ತಟಕೋಟೆ ಹಿಮ ಪರ್ವತ ಏರಿದ ಹುಲ್ಲನಹಳ್ಳಿ- ಹೈದ; ಎಲ್ ಅಶೋಕ್.!

0
491

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಉಲ್ಲನಹಳ್ಳಿ ಗ್ರಾಮ: ಕರ್ನಾಟಕ ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದಲ್ಲಿ ಜನರಲ್ ತಿಮ್ಮಯ್ಯಸಾಹಸ ಅಕಾಡೆಮಿಯ ಆಯೋಜಿಸಿದ ಹಿಮಾಲಯದ ಮಹಾದಂಡ ಯಾತ್ರೆಗೆ, ಕರ್ನಾಟಕದ ಮೂವತ್ತೆಂಟು ಜನ ಸಾಹಸಿಗಳ, ಸದಸ್ಯರ ತಂಡದಲ್ಲಿ ಕೂಡ್ಲಿಗಿ ತಾಲೂಕಿನ ಹುಲ್ಲನಹಳ್ಳಿ ಗ್ರಾಮದ, ಅಶೋಕ ತಂದೆ ಉಮಾಪತಿ ನಾಯ್ಕ್, ಆಯ್ಕೆಯಾಗಿದ್ದರು.

ದಿನಾಂಕ,21.9.2021 ರಿಂದ 11.10.2021ರ ವರಗೆ ಜಮ್ಮು ಮತ್ತು ಕಾಶ್ಮೀರದ, ಪೇಹೆಲ್ಗೆಮ್ ನಲ್ಲಿ ನಡೆದ 10 ದಿನದ ಹಿಮಾಲಯದ ಮಹಾ ದಂಡೆಯಾತ್ರೆಯಲ್ಲಿ 20ಕೆಜಿ ಮೌಂಟೇನ್ ಉಪಕರಣಗಳನ್ನು ಹೊತ್ತು, (4765 ಮೀಟರ್) ಇರುವ ಏಷ್ಯಾದ ಅತ್ಯಂತ ಕಠಿಣವಾದ ಪರ್ವತ ಶಿಖರಗಳಲ್ಲಿ ಒಂದಾದ ತಟಕೋಟೆ ಹಿಮಪರ್ವತಗಳಲ್ಲಿ ಒಂದಾದ ತಟಕೋಟೆ ಹಿಮಪರ್ವತ ಶಿಖರವನ್ನೇರಲು, 22 ಗಂಟೆಗಳಕಾಲ ನಿರಂತರವಾಗಿ ನಿದ್ರೆ ಊಟ ಭಯವಿಲ್ಲದೆ ನಡೆದು ತಟಕೋಟೆ ಪರ್ವತ 15568 ಅಡಿ ಇರುವ ಶಿಖರವನ್ನು ಏರಿದ ಭಾರತ ದೇಶದ ಕರ್ನಾಟಕದ ಸಾಹಸಿಗಳ ತಂಡದಲ್ಲಿ ಕೂಡ್ಲಿಗಿ ತಾಲೂಕಿನ ಉಲ್ಲಾನಹಳ್ಳಿ ಗ್ರಾಮದ ಎಲ್ ಅಶೋಕ್ ರವರು ಒಬ್ಬರಾಗಿದ್ದಾರೆ.

ಇವರ ಸಾಧನೆಗೆ, ಉಲ್ಲನಹಳ್ಳಿ ಗ್ರಾಮದ ಮುಖಂಡರು ಹಿರಿಯರು, ತಾಲೂಕಿನ ವಿವಿಧ ಪರ ಸಂಘಟನೆಗಳ ಪದಾಧಿಕಾರಿಗಳು, ಜನಪ್ರತಿನಿಧಿಗಳು ಸ್ನೇಹಿತರುಸೇರಿದಂತೆ ಸಾರ್ವಜನಿಕರು ಅಭಿನಂದನೆ ಸಲ್ಲಿಸಿದ್ದಾರೆ.

ವರದಿ:-ಮಂಜುನಾಥ್. ಹೆಚ್

LEAVE A REPLY

Please enter your comment!
Please enter your name here