ಪುರಸಭೆಯಿಂದ ಸ್ವಚ್ಚ ಸಂಡೂರು ಅಭಿಯಾನ ಕಾರ್ಯಕ್ರಮ.

0
130

ಸಂಡೂರು:ಡಿ:27:ಸಂಡೂರು ಪಟ್ಟಣದ ಪುರಸಭೆ ಕಾರ್ಯಾಲಯದ ಆವರಣದಲ್ಲಿ ಹಾಗೂ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಸ್ವಚ್ಛ ಸಂಡೂರು ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಳಾಗಿತ್ತು. ಸಂಡೂರು ಪುರಸಭೆ ಕಾರ್ಯಾಲಯವು ಸರ್ಕಾರದ ಮಹತ್ವಕಾಂಕ್ಷಿ ಯೋಜನಕಾರ್ಯಗಳಲ್ಲಿ ಒಂದಾದ ಈ ಹಸಿಕಸ ಮತ್ತು ಒಣಕಸವನ್ನು ಸ್ವಚ್ಚವಾಗಿತ್ತುಕೊಳ್ಳುವ ಕುರಿತು ಸಭೆಯಲ್ಲಿ ಪುರಸಭೆ ಆರೋಗ್ಯಾಧಿಕಾರಿ ಜಿಕೆ.ಮಲ್ಲೇಶ್ ಮಾತನಾಡಿ..

ಮೂಲದಲ್ಲೇ ಕಸ ವಿಂಗಡನೆ ಕುರಿತು ಹಾಗೂ ವಾರ್ಡ್ ಗಳನ್ನು ಹಾಗೂ ಕಲ್ಯಾಣ ಮಂಟಪಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ಸ್ಥಳೀಯ ಯುವಕರನ್ನು, ನಾಗರಿಕರನ್ನು ಪ್ರೇರಿತರಾಗಿ ಒಂದು ತಂಡವನ್ನು ರಚಿಸುವ ಕುರಿತು ಸಾಮನ್ಯ ಸಭೆಯಲ್ಲಿ ಚರ್ಚಿಸಲಾಗಿದೆ ಅದರಂತೆ ಸಭೆಯನ್ನು ಕರೆಯಲಾಗಿದೆ.

ಸ್ಥಳೀಯವಾಗಿ ಪಟ್ಟಣದಲ್ಲಿ 7 ಕಲ್ಯಾಣಮಂಟಪಗಳು ಇವೆ,ಮಂಟಪದಲ್ಲಿ ಒಂದು ಮದುವೆ ನಡೆದಾಗ 300.ಕೆ.ಜಿ.ಪ್ಲಾಸ್ಟಿಕ್ ಬಳಕೆಯಾಗುತ್ತದೆ,ಅದರಂತೆ 7 ಕಲ್ಯಾಣ ಮಂಟಪಗಳಲ್ಲಿ 1 ವರ್ಷಕ್ಕೆ 1200(ಹನ್ನೆರಡು ನೂರು) ಮದುವೆಗಳು ನಡೆಯುತ್ತವೆ ಹಾಗಾಗಿ ನಾವುಗಳೆಲ್ಲರೂ ಸಾಮೂಹಿಕವಾಗಿ ಇದರ ಬಗ್ಗೆ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸೋಣ.

ಇದಕ್ಕೆ ಪರ್ಯಾಯ ವ್ಯವಸ್ಥೆಯಾಗಿ ಮದುವೆ ಮಂಟಪಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಮದುವೆ ಸಮಾರಂಭಗಳಲ್ಲಿ ಊಟಕ್ಕೆ ಬಾಳೆಎಲೆಯನ್ನು ಬಳಸಲು ಮನವರಿಕೆ ಮಾಡೋಣ, ಬಾಳೆಎಲೆಯನ್ನು ಬಳಸುವುದರಿಂದ ಹಸಿಕಸವನ್ನು ಪಡೆಯಬವುದು. ಹಸಿಕಸದಿಂದ ಮನುಷ್ಯರಿಗೆ ಮತ್ತು ಪರಿಸರಕ್ಕೆ ಹಸಿಕಸದಿಂದ ಯಾವುದೇ ರೀತಿಯಾದ ಹಾನಿಯಾಗುವುದಿಲ್ಲ ಎಲ್ಲಾ ಒಳ್ಳೆಯಾದಾಗುತ್ತೆ ಎಂದು ಜಿಕೆ.ಮಲ್ಲೇಶ್ ತಿಳಿಸಿದರು

ಈ ಸಂಧರ್ಭದಲ್ಲಿ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಅನಿತಾ ವಸಂತ್ ಕುಮಾರ್,ಉಪಾಧ್ಯಕ್ಷರಾದ ಈರೇಶ್ ಸಿಂಧೆ, ಮುಖ್ಯ ಅಧಿಕಾರಿಗಳಾದ ಎಚ್.ಇಮಾಮ್ ಸಾಹೇಬ್,ಪರಿಸರ ಅಧಿಕಾರಿ ಅನ್ನಪೂರ್ಣ,ಪ್ರಭು ಸ್ವಾಮಿ,ಆರೋಗ್ಯ ನಿರೀಕ್ಷಕರಾದ ಜಿಕೆ.ಮಲ್ಲೇಶ್, ಗೀತಾ ಕುಮಾರಿ ಮತ್ತು ಕಾರ್ಯಾಲಯದ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here