ಆರಾಧ್ಯ ದೈವ ಶ್ರೀ ಕಾರ್ತಿಕೇಶ್ವರ ಜಾತ್ರೆಯ ಪೂರ್ವಭಾವಿ ಸಭೆ

0
56

ಸಂಡೂರುನ ಆರಾಧ್ಯ ದೈವ ಶ್ರೀ ಕುಮಾರಸ್ವಾಮಿ ಸೇವೆ ಮಾಡಲು ನೀವು ಪುಣ್ಯ ಮಾಡಿರಬೇಕು ಬೆರಳೆಣಿಕೆಯ ದಿನಗಳಲ್ಲಿರುವ ಜಾತ್ರೆಯ ಯಶಸ್ಸಿಗೆ ತಾವೆಲ್ಲ ಕಾರಣಿಕರ್ತರಾಗಿ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶಾಸಕ ಈ ತುಕಾರಾಂ ಅವರು ಅಭಿಪ್ರಾಯಪಟ್ಟರು.

ತಾಲೂಕ ಪಂಚಾಯಿತಿಯ ದಿವಂಗತ ಎಂ. ವೈ.ಘೋರ್ಪಡೆ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ನನಗೀಗ 55 ವರ್ಷ ಬಾಲ್ಯದಿಂದಲೂ
ಶ್ರೀ ಕುಮಾರಸ್ವಾಮಿ ಜಾತ್ರೆಯನ್ನು ಕಣ್ತುಂಬ ನೋಡಿ ಬೆಳೆದಿದ್ದೇನೆ ಅದಲ್ಲದೆ ಎಸ್‌ಸಿಎಸ್ ಶಾಲೆಯಲ್ಲಿ ಹೈಸ್ಕೂಲ್ ಹಾಗೂ ಪದವಿಯನ್ನು ಪಡೆದುಕೊಂಡು ಸತತವಾಗಿ ನಾಲ್ಕು ಬಾರಿ ಶಾಸಕನಾಗಿ ಆಯ್ಕೆ ಆಗಲು ಆಶೀರ್ವಾದ ಮಾಡಿರುವ ಶ್ರೀ ಕುಮಾರಸ್ವಾಮಿ ದೇವರ ಕೊಡುಗೆ ನನ್ನ ಮೇಲೆ ದೊಡ್ಡದಿದೆ ಎಂದು ನುಡಿದರು.

ರಸ್ತೆ ರಿಪೇರಿ, ಸ್ವಚ್ಛತೆ,ಕುಡಿಯುವ ನೀರು, ಆರೋಗ್ಯ ತಪಾಸಣೆ, ಬಸ್ ಸಂಚಾರ ಹಾಗೂ ಸುರಕ್ಷತೆ ದೃಷ್ಟಿಯಿಂದ ಭಕ್ತರಿಗೆ ಅನುಕೂಲವಾಗುವಂತೆ ಎಲ್ಲಾ ಕೆಲಸಗಳನ್ನು ನಿಭಾಯಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ರೂಪರೇಷೆಗಳನ್ನು ತಯಾರಿಸಿಕೊಂಡು ಒಗ್ಗಟ್ಟಾಗಿ ಕೆಲಸ ಮಾಡುವಂತೆ ತಿಳಿಸಿದರು.
ಎಲ್ಲ ಇಲಾಖೆ ಕಚೇರಿಗಳಿಗೆ ದೀಪಾಲಂಕಾರ, ಹೊಸಪೇಟೆ ತೋರಣಗಲ್ಲು ಕೂಡ್ಲಿಗಿ ಒಳಗೊಂಡಂತೆ 50 ಬಸ್ಸುಗಳ ನಿಯೋಜನೆ ಪ್ರಯಾಣಿಕರ ಸುಖಕರ ಪ್ರಯಾಣಕ್ಕೆ ಅವಕಾಶ ಕಲ್ಪಿಸಿ, ಸೂಕ್ತ ಬಂದೋಬಸ್ತ್ ವ್ಯವಸ್ಥೆ, ಮೈನಿಂಗ್ ಲಾರಿಗಳ ಸ್ಥಗಿತ ಹಾಗೂ ಮೂರು ದಿನಗಳ ಕಾಲ ಮಧ್ಯಪಾನ ಮಾರಾಟ ನಿಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಸ್ಮಯೋರ್ ಕಂಪನಿಯ ಅಧಿಕಾರಿ ಸಲೀಂ ರವರು ಮಾತನಾಡಿ, ಐದು ವರ್ಷದಲ್ಲಿ ಎರಡು ಸಾರಿ ಜರುಗುವ ಜಾತ್ರೆ ಕೃತಿಕಾ ನಕ್ಷತ್ರದಂದು ಬರುತ್ತದೆ ಈ ಸಂದರ್ಭದಲ್ಲಿ ದೇವರ ದರ್ಶನ ಪಡೆದವರು ಮುಕ್ತಿಯನ್ನು ಪಡೆಯುತ್ತಾರೆ ಎಂಬ ಪ್ರದೀತಿ ಈ ಭಾಗದಲ್ಲಿ ಇದೆ ಆಂಧ್ರಪ್ರದೇಶ ತಮಿಳುನಾಡು ಮಹಾರಾಷ್ಟ್ರ ಸೇರಿದಂತೆ ರಾಜ್ಯದ ಇತರರಟಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಜಾತ್ರೆಗೆ ಆಗಮಿಸಲಿದ್ದಾರೆ 2018ರಲ್ಲಿ 56,000 ಜನ ದೇವರ ದರ್ಶನ ಪಡೆದಿದ್ದರು ಎಂದು ಮಾಹಿತಿ ನೀಡಿದರು ಈ ಸಲದ ಜಾತ್ರೆಗಾಗಿ ಕಂಪನಿ ವತಿಯಿಂದ ಭಕ್ತಾದಿಗಳಿಗೆ ದೇವಸ್ಥಾನದ ಬಳಿ ಕುಡಿಯುವ ನೀರು ಶೌಚಾಲಯ, ಆರೋಗ್ಯ ತಪಾಸಣೆ, ಪ್ರಸಾದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು 757 ಸ್ವಯಂಸೇವಕರನ್ನು ನೇಮಿಸಲಾಗಿದೆ ಎಂದರು.
ಸ್ಮಯೋರ್ ಸಂಸ್ಥೆಯ ಮಾಲೀಕರಲ್ಲೊಬ್ಬರಾದ ಏಕಾಂಬರ ಘೋರ್ಪಡೆ ಅವರು ಸಭೆಯಲ್ಲಿ ಉಪಸ್ಥಿತರಿದ್ದು ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿದರು.

ತಹಸಿಲ್ದಾರ್ ಅನಿಲ್ ಕುಮಾರ್, ಸಿಪಿಐ ಮಹೇಶ್ ಗೌಡ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಕೃಷ್ಣ ನಾಯಕ್, ಪುರಸಭೆ ಮುಖ್ಯ ಅಧಿಕಾರಿ ಜಯಣ್ಣ, ಅರಣ್ಯ ಇಲಾಖೆ ಅಧಿಕಾರಿಗಳಾದ ದಾದಾ ಕಾಲಂದರ್, ಗಿರೀಶ್, ಸಮಾಜ ಕಲ್ಯಾಣ ಇಲಾಖೆಯ ವೆಂಕಟೇಶ್, ಪರಿಶಿಷ್ಟ ಪಂಗಡ ಇಲಾಖೆ ರವಿಕುಮಾರ್, ಕೆಇಬಿ ಅಭಿಯಂತರ ಉಮೇಶ್ , ಸಿಡಿಪಿಓ ಎಲೆ ನಾಗಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು

ತಾಲೂಕು ಪಂಚಾಯಿತಿ ಇಓ ಅವರು ಎಲ್ಲರನ್ನು ಸಭೆಗೆ ಬರಮಾಡಿಕೊಂಡು ಸ್ವಾಗತ ಮತ್ತು ವಂದನಾರ್ಪಣೆ ಮಾತುಗಳನ್ನು ಆಡಿದರು. ನಂತರ ಶಾಸಕರು ಅಧಿಕಾರಿ ವರ್ಗದವರೊಂದಿಗೆ ಶ್ರೀ ಕುಮಾರಸ್ವಾಮಿ ದೇವಸ್ಥಾನ ಮತ್ತು ತಾತ್ಕಾಲಿಕ ಕಾಮಗಾರಿಗಳ ಸ್ಥಳ ವೀಕ್ಷಣೆಗೆ ತೆರಳಿದರು .

LEAVE A REPLY

Please enter your comment!
Please enter your name here