ಶ್ರೀ ಗುರು ಕೊಟ್ಟೂರೇಶ್ವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಜ್ಯಮಟ್ಟದ ಖೋ-ಖೋ”ಹೊನಲು ಬೆಳಕಿನ ರಾಜ್ಯಮಟ್ಟದ ಖೋ-ಖೋ ಪಂದ್ಯಾವಳಿ”

0
871

ವಿಜಯನಗರ ಜಿಲ್ಲೆಯ ಕೊಟ್ಟೂರು ಧಾರ್ಮಿಕ ಕ್ಷೇತ್ರ ಹಾಗೂ ಶೈಕ್ಷಣಿಕದಲ್ಲಿ ರಾಜ್ಯದಲ್ಲೇ ಹೆಸರು ಮಾಡಿದೆ. ಕ್ರೀಡಾ ವಿಭಾಗದಲ್ಲೂ ಕೊಟ್ಟೂರು ಉನ್ನತ ಸ್ಥಾನವನ್ನು ಏರಲೆಂದು ಕೊಟ್ಟೂರಿನ ಕ್ರೀಡಾಭಿಮಾನಿಗಳು ಆಶಿಸಿದರು.

ಕೊಟ್ಟೂರಿನ ಶ್ರೀ ಗುರು ಕೊಟ್ಟೂರೇಶ್ವರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ರಾಜ್ಯಮಟ್ಟದ ಪುರುಷರ ಹೊನಲು ಬೆಳಕಿನ ಖೋ-ಖೋ ಪಂದ್ಯಾವಳಿಗಳನ್ನು ಈ ತಿಂಗಳ 14, 15, 16 ರಂದು ಮೂರು ದಿನಗಳ ಕಾಲ ಪಟ್ಟಣದ ಸಿ.ಪಿ.ಇಡಿ. ಕಾಲೇಜಿನ ಆವರಣದಲ್ಲಿ ನಡೆಸಲಾಗುವುದುದೆಂದು ಅಧ್ಯಕ್ಷರು ತಿಳಿಸಿದರು. ಶುಕ್ರವಾರ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಪತ್ರಿಕಾ ಗೋಷ್ಠಿ ಕರೆದು ರಾಜ್ಯದ ನಾನಾ ಭಾಗಗಳಿಂದ ಕ್ರೀಡಾಪಟುಗಳು ಆಗಮಿಸುತ್ತಿದ್ದು, ಮುಖ್ಯವಾಗಿ ಬೆಂಗಳೂರು, ಮಂಗಳೂರು, ಮಂಡ್ಯ, ಉಡುಪಿ, ಆಳ್ವಾಸ್ ಇನ್ನೂ ಮುಂತಾದ ಹದಿನಾರು ಜಿಲ್ಲೆಗಳಿಂದ ಪ್ರತಿಷ್ಠಿತ ಕ್ರೀಡಾಪಟುಗಳು ಆಗಮಿಸುತ್ತಿದ್ದು, ಪಂದ್ಯಾಟಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಬಹುಮಾನಗಳೆಂದು ವಿಭಾಗಿಸಲಾಗಿದೆ.

ರಾಜ್ಯಮಟ್ಟದ ಕ್ರೀಡಾ ಬಹುಮಾನಿತರು ಈ ಕಾರ್ಯಕ್ರಮಗಳಿಗೆ ಆಗಮಿಸುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಈ ಪಂದ್ಯಾವಳಿಗಳಿಗೆ ರಾಷ್ಟ್ರೀಯ ರೆಫರಿಗಳು ದೆಹಲಿ, ಬೆಂಗಳೂರಿನಿಂದ ಆಗಮಿಸುತ್ತಿದ್ದು ಕೊಟ್ಟೂರಿಗೆ ಹೆಮ್ಮೆಯ ಗರಿಮೆಯಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪಂದ್ಯಾಟದ ಉದ್ಘಾಟನೆಯನ್ನು ಆಶೋಕ ಭೀಮಾನಾಯ್ಕ ನೆರೆವೇರಿಸಲಿದ್ದು, ಎಂ.ಎಂ.ಜೆ. ಹರ್ಷವರ್ಧನ್ ಅವರು ಉಪಸ್ಥಿತರಿರುತ್ತಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಗುರು ಕೊಟ್ಟೂರೇಶ್ವರ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಶಂಕರ, ಕಾರ್ಯದರ್ಶಿ ನಿಂಗನಾಯ್ಕ, ಖಜಾಂಚಿ ಎ.ಎಂ.ಕಾರ್ತಿಕ್, ಡಿ.ಗಿರೀಶ್, ಗುರುಬಸವರಾಜ(ಕಿಚ್ಚ) ವರುಣ್, ಕಾರ್ತಿಕ್ (ಅಪ್ಪು), ಕೋಟೇಶ್ ಇನ್ನು ಮುಂತಾದ ಕ್ರೀಡಾಪಟುಗಳು ಹಾಜರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here