ಆಯುಷ್ಮಾನ್ ಭಾರತ್ ಹೆಲ್ತ್ ಅಕೌಂಟ್ ಕಾರ್ಡ್ (ಅಭಾ) ಉಚಿತ ನೊಂದಣಿ ಗ್ರಾಮ ಒನ್ ನಾಗರೀಕ ಸೇವಾ ಕೇಂದ್ರದಲ್ಲಿ,

0
833

ಸಂಡೂರು:ಆ:17:-ತಾಲೂಕಿನ ತೋರಣಗಲ್ಲು ಗ್ರಾಮದ “ಗ್ರಾಮ ಒನ್” ನಾಗರೀಕ ಸೇವಾ ಕೇಂದ್ರದಲ್ಲಿ ಉಚಿತ ಮತ್ತು ಸರಳವಾಗಿ ನೊಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ನೊಂದಣಿ ಮಾಡಿಕೊಳ್ಳಲು ಸಾರ್ವಜನಿಕರು ತಮ್ಮ ಆಧಾರ್ ಕಾರ್ಡ್, ನೊಂದಾಯಿತ ಮೊಬೈಲ್ ನಂಬರ್,ಮತ್ತು ರೇಷನ್ ಕಾರ್ಡನೊಂದಿಗೆ ಹತ್ತಿರದ ಕೇಂದ್ರಕ್ಕೆ ಬೇಟಿ ಕೊಟ್ಟು ಸರಳವಾಗಿ ನೊಂದಣಿ ಮಾಡಿಸ ಬಹುದು ಎಂದು ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು,

ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಬಿ.ಪಿ.ಎಲ್ ಕಾರ್ಡ್ ನ ಆಧಾರದ ಅಭಾ ಕಾರ್ಡ್ ನಿಂದ ವಾರ್ಷಿಕ ಐದು ಲಕ್ಷ ರೂಪಾಯಿಗಳ ವರೆಗಿನ ತುರ್ತು ಆರೋಗ್ಯ ಸೇವೆಗಳು ಲಭ್ಯವಿದ್ದು, ಎ.ಪಿ.ಎಲ್ ಕಾರ್ಡ್ ನ ಆಧಾರದಿಂದ ವಾರ್ಷಿಕ ಶೇಕಡ ಮೂವತ್ತರಷ್ಟು ಅಂದರೆ ಒಂದು ಲಕ್ಷ ಐವತ್ತು ಸಾವಿರ ರೂಪಾಯಿಗಳ ವರೆಗೆ ಉಚಿತ ತುರ್ತು ಆರೋಗ್ಯ ಸೇವೆಗಳು ದೊರೆಯಲಿವೆ ಎಂದು ತಿಳಿಸಿದರು, ಸರ್ಕಾರ ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಅಭಾ ದೊರೆಯುವಂತೆ ಮಾಡುವಲ್ಲಿ ಆರೋಗ್ಯ ಇಲಾಖೆ ಸರ್ವ ಪ್ರಯತ್ನಗಳು ಕೈಗೊಂಡಿದೆ, ಸಾರ್ವಜನಿಕರು ಉತ್ತಮ ಸಹಕಾರದೊಂದಿಗೆ ಇದರ ಸದುಪಯೋಗ ಪಡಿಸಿಕೊಳ್ಳಲು ವಿನಂತಿ ಮಾಡಿದರು,

ತಕ್ಷಣದಲ್ಲೇ ಬಿ.ಮನೋಹರ್ ಅವರ ವಿವರಗಳನ್ನು ಅಭಾ ಕಾರ್ಡ್ ಗೆ ನೊಂದಣಿ ಮಾಡಿಕೊಂಡು ಎನ್ರೋಲ್ ಮೆಂಟ್ ಪ್ರತಿಯನ್ನು ವಿತರಿಸಲಾಯಿತು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ವೀರೇಶ್, ಶಿಕ್ಷಕ ಷಣ್ಮುಖಪ್ಪ, ಶಿವಾನಂದ್ , ರಾಮಾಂಜಿನಮ್ಮ, ಮೀರಾ ಕುಮಾರಿ,ಮಹಂತೇಶ್, ಶಿವಕುಮಾರ್, ಮಹೇಶ್,ದೀಕ್ಷಾ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here