ಬಾಬಾ ನಗರದ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ “ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ” ಕುರಿತು ಅರಿವು ಕಾರ್ಯಕ್ರಮ,

0
28

ಸಂಡೂರು: ಜ:30: ತಾಲೂಕಿನ ಕುರೇಕುಪ್ಪ ಪುರಸಭೆ ವ್ಯಾಪ್ತಿಯ ತೋರಣಗಲ್ಲು ರೈಲ್ವೆ ನಿಲ್ದಾಣದ ಬಾಬಾನಗರದ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾದ “ಹುತಾತ್ಮರ ದಿನಾಚರಣೆ” ಹಾಗೂ ವಿಶ್ವ ಕುಷ್ಠರೋಗ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ “ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಕುಷ್ಠರೋಗವನ್ನು ನಿರ್ಮೂಲನೆ ಮಾಡಿ ಕುಷ್ಠರೋಗಕ್ಕೆ ಇರುವ ಕಳಂಕವನ್ನು ದೂರವಾಗಿಸಲು ಸರ್ವರೂ ಕೈಜೋಡಿಸಬೇಕಿದೆ ಎಂದು ಅವರು ತಿಳಿಸಿದರು, ಹಾಗೇಯೆ ಮಾತು ಮುಂದುವರೆಸುತ್ತಾ ಕ್ವಿಟ್ ಇಂಡಿಯಾ ಚಳುವಳಿಯ ಗಾಂಧಿಯವರ ಯರವಾಡ ಜೈಲು ವಾಸ ಸಂದರ್ಭದಲ್ಲಿ ಕಂಡ ಸಂಸ್ಕೃತ ವಿದ್ವಾಂಸರಾದ ಪರ್ಚುರೆ ದತ್ತಾತ್ರೇಯ ಶಾಸ್ತ್ರೀಗಳ ಪರಿಚಯ ಮತ್ತು ಅವರು ಕುಷ್ಠರೋಗ ಹೊಂದಿರುವ ಮತ್ತು ಅಸ್ಪೃಶ್ಯತೆ, ಜೈಲಿನಿಂದ ಹೊರಬಂದ ನಂತರ ರೋಗದ ಉಲ್ಬಣತೆಯಿಂದ ಶಾಸ್ತ್ರೀಗಳು ಜನರ ಸಂಪರ್ಕ ತೊರೆದು ದೂರಹೋಗುವ ಸನ್ನಿವೇಶ, ಮಹಾತ್ಮಾ ಗಾಂಧಿಯವರು ಅವರನ್ನು ಸೇವಾಶ್ರಮದಲ್ಲಿ ಉಳಿಸಿಕೊಂಡು ಆರೈಕೆ ಮಾಡಿದ ಸನ್ನಿವೇಶಗಳನ್ನು ಮೆಲಕು ಹಾಕುತ್ತಾ ಮಹಾತ್ಮಾ ಗಾಂಧಿಯವರ ಪುಣ್ಯ ಸ್ಮರಣೆಯನ್ನು ನೆನೆಯುತ್ತ ಹುತಾತ್ಮರ ದಿನಾಚರಣೆ ಅಂಗವಾಗಿ ಎರಡು ನಿಮಿಷಗಳ ಕಾಲ ಮೌನ ಆಚರಿಸಲಾಯಿತು,
ಹಾಗೂ ಅವರು ಕಂಡ ಕನಸು “ಕುಷ್ಠರೋಗ ಮುಕ್ತ ದೇಶ” ರೂಪಿಸಲು ಇಲಾಖೆ ಕೈಗೊಂಡಿರುವ ಜಾಗೃತಿ ಮಹತ್ವವನ್ನು ತಿಳಿಸಿದರು,

ಯಾರಿಗಾದರೂ ತಿಳಿ ಬಿಳಿ ತಾಮ್ರ ವರ್ಣದ, ಮತ್ತು ಸ್ಪರ್ಶ ಜ್ಞಾನವಿಲ್ಲದ ಯಾವುದೇ ಮಚ್ಚೆಗಳು ಇದ್ದಲ್ಲಿ, ಕಣ್ಣು ರೆಪ್ಪೆ ಮುಚ್ವಲು ಸಾಧ್ಯವಿಲ್ಲದೇ ಇದ್ದರೆ, ಕೈಕಾಲುಗಳು ಜೋಮು ಹಿಡಿಯುತ್ತಿದ್ದರೆ, ಅಲ್ನಾರ್ ನರಗಳು ಗಡಸುತನ ಹೊಂದಿದ್ದರೆ, ಬಹಳ ದಿನಗಳಿಂದ ವಾಸಿಯಾಗದ ಗಾಯಗಳು ಇದ್ದರೆ ಇವು ಕುಷ್ಠರೋಗದ ಲಕ್ಷಗಳು ತಕ್ಷಣ ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಿದರು,

ಪರೀಕ್ಷೆಯಲ್ಲಿ ದೃಡಪಟ್ಟರೆ ಅಂತವರಿಗೆ 6 ತಿಂಗಳಿಂದ 1 ವರ್ಷದ ಪೂರ್ಣ ಚಿಕಿತ್ಸೆ ನೀಡಿ ಗುಣಪಡಿಸ ಬಹುದಾಗಿದೆ, ಕುಷ್ಠರೋಗ ಮುಕ್ತ ರಾಷ್ಟ್ರ ಮಾಡಲು ಸರ್ವರೂ ಕೈ ಜೋಡಿಸಬೇಕೆಂದು ಅವರು ತಿಳಿಸಿದರು,
ನಂತರ ಕುಷ್ಠರೋಗಕ್ಕೆ ಅಂಟಿಕೊಂಡಿರುವ ಕಳಂಕ ಹಾಗೂ ತಾರತಮ್ಯ ಹೊಗಲಾಡಿಸಿ ಅವರ ಆತ್ಮ ಗೌರವಕ್ಕೆ ಧಕ್ಕೆ ತರದೇ ನಡೆದು ಕೊಳ್ಳುವ ಕುರಿತು ಪ್ರತಿಜ್ಞೆಯನ್ನು ಪ್ರಶಾಂತ್ ಅವರು ಬೋಧಿಸಿದರು,

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ಶರಣಬಸವ,ಸಮಾಲೋಚಕ ಪ್ರಶಾಂತ್ ಕುಮಾರ್, ಆರೋಗ್ಯ ಸುರಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ, ಆಶಾ ಕಾರ್ಯಕರ್ತೆಯರಾದ ಹುಲಿಗೆಮ್ಮ,ಆಶಾ,ಪದ್ಮಾ,ವೆಂಕಟಲಕ್ಷ್ಮಿ, ಮತ್ತು ಶಾಲೆಯ ವಿದ್ಯಾರ್ಥಿಗಳು ಹಾಗೂ ಸಾಹಸ್ ಸಂಸ್ಥೆಯ ಸಿಬ್ಬಂದಿ ಮಂಜುನಾಥ್,ಪಾರ್ವತಿ,ಮೋಹರ್ ರಾಜ್ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here