ಕೋವಿಡ್ ನಿಂದ ಸತ್ತವರ ಹೆಣದ ರಾಶಿಮೇಲೆ ಹಣ ಮಾಡುವ ಬಿಜೆಪಿ ಸರ್ಕಾರ ನಮಗೆ ಬೇಕೇ.? ಮಾಜಿ ಶಾಸಕ ಸಂತೋಷ್ ಲಾಡ್

0
76

ಸಂಡೂರು:ಜುಲೈ:21: ಕೋವಿಡ್ ನಿಂದ ಸತ್ತ ಕುಟುಂಬಕ್ಕೆ ಲಕ್ಷ ಪರಿಹಾರ ಕೊಡಿ ಎಂದು ಸುಪ್ರೀಂ ಕೋರ್ಟ ಹೇಳುವವರೆಗೂ ಸಹ ಕೊಡದ ಸರ್ಕಾರದ ನೀತಿ ನಾಚಿಕೆಗೇಡಿನ ನೀತಿಯಾಗಿದೆ, ಬಿಜೆಪಿಯ ಮೋದಿ ಸರ್ಕಾರದಿಂದ ಜನರು ಬೇಸತ್ತು ಹೋಗಿದ್ದಾರೆ ಎಂದು ಕಾಂಗ್ರೇಸ್ ಪಕ್ಷದ ಮಾಜಿ ಸಚಿವ ಸಂತೋಷ್ ಎಸ್ ಲಾಡ್ ಟೀಕಿಸಿದರು.

ಅವರು ಸಂಡೂರು ಪಟ್ಟಣದ ತಮ್ಮ ಕಛೇರಿಯ ಅವರಣದಲ್ಲಿ ತಾಲೂಕು ಕಾಂಗ್ರೇಸ್ ಕಾರ್ಯಕರ್ತರು ಹಮ್ಮಿಕೊಂಡಿದ್ದ ಕೋವಿಡ್-19 ಸಹಾಯಹಸ್ತ ಅನುಷ್ಠಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಪ್ರತಿಯೊಂದು ಬೆಲೆ ಗಗನಕ್ಕೆ ಏರುತ್ತಿವೆ, ಜನಸಾಮಾನ್ಯರ ಬದುಕು ದುಸ್ತರವಾಗಿದೆ, ಮಾದ್ಯಮಗಳೆಲ್ಲವೂ ಸಹ ಒಂದು ರೀತಿಯ ಬಿಜೆಪಿ ಪ್ರಚಾರದ ಅಸ್ತ್ರಗಳಾಗಿ ಕಾರ್ಯನಿರ್ವಹಿಸುತ್ತಿರುವುದು ಕಂಡು ಬರುತ್ತಿದೆ ಇದರಿಂದ ಕರೋನಾದ ನಿಜವಾದ ಸಾವಿನ ಸಂಖ್ಯೆಯನ್ನು ತಿಳಿಸದೇ ಸುಳ್ಳು ಲೆಕ್ಕ ತಿಳಿಸುವ ಸರ್ಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಮಾಡಲು ಹೋಗಿ ಇಡೀ ದೇಶದ ಜನತೆಯನ್ನು ಬಲಿಕೊಡುವಂತಹ ದುಸ್ಥಿತಿ ಉಂಟಾಗಿದೆ, ಜಗತ್ತಿನಲ್ಲಿಯೇ ಅತಿ ಹೆಚ್ಚು ಔಷಧಿ ಉತ್ಪಾದಿಸುವ ದೇಶ ಭಾರತ, ಅದರೆ ಭಾರತೀಯರಿಗೆ ಲಸಿಕೆ ಸಿಗದಂತಹ ದುಸ್ಥಿತಿ ಉಂಟುಮಾಡಿದ್ದಾರೆ

ನರೇಂದ್ರ ಮೋದಿಯವರು, ಯುಪಿಯ ಸರ್ಕಾರದಲ್ಲಿ 100 ಬ್ಯಾರಲ್ ಕಚ್ಚಾತೈಲಿದ್ದಾಗ ಕೇವಲ 50 ರೂಪಾಯಿ ಲೀಟರ್ ಪೆಟ್ರೋಲ್ ನೀಡಿದರು, ಅದರೆ ಇಂದು ಕೇವಲ 50 ರೂಪಾಯಿ ಬ್ಯಾರಲ್ ಕಚ್ಚಾತೈಲ ಇದ್ದಾಗ 100 ಲೀಟರ್ ಪೆಟ್ರೋಲ್, ಡಿಸೇಲ್ ಏಕೆ? ಸಾಮಾನ್ಯರನ್ನು ಬೀದಿಗೆ ತಳ್ಳುವ ಸಲುವಾಗಿ ಒಬ್ಬ ರಿಲಾಯನ್ಸ್ ರಕ್ಷಿಸಲು ಇಂತಹ ನೀತಿ ಎಷ್ಟು ಸರಿ? ಯಾವುದೇ ದೂರದೃಷ್ಟಿಯ ನೀತಿ ಕೃಷಿಯಲ್ಲಾಗಲಿ, ಶಿಕ್ಷಣದಲ್ಲಾಗಲಿ, ಕೈಗಾರಿಕೆಯಲ್ಲಾಗಲಿ, ಉದ್ಯೋಗದಲ್ಲಾಗಲಿ, ಸಮಾಜಿಕ ಅಭಿವೃದ್ದಿಯಲ್ಲಾಗಲಿ, ಆರೋಗ್ಯದಲ್ಲಿ ಯಾವುದೇ ನೀತಿ ರಹಿತ ಸರ್ಕಾರವಾಗಿದೆ, ಬರೀ ಬಂಡವಾಳಗಾರರ, ಬಟ್ಟಂಗಿಗಳ ರಕ್ಷಿಸುವ ಸರ್ಕಾರ ಕೇಂದ್ರ ಮತ್ತು ರಾಜ್ಯ ಸರ್ಕಾರದ್ದಾಗಿದೆ,

ಹಿಂದೆ ಯುಪಿಎ ಸರ್ಕಾರವಿದ್ದಾಗ ಡಿಸೇಲ್ ಪೆಟ್ರೋಲ್ ಬೆಲೆ ಇಳಿಸಲು 90 ಸಾವಿರ ಕೋಟಿ ಸಬ್ಸಿಡಿ ನೀಡುವ ಮೂಲಕ ಜನತೆಯನ್ನು ರಕ್ಷಿಸಿತ್ತು, ಅದರೆ ಅದು ಇಲ್ಲವಾಗಿದೆ, ಜಿ.ಡಿ.ಪಿ ಕುಸಿದು ಮೈನಸ್ ಹಂತಕ್ಕೆ ಹೋಗಿದೆ, ಇಂತಹ ಸರ್ಕಾರ ಬೇಕೇ ಎಂದು ಪ್ರಶ್ನಿಸುವ ಮೂಲಕ ಈ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಿ ಪ್ರತಿಮನೆಗೆ ತೆರಳಿ ಹಸಿದವರಿಗೆ ಅನ್ನನೀಡಿದ, ಬಡವರ ಕಾಂಗ್ರೇಸ್ ಕಾರ್ಯಕ್ರಮಗಳನ್ನು ಜನತೆ ತಲುಪಿಸಿ, ಪ್ರತಿ ಕುಟುಂಬದಲ್ಲಿ ಕರೋನಾದಿಂದ ಸಂಕಷ್ಟ ಅನುಭವಿಸಿದವರಿಗೆ ಸಾಂತ್ವಾನ ಹೇಳಿ ಎಂದು ಕರೆನೀಡಿದರು.

ಸಭೆಯಲ್ಲಿ ಜಿಲ್ಲಾಧ್ಯಕ್ಷ ಶಿವಯೋಗಿ, ಮಾಜಿ ವಿಧಾನ ಪರಿಷತ್ತು ಸದಸ್ಯ ಕೆ.ಎಸ್.ಎಲ್.ಸ್ವಾಮಿ, ನಗರ ಘಟಕದ ಅಧ್ಯಕ್ಷ ರಫಿಕ್, ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಆಶಾಲತಾಸೋಮಪ್ಪ, ಪುರಸಭೆಯ ಅಧ್ಯಕ್ಷೆ ಅನಿತಾವಸಂತಕುಮಾರ್, ಉಪಾದ್ಯಕ್ಷ ವಿರೇಶ್ ಸಿಂಧೆ, ಮಾಜಿ ವಾಡಾ ಅಧ್ಯಕ್ಷ ರೋಷನ್ ಜಮೀರ್, ಜಿಲ್ಲಾ ಕಾರ್ಮಿಕ ವಿಭಾಗದ ಅಧ್ಯಕ್ಷ ಲಕ್ಷ್ಮಣ. ಜಿಲ್ಲಾ ಪಂಚಾಯಿತಿ ಸದಸ್ಯ ವಿ.ಜನಾರ್ಧನ, ಅಕ್ಷಯಲಾಡ್, ಮುಖಂಡರಾದ ಸತ್ಯಪ್ಪ, ತಾಲೂಕು ಮಹಿಳಾ ಘಟಕದ ಅಧ್ಯಕ್ಷ ಈರಮ್ಮ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಏಕಾಂಬರಪ್ಪ, ಚಿತ್ರಿಕಿ ಸತೀಶ್, ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here