ಯಡಿಯೂರಪ್ಪನವರ ಕೈ ಬಲ ಪಡಿಸಲು ಸಂಘಟನೆ ಅವಶ್ಯ; ಶ್ರೀನಿವಾಸ ಪಾಟೇಲ್

0
91

ಸಂಡೂರು : ನ 6:- ಇಂದು ನಡೆಯುತ್ತಿರುವುದು ಸಾಮಾನ್ಯ ಪ್ರತಿನಿಧಿಗಳ ಕಾರ್ಯಕ್ರಮ. ಸಾಮಾನ್ಯ ಪ್ರತಿನಿಧಿಗಳ ಕಾರ್ಯಕ್ರಮಕ್ಕೆ ನ್ಯಾಯ ಒದಗಿಸಬೇಕಾದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ನೂತನ ಘಟಕದ ಪದಾಧಿಕಾರಿಗಳು ಸಂಘಟನೆ ಮಾಡುವುದರ ಮೂಲಕ ಬಲ ಪಡಿಸಬೇಕಾಗಿದೆ ಪದಾಧಿಕಾರಿಗಳು ಸದಾ ಜನಸಾಮಾನ್ಯರೋಡನೆ ಬೆರೆತು ಅವರ ತಾಪತ್ರೆಯಗಳಿಗೆ ಸಾಧ್ಯವಾದ ಮಟ್ಟಿಗೆ ಪರಿಹಾರ ಮಾರ್ಗವನ್ನು ಸೂಚಿಸಿ ಪಕ್ಷವನ್ನು ಬಲಪಡಿಸಬೇಕಾಗಿರುವುದು ಅತೀ ಅವಶ್ಯ. ಪದಾಧಿಕಾರಿಗಳು, ಕಾರ್ಯಕರ್ತರೇ, ಸಂಘಟನೆಗೆ ಶಕ್ತಿ ತುಂಬಲು ಸಾಧ್ಯ. ನಿಮ್ಮ ಯಾವುದೇ ಉತ್ತಮ ಕೆಲಸಕ್ಕೆ ನನ್ನ ಸಹಕಾರ ಖಂಡಿತ ಎಂದು ಕರ್ನಾಟಕ ಪ್ರದೇಶ ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನಿ ಸಂಘದ ರಾಜ್ಯಾಧ್ಯಕ್ಷ ಬಿ. ಶ್ರೀನಿವಾಸ್ ಪಾಟೀಲ್ ರವರು ತಿಳಿಸಿದರು.

ಅವರು ಪಿ.ಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಕರ್ನಾಟಕ ಪ್ರದೇಶ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಸಂಘದ ಸಂಡೂರು ಘಟಕದ ನೂತನ ಪದಾಧಿಕಾರಿಗಳ ಸಂಘವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಅವರು ಮುಂದುವರೆದು ಇಂದಿನಿಂದಲೇ ಪ್ರತಿಯೋರ್ವ ಕಾರ್ಯಕರ್ತರು ಪದಾಧಿಕಾರಿಗಳು ಅವರು ಮಾಡಿದ ಸಾಧನೆಯ ಕೆಲಸಗಳನ್ನು ಜನರಿಗೆ ಮನೆ ಮನೆಗೆ ಹೋಗಿ ತಲುಪಿಸುವ ಕೆಲಸ ಭರದಿಂದ ಆಗಬೇಕಾಗಿದೆ ಎಂದು ತಿಳಿಸಿದರು.

ಗೌರವಾಧ್ಯಕ್ಷ ಕೆ.ಎಸ್. ಕುಮಾರಸ್ವಾಮಿ ಮಾತನಾಡಿ ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಒಂದು ಶಕ್ತಿ. ತಾಪತ್ರಯದಿಂದ ಬಿಜೆಪಿ ಪಕ್ಷವನ್ನು ಕಟ್ಟಿ ಹೆಮ್ಮರವಾಗಿ ಬೆಳಸಿದ್ದಾರೆ. ಆಗಿನ ಕಾಲದಲ್ಲಿ ಕೇವಲ ಎರಡು ಅಥವಾ ಮೂರು ಶೀಟುಗಳು ಕಟ್ಟಿಕೊಂಡು ಪಕ್ಷವನ್ನು ಕಟ್ಟಿದ ಮಾಜಿ ಮುಖ್ಯಮಂತ್ರಿಗಳು ಇಂದು 110 ಶೀಟುಗಳನ್ನು ತರುವುದರ ಮೂಲಕ ಬಿಜೆಪಿ ಪಕ್ಷವನ್ನು ಬೆಳೆಸಿ ಇಡೀ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಮೆಚ್ಚುಂತಾಹ ಕೆಲಸಗಳನ್ನು ಮಾಡಿ ಸಾಧನೆಮಾಡಿ ಜನರಿಗೆ ತೋರಿಸಿ ಈ ಇಳಿವಯಸ್ಸಿನಲ್ಲಿ ಕೂಡ ಪಕ್ಷವನ್ನು ಕಟ್ಟಲು ಶ್ರಮಿಸುತ್ತಿದ್ದಾರೆ ನಾವೆಲ್ಲರೂ ಅವರ ಕೈ ಜೋಡಿಸಬೇಕಾಗಿರುವುದು ಅತೀ ಅವಶ್ಯವಾಗಿದೆ ಎಂದು ತಿಳಿಸಿದರು.

ನೂತನ ಘಟಕದ ಅಧ್ಯಕ್ಷ ಹಡಪದ ಅಂಬರೀಶ್ ಮಾತನಾಡಿ ನನ್ನ ಶಕ್ತಿ ಇವರುವವರೆಗೂ ನಿಷ್ಠೆಯಿಂದ ಪ್ರಾಮಾಣಿಕವಾಗಿ ನನ್ನ ಕರ್ತವ್ಯವನ್ನು ನಿರ್ವಹಿಸುತ್ತೇನೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎನ್ನುವ ಬಸವ ಸಿದ್ಧಾಂತವನ್ನು ಒಪ್ಪಿಕೊಂಡು ಸಿದ್ಧಾಂತದ ಆದಾರದ ಮೇಲೆಯೇ ಪಕ್ಷವನ್ನು ಬೆಳಸಿದ್ದಾರೆ ಅಭಿಮಾನಿ ಬಳದವರು ಪಕ್ಷಕ್ಕೆ ನಿಷ್ಠೆತೋರಿ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕಾಗಿದೆ ಎಂದು ತಿಳಿಸಿದರು.

ಲಕ್ಷ್ಮೀಪುರದ ಶರಣಪ್ಪ ಮಾತನಾಡಿ ನಾವೆಲ್ಲರೂ ಒಂದೇ ಎನ್ನುವ ಗುರಿ ಇಟ್ಟುಕೊಂಡು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ ಕೈ ಬಲ ಪಡಿಸಬೇಕಾಗಿದೆ. ನಾನು ಶಿಸ್ತಿನ ಶಿಪಾಯಿಗಳಾಗಿ ಸದಾ ಜನಸ್ಪಂದನೆಯಲ್ಲಿದ್ದು ಪಕ್ಷ ಮತ್ತು ಸಮಾಜ ಸೇವೆ ಮಾಡಬೇಕಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಅಬ್ದುಲ್ ಮುನಾಫ್, ಬಪ್ಪಕಾನ್ ಆನಂದ, ಮಾಳ್ಗಿ ರಾಮಪ್ಪ, ಸುರೇಶ್ ಕೆ, ಬಳ್ಳಿಕಟ್ಟಿ ಕುಮಾರಸ್ವಾಮಿ, ಸಹಕಾರ್ಯದರ್ಶಿ ಹುಳ್ಳಿ ಸುಬ್ಬಯ್ಯ ಅಲ್ಲದೇ ತಾಲೂಕು ಯುವ ಮೊರ್ಚ ಅಧ್ಯಕ್ಷ ಕೊಂಚಿಗೇರಿ ಹರೀಶ್, ಸದಸ್ಯರಾದ ಗೌಳ್ಯೇರ್ ಶತ್ಯೆಪ್ಪ, ಕೊಟಿಗಿ ಕೊಟ್ರೇಶ್, ಅವಿನಾಶ್ ಅವರ ಆಯ್ಕೆಯನ್ನು ರಾಜ್ಯಾಧ್ಯಕ್ಷರು ಪ್ರಕಟಿಸಿದರು. ಪ್ರದಾನಕಾರ್ಯದರ್ಶಿ ಎ. ಜಂಬಣ್ಣನವರು ನಿರೂಪಿಸಿ ಸ್ವಾಗತಿಸಿ ವಂಧಿಸಿದರು. ದೇವರಾಜ, ಉಂತಕಲ್ ವೀರೇಶ್, ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here