ನರೇಗಾ ಕೂಲಿ ಕಾರ್ಮಿಕರಿಗೆ ವಿಮಾ ಖಾತ್ರಿ:ಜಿಪಂ ಸಿಇಒ ಕೆ.ಆರ್.ನಂದಿನಿ

0
89

ಬಳ್ಳಾರಿ,ಡಿ.04 : ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಪ್ರದೇಶದ ಅಕುಶಲ ಕಾರ್ಮಿಕರನ್ನೂ ಸರ್ಕಾರದ ಯೋಜನೆಯ ಮುಖ್ಯವಾಹಿನಿಗೆ ತರಲು ವಿವಿಧ ವಿಮಾ, ಸೌಲಭ್ಯಗಳಡಿ ಸವಲತ್ತು ಕಲ್ಪಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ವಿವಿಧ ವಿಮಾ ಯೋಜನೆಯಡಿ ಅರ್ಹ ನೊಂದಾಯಿತ ಕೂಲಿ ಕಾರ್ಮಿಕರಿಗೆ ವಿಮಾ ಖಾತ್ರಿ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರದ ನಾನಾ ವಿಮೆ ಮತ್ತು ಆರೋಗ್ಯ ಯೋಜನೆಗಳ ಸೌಲಭ್ಯಗಳಲ್ಲಿ ನೊಂದಣಿ ಮಾಡಿಕೊಳ್ಳಬೇಕು ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ಅವರು ಮನವಿ ಮಾಡಿದ್ದಾರೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನೆ (Pಒಎಎಃಙ): ಜೀವಕ್ಕಿದೆ ಜೀವ ವಿಮೆ ಎಂಬ ಘೋಷವ್ಯಾಕ್ಯದಡಿ ಈ ಯೋಜನೆಯಲ್ಲಿ ಕೂಲಿ ಕಾರ್ಮಿಕರು ವಾರ್ಷಿಕ ರೂ.330ಗಳ ಕಂತು ಪಾವತಿಸಿ ರೂ.2ಲಕ್ಷ ಜೀವ ವಿಮೆ ಸೌಲಭ್ಯ ಪಡೆಯಬಹುದಾಗಿದೆ. ಗ್ರಾಮೀಣ ಪ್ರದೇಶದ 18ರಿಂದ 50 ವಯೋಮಿತಿಯ ಫಲಾನುಭವಿಗಳಿಗೆ ಈ ಸೌಲಭ್ಯ ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ (PಒSಃಙ): ಅಪಘಾತ ಸಂದರ್ಭ ಆಪದ್ಬಾಂಧವ ಎಂಬ ಘೋಷವ್ಯಾಕ್ಯದ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ಕೂಲಿ ಕಾರ್ಮಿಕರು ವಾರ್ಷಿಕ ರೂ.12ಗಳಂತೆ ಕಂತು ಪಾವತಿಸುವ 18ರಿಂದ 70 ವಯೋಮಾನದ ವ್ಯಕ್ತಿಗಳಿಗೆ ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದಲ್ಲಿ ರೂ.2 ಲಕ್ಷ ಹಾಗೂ ಭಾಗಶಃ ಅಂಗವೈಕಲ್ಯಕ್ಕೆ ರೂ.1ಲಕ್ಷದವೆರೆಗೆ ವಿಮೆ ಸೌಲಭ್ಯ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.
ಕಾರ್ಮಿಕರು ಸ್ವಯಂ ಆಗಿ ಇ-ಶ್ರಮ್ ಪೋರ್ಟ್‍ನಲ್ಲಿ (eshಡಿಚಿm.gov.iಟಿ) ಉಚಿತವಾಗಿ ನೊಂದಾಯಿಸಬಹುದಾಗಿದ್ದು, ಗುರುತಿನ ಚೀಟಿಯನ್ನು ನೊಂದಾಯಿತ ಸ್ಥಳದಲ್ಲೇ ಪಡೆಯಬಹುದಾಗಿದೆ ಎಂದರು.
ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (Pಒಎಂಙ):ಪ್ರಧಾನ ಮಂತ್ರಿ ಆರೋಗ್ಯ ಯೋಜನೆಯಲ್ಲಿ ನೊಂದಾಯಿತ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಅರ್ಹ ಕುಟುಂಬಗಳಿಗೆ ವಾರ್ಷಿಕ ರೂ.5 ಲಕ್ಷದವರೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುವುದು. ಇದಕ್ಕೆ ಯಾವುದೇ ಕಂತು ಪಾವತಿಸುವಂತಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಯೋಜನೆಗಳ ಲಾಭ ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯತಿಯ ಪಿಡಿಓಗಳು, ಸಾಮಾನ್ಯ ಸೇವಾ ಕೇಂದ್ರ(ಅSಅ)ಗಳಲ್ಲಿ ಹಾಗೂ ಸ್ಥಳೀಯ ಬ್ಯಾಂಕುಗಳನ್ನು ಸಂಪರ್ಕಿಸಿ ನೊಂದಾಯಿಸಿಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here