“ಹಲವು ಸಮಸ್ಯೆಗೆ ಸ್ಪಂದಿಸಿದ ಅಧಿಕಾರಿಗಳು”

0
334

ಕೊಟ್ಟೂರು : ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಲೋಕಾಯುಕ್ತ ಡಿವೈಎಸ್ ಪಿ ಅಯ್ಯನಗೌಡ ಪಾಟೀಲ್ ಹಾಗೂ ಇನ್ಸ್ ಪೆಕ್ಟರ್ ಸುರೇಶ್ ಬಾಬು ಆಗಮಿಸಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿದರು.

ಸ್ವೀಕೃತ ದೂರುಗಳಲ್ಲಿ ಬಹುತೇಕ ಲೊಕೋಪಯೋಗಿ ಇಲಾಖೆಗೆ ಸಂಬಂಧಿಸಿದ್ದು ವಿಶೇಷವಾಗಿತ್ತು. ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆಯುತ್ತಿರುವ ರಾಜಾ ಕಾಲುವೆ ಕಾಮಗಾರಿ ಕಳಪೆ ಹಾಗೂ ಮಂದಗತಿಯಲ್ಲಿ ಸಾಗುತ್ತಿರುವುದಕ್ಕೆ ಡಿಎಸ್ಎಸ್ ಮುಖಂಡ ವಕೀಲ ಹನುಮಂತಪ್ಪ ಹಾಗೂ ಇತರರು ಸಲ್ಲಿಸಿದ ದೂರಿಗೆ ತಕ್ಷಣವೇ ಸ್ಪಂದಿಸಿ ಕಾಮಗಾರಿಯಲ್ಲಿ ಕಳಪೆ ಕಂಡುಬಂದಲ್ಲಿ ಗುತ್ತಿಗೆದಾರರನ್ನು ಬ್ಲಾಕ್ ಲೀಸ್ಟ್ ಗೆ ಸೇರಿಸಿ ಗುತ್ತಿಗೆಯನ್ನು ರದ್ದು ಪಡಿಸಿ ಬೇರೆ ಗುತ್ತಿಗೆದಾರರಿಗೆ ನೀಡುವಂತೆ ಲೊಕೋಪಯೋಗಿ ಅಧಿಕಾರಿ ಖಾಜಾಸಾಬ್ ಇವರಿಗೆ ಸೂಚಿಸಿದರು. ಸ್ಧಳದಲ್ಲಿದ್ದ ಖಾಜಾಸಾಬ್ ಇದಕ್ಕೆ ಸಂಬಂಧಿಸಿದಂತೆ ಮೇಲಿನ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ಮೂಲ ಸೌಕರ್ಯಗಳಿಲ್ಲದೇ ಬಳಲುತ್ತಿದ್ದೇವೆ ಎಂದು ನಿವಾಸಿಯಾದ ಜಯಪ್ರಕಾಶ್ ನಾಯ್ಕ್ ನೀಡಿದ ದೂರಿಗೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ನಸರುಲ್ಲ ಹಾಗೂ ವಾರ್ಡ್ ಸದಸ್ಯೆ ವೀಣಾ ವಿವೇಕಾನಂದಗೌಡರನ್ನು ಕರೆಸಿ ಅಗತ್ಯ ಕ್ರಮ ಕೈಗೊಳ್ಳಲು ತಾಕೀತು ಮಾಡಿದರು.

ಈ ಸಂದರ್ಭದಲ್ಲಿ ವಿವಿಧ ಸಂಘಸಂಸ್ಧೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು

ಕೊಟ್ಟೂರಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಆಗಮಿಸಿದ್ದ ಲೋಕಾಯುಕ್ತ ಅಧಿಕಾರಿಗಳಿಗೆ ಡಿಎಸ್ಎಸ್ ಮುಖಂಡರು ಮನವಿ ಸಲ್ಲಿಸಿದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here