ತಮ್ಮ ಪಕ್ಷದ್ದೇ ಅಧಿಕಾರ ಹೊಂದಿದ್ದು, ಎಸ್.ಸಿ. ಎಸ್.ಟಿ. ಜನಾಂಗಕ್ಕೆ ರೂ. 50,000 ಸಹಾಯಧನ ಹಾಗೂ ಓದುವ ವಿದ್ಯಾರ್ಥಿಗಳಿಗೆ ಸಹಾಯಧನ, ಮನೆ ರಿಪೇರಿ ಮಾಡಿಸಿಕೊಳ್ಳಲು ಸಹಾಯಧನ ಇನ್ನಿತರ ಸೌಲಭ್ಯಗಳನ್ನು ಪಡೆಯುವಲ್ಲಿ ನಮ್ಮ ಸಮುದಾಯಗಳಿಗೆ ಈ ಎಲ್ಲ ಸೌಲಭ್ಯ ಸಿಗದೇ ಇರುವುದು ಬೇಸರ ತರಿಸಿದೆ.


ಈ ವರ್ಷದಲ್ಲಿ ಕೊರಚ, ಕೊರಮ, ಕೊರಚ ಜನಾಂಗಕ್ಕೆ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿರುವುದಿಲ್ಲ. ಎಸ್.ಸಿ. ಜನಾಂಗಕ್ಕೆ ಎಲ್.ಐ.ಸಿ. ಪಾಲಿಸಿಗಳನ್ನು ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಸೌಲಭ್ಯ ವಂಚಿತ ಸಮುದಾಯಗಳನ್ನು ಗುರುತಿಸಿ, ಅವರಿಗೆ ಅವಶ್ಯಕವಾಗಿ ಬೇಕಾಗಿರುವ ಸೌಲಭ್ಯಗಳನ್ನು ಒದಗಿಸಲು ಮೇಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ವಹಿಸಲಾಗುವುದು.
ಎ.ನಸರುಲ್ಲಾ, ಮುಖ್ಯಾಧಿಕಾರಿ
ಪಟ್ಟಣ ಪಂಚಾಯಿತಿ, ಕೊಟ್ಟೂರು


ಕೊಟ್ಟೂರಿನಲ್ಲಿ 60 ವರ್ಷಗಳಿಂದ ಜೀವನ ನಡೆಸುತ್ತಿದ್ದು ಸರ್ಕಾರದಿಂದ ಬೆರಳೆಣಿಕೆಯಷ್ಟು ಅನುದಾನ ಪಡೆದಿದ್ದು, ನಮ್ಮ ಸಮುದಾಯವು ಸರ್ಕಾರದಿಂದ ಅನುದಾನ ಪಡೆಯುವಲ್ಲಿ ವಿಫಲವಾಗಿದೆ. ಇನ್ನೂ ಹಲವಾರು ಸರ್ಕಾರದ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ನಮ್ಮ ಸಮುದಾಯಕ್ಕೆ ಯಾವುದೇ ಮೂಲಭೂತ ಸೌಲಭ್ಯ ದೊರೆಯದೇ ವಂಚಿತರಾಗಿದ್ದೇವೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು.

LEAVE A REPLY

Please enter your comment!
Please enter your name here