ಯಶವಂತನಗರ 6ನೇ ಅಂಗನವಾಡಿ ಕೇದ್ರದಲ್ಲಿ ಮಕ್ಕಳಿಗೆ ಮೊಟ್ಟೆ ಹಾಗೂ ಪೌಷ್ಟಿಕಾಂಶ ಧಾನ್ಯಗಳ ವಿತರಣೆ

0
145

ಯಶವಂತನಗರದ 6ನೇ ಅಂಗನವಾಡಿ ಕೇಂದ್ರದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಹನುಮಂತಪ್ಪ, ಸುರೇಶ್, ಬುಡೇನ್, ಮಾಜಿ ಉಪಾಧ್ಯಕ್ಷರಾದ ನಬಿಸಾಬ್ ಅವರುಗಳು ಕೇಂದ್ರದಲ್ಲಿ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳಿಗೆ 12 ಮೊಟ್ಟೆಗಳನ್ನು ವಿತರಿಸಲಾಯಿತು
ಹಾಗೂ 6 ತಿಂಗಳಿಂದ 3 ವರ್ಷದ ಮಕ್ಕಳಿಗೆ ಪುಷ್ಟಿ, ಹಾಲು, ಸಕ್ಕರೆ,ಬೆಲ್ಲ ವಿತರಿಸಿದರು.

3 ರಿಂದ 6 ವರ್ಷದ ಮಕ್ಕಳಿಗೆ ಅಕ್ಕಿ, ಕಡ್ಲೆಕಾಳು,ಶೇಂಗಾಬೀಜ, ಹಾಲು, ಸಕ್ಕರೆ, ಬೆಲ್ಲ,ಸಾಂಬರ್ ಪುಡಿ, ತೊಗರಿ ಬೇಳೆ, ಗೋಧಿ,8 ಮೊಟ್ಟೆಗಳನ್ನು ವಿತರಿಸಲಾಯಿತು
ಹಾಗೂ ಗರ್ಭಿಣಿ ಬಾಣಂತಿಯರಿಗೆ ಅಕ್ಕಿ,ತೊಗರಿಬೇಳೆ, ಶೇಂಗಾ, ಸಕ್ಕರೆ ಹೆಸರು ಕಾಳು,ಸಾಂಬಾರ್ ಪುಡಿ,ಬೆಲ್ಲ, ಮತ್ತು ಎಲ್ಲರಿಗೂ 25 ಮೊಟ್ಟೆಗಳನ್ನು ವಿತರಣೆ ಮಾಡಲಾಯಿತು.

ಈ ವಿತರಣೆಯ ಕಾರ್ಯಕ್ರಮವನ್ನು ಸ್ಥಳೀಯ ಯಶವಂತನಗರ ಗ್ರಾಮ ಪಂಚಾಯಿತಿಯ ಸದಸ್ಯರ ಮುಖಾಂತರ ಅಂಗನವಾಡಿ ಕಾರ್ಯಕರ್ತೆಯಾದ ಟಿ.ಕವಿತಾ ಮತ್ತು ಸಹಾಯಕಿಯಾದ ಎಸ್.ಬೇಗಂ ವಿತರಿಸಿದರು.ಕೋವಿಡ್ ಲಸಿಕೆ ಹಾಕಿಸಿ ಕೊಳ್ಳುವ ಕುರಿತು ಗ್ರಾಮ ಪಂಚಾಯಿತಿಯ ಸದಸ್ಯರಾದ ಹನುಮಂತಪ್ಪ, ಬುಡೇನ್, ಅಂಗನವಾಡಿ ಕಾರ್ಯಕರ್ತೆಯಾದ ಟಿ.ಕವಿತಾ ಮತ್ತು ಆಶಾ ಕಾರ್ಯಕರ್ತೆಯಾದ ನಿರ್ಮಲ ರವರು ಮನೆಮನೆಗಳಿಗೆ ಹೋಗಿ ಕೋವಿಡ್ ಲಸಿಕೆ ಹಾಕಿಸಿ ಕೊಳ್ಳುವಂತೆ ಮನವೊಲಿಸಲಾಯಿತ್ತು

LEAVE A REPLY

Please enter your comment!
Please enter your name here