ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗೆ ಫಲ ಸಿಗುವ ತನಕ ಹೋರಾಟ: ಅಧ್ಯಕ್ಷರು ಚಾಪಿ ಚಂದ್ರಪ್ಪ

0
624

ಕೊಟ್ಟೂರು: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡಬೇಕು ಕಾನೂನು ಬದ್ಧ ಹಕ್ಕಾಗಿದ್ದು ಫಲ ಸಿಗುವ ತನಕ ಹೋರಾಟ ಮಾಡುತ್ತೇವೆ ಎಂದು ಕೊಟ್ಟೂರು ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯ ಸಂಘದ ಅಧ್ಯಕ್ಷರಾದ ಚಾಪಿ ಚಂದ್ರಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಬೆಳಗ್ಗೆ 12:30ಕ್ಕೆ ಪಂಚಮಸಾಲಿ ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿದರು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಇದೇ ತಿಂಗಳು 12 ಶನಿವಾರದಂದು ಹೊಸಪೇಟೆಯಲ್ಲಿ ನಡೆಯಲಿರುವ ಕಿತ್ತೂರಾಣಿ ಚೆನ್ನಮ್ಮನ 199ನೇ ವಿಜಯೋತ್ಸವ ಹಾಗೂ ಪಂಚಮಿ ಸಾಲಿ 2 ಎ ಮೀಸಲಾತಿ ಹಕ್ಕೋತ್ತಾಯ ಜನಜಾಗೃತಿ ಬೃಹತ್ ಸಮಾವೇಶ ಹಾಗೂ ಪಂಚಮಸಾಲಿ ಜಿಲ್ಲಾ ಸಮಾವೇಶ ನಡೆಯಲಿದೆ.

ಈ ಸಮಾವೇಶದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ವಚನನಾಂದ ಮಹಾ ಸ್ವಾಮೀಜಿಗಳು ವಹಿಸಲಿದ್ದಾರೆ ಈ ಸಮಾವೇಶವೂ ಸಹಕಾರಿ ಕ್ರೀಡಾಂಗಣ ನೆಹರು ಕಾಲೋನಿ ಹೊಸಪೇಟೆಯಲ್ಲಿ ನಡೆಯಲಿದೆ.

ಈ ಸಮಾವೇಶಕ್ಕೆ ಕೊಟ್ಟೂರು ತಾಲೂಕಿನ ಪಂಚಮಸಾಲಿ ಘಟಕದ ಅಧ್ಯಕ್ಷರು ಉಪಾಧ್ಯಕ್ಷರು ಕಾರ್ಯದರ್ಶಿಸುವ ಸರ್ವ ಸದಸ್ಯರು ಸಂಘಟನೆ ಮತ್ತು ಅಂದಿನ ಕಾರ್ಯಕ್ರಮದಲ್ಲಿ ಸಮುದಾಯದ ಜನರನ್ನು ಪಾಲ್ಗೊಳ್ಳುವಂತೆ ಹೇಳಿದರು.

ಕೊಟ್ಟೂರು ವ್ಯಾಪ್ತಿಯಲ್ಲಿ ಕೊಟ್ಟೂರು, ಹಾರಕನಾಳು, ನಡುಮಾವಿನಹಳ್ಳಿ, ಮಂಗಾಪುರ, ನಿಂಬಳಗೇರಿ, ಕುರುಬನಹಳ್ಳಿ ,ತೂಲಹಳ್ಳಿ, ಕೆ . ಅಯ್ಯನಹಳ್ಳಿ, ಚಪ್ಪರದಹಳ್ಳಿ ,ಹರಳು, ಕೋಗಳಿ, ಅಲಬೂರು, ಸಂಗಮೇಶ್ವರ ,ಹೊನ್ನಳ್ಳಿ ,ಬಳಿಗನೂರು, ತಿಮ್ಮಲಾಪುರ ,ಗಜಾಪುರ ,ಕಂದುಗಲ್ಲು, ಇನ್ನು ಮುಂತಾದ ಕಡೆಯಿಂದ ತಾಲೂಕು ವೀರ ಶೈವ ಪಂಚಮಸಾಲಿ ಸಮುದಾಯದ ಮುಖಂಡರು ಬಂದು ಈ ಸಮಾವೇಶವನ್ನು ಯಶಸ್ವಿಗೊಳಿಸಬೇಕು ಎಂದು ತಾಲೂಕು ಪಂಚಮಸಾಲಿ ಸಮುದಾಯದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಕೊಟ್ಟೂರು ತಾ ಪಂಚಮಸಾಲಿ ಸಮುದಾಯದ ಅಧ್ಯಕ್ಷರಾದ ಚಾಪಿ ಚಂದ್ರಪ್ಪ, ಕಾರ್ಯದರ್ಶಿ ಎಚ್. ಅಶೋಕ್, ಪ. ಪಂ. ಮಾಜಿ ಅಧ್ಯಕ್ಷರಾದ ಹೊಸಮನಿ ಅನಿಲ್, ಕೂಡ್ಲಿಗಿ ತಾ. ಪಂಚಮಸಾಲಿ ಸಂಘದ ಅಧ್ಯಕ್ಷರಾದ ಯು. ರೇವಣ್ಣ, ತೂಲಹಳ್ಳಿ ಹೇಮಣ್ಣ , ಅಶೋಕ್ ಎಸ್. ಎಸ್, ಕೊಟ್ಟೂರು ಯುವ ಘಟಕದ ಅಧ್ಯಕ್ಷರಾದ ಶಿವಕುಮಾರ್ ಗೌಡ್ರು ,ಮುಖಂಡರಾದ ಡಾ. ರಾಕೇಶ್ ,ಅರಮನೆ ರೇವಣ್ಣ ,ಮೇಘರಾಜ್, ತಾ. ಪಂ ಮಾಜಿ ಅಧ್ಯಕ್ಷರು ಗುರುಮೂರ್ತಿ, ಹರಾಳು ಸತೀಶ್, ಮಂಜುನಾಥ ಗೌಡ್ರು, ನಿಂಬಳಗೇರಿ ಕಲ್ಲೇಶ್, ಅಕ್ಕಿ ಚಂದ್ರಪ್ಪ ವೀರೇಶ್ ಗೌಡ್ರು ,ಹೊಸಮನಿ ಮಹೇಶ್, ಅಮ್ಮನ ಕೇರಿ ಉಮೇಶ್ ಹಾಗೂ ಪಂಚಮಸಾಲಿ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here