ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ 03.08.2021 ರಂದು ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘದ ಬೆಂಬಲದಿಂದ ದೋಣಿಮಲೈನಲ್ಲಿ ಧರಣಿ.

0
221

ಸಂಡೂರು:ಆಗಸ್ಟ್;01 ಸಂಡೂರು ತಾಲೂಕಿನ ಎನ್ಎಂಡಿಸಿ ದೋಣಿಮಲೈ ಸಂಡೂರು ಗಣಿಯಲ್ಲಿ ಗುತ್ತಿಗೆದಾರರ ಅಡಿಯಲ್ಲಿ 12 ವರ್ಷಗಳಿಂದ ಕೆಲಸ ಮಾಡಿಕೊಂಡು ಬಂದಿರುವ 74 ಭದ್ರತಾ ವಿಬಾಗದ ಸಿಬ್ಬಂದಿಗಳಿಗೆ ದಿನಾಂಕ.01.06.2021 ರಂದು ದಿಡಿರನೇ ಯಾವುದೇ ಸೂಚನೆ ಇಲ್ಲದೆ ಭದ್ರತಾ ಕೆಲಸದಿಂದ ತೆಗೆದುಹಾಕಿ ಅವರನ್ನು ಅನ್ ಸ್ಕಿಲ್ಡ್ ಕಾರ್ಮಿಕರು ನಿರ್ವಹಿಸುವ ಕೆಲಸಕ್ಕೆ ನೇಮಿಸುತ್ತಿರುವ ಎನ್ಎಂಡಿಸಿಯ ಅಧಿಕಾರಿಗಳು ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ದಿನಾಂಕ 03.08.2021 ರಂದು ಎನ್ಎಂಡಿಸಿ ಆಡಳಿತ ಕಚೇರಿಯ ಮುಖ್ಯ ಗೇಟಿನ ಮುಂದೆ ಕಾರ್ಮಿಕರ ಏಕೈಕ ಬೇಡಿಕೆಗಾಗಿ ಅನಿರ್ದಿಷ್ಟ ಅವಧಿಗೆ ಧರಣಿ ಸತ್ಯಾಗ್ರಹ ಕಾರ್ಮಿಕರು ಪ್ರಾರಂಭಿಸಲು ತೀರ್ಮಾನ ತೆಗೆದುಕೊಂಡಿರುತ್ತಾರೆ, ಸದರಿ ಧರಣಿ ಸತ್ಯಾಗ್ರಹ ಎನ್ಎಂಡಿಸಿ ಭದ್ರತಾ ಸಿಬ್ಬಂದಿಗಳ ಕಾರ್ಮಿಕರ ಸಂಘ (ಟಿಯುಸಿಐ) ದೋಣಿಮಲೈ ಸಂಡೂರು ಇವರ ನೇತೃತ್ವದಲ್ಲಿ ಹಾಗೂ ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕರ ಸಂಘದ ಬೆಂಬಲದ ಅಡಿಯಲ್ಲಿ ನಡೆಸಲಾಗುತ್ತದೆ

ಸದರಿ ಸತ್ಯಾಗ್ರಹ ಪ್ರಾರಂಭಿಸಲು ಟಿಯುಸಿಐ ಸಂಘಟನೆ ರಾಜ್ಯ ಅಧ್ಯಕ್ಷರಾದ ಕಾಂ!! ಆರ್ ಮಾನಸಯ್ಯ, ಸಂಘಟನೆಯ ಖಜಾಂಚಿ ಕಾಂ!!ಅಮೀರ್ ಅಲಿ, ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ ಕಾಂ!! ಅಮರೇಶ, ಡಿಕೆ ಲಿಂಗಸುಗೂರು, ಕಾಂ!! ಚನ್ನಪ್ಪ ಕೊಟ್ಟಲ್ ಅವರುಗಳು ಬಾಗವಹಿಸಲಿದ್ದಾರೆ

ಅ ದಿನದ ಪತ್ರಿಕಾ ಹೇಳಿಕೆಯಲ್ಲಿ ಬಾಗವಹಿಸುವವರು ಎನ್ಎಂಡಿಸಿ ಭದ್ರತಾ ಸಿಬ್ಬಂದಿ, ಕಾರ್ಮಿಕರು, ಸಂಘದ ಅಧ್ಯಕ್ಷರು, ಪ್ರದಾನ ಕಾರ್ಯದರ್ಶಿಗಳು, ಉಪಾದ್ಯಕ್ಷರುಗಳು,ಖಜಾಂಚಿ ಮತ್ತು ಎಲ್ಲಾ ಕಾರ್ಮಿಕರು ಬೆಂಬಲಿಸಿ ಬಳ್ಳಾರಿ ಜಿಲ್ಲಾ ಗಣಿ ಕಾರ್ಮಿಕ ಸಂಘದ ಪ್ರಧಾನ ಕಾರ್ಯದರ್ಶಿ, ಅಧ್ಯಕ್ಷರು, ಇತರೆ ಪದಾಧಿಕಾರಿಗಳು

01.08.2021 ರಂದು ನಡೆದ ಪೂರ್ವಬಾವಿ ಸಭೆಯ ಈ ಸಂಧರ್ಭದಲ್ಲಿ ಗೌರವ ಅಧ್ಯಕ್ಷರು ಎಂ. ಸತೀಶ್, ಅಧ್ಯಕ್ಷರು ಹೆಚ್. ಬಿ ಗಂಗಪ್ಪ, ಪ್ರದಾನ ಕಾರ್ಯದರ್ಶಿ ಅರ್ ವಿಜಯ ಕುಮಾರ್, ಉಪಾಧ್ಯಕ್ಷರು ಕೆ.ಪಂಪನಗೌಡ,ಕಾರ್ಯದರ್ಶಿಗಳಾದ ಜಂಬಪ್ಪ, ಹೆಚ್ ಡಿ ಬಸವರಾಜ್, ಜಿ. ಶಿವಪ್ಪ, ಪಿ. ಹುಲಿರಾಜ,ಶ್ರೀನಿವಾಸ, ಬಿ. ನಾಗರಾಜ, ಹೊನ್ನೂರಪ್ಪ, ಬಿ. ಭರಮಪ್ಪ, ಎಸ್ ಎಂ ರಾಜಣ್ಣ ಉಪಸ್ಥಿತರಿದ್ದರು

ವರದಿ:-ರಾಜು ಪಾಳೆಗಾರ್

LEAVE A REPLY

Please enter your comment!
Please enter your name here