ಹೂಡೇಂ ಗ್ರಾಮದ ಮನೆಯ ಬೀಗಮುರಿದು ಕನ್ನ ಹಾಕಿದ ಖತರ್ನಾಕ್ ಕಳ್ಳರು

0
145

ಕೂಡ್ಲಿಗಿ:ಜುಲೈ:20:- ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೂಡೇಂ ಗ್ರಾಮದ ಮನೆಯೆಂದರಲ್ಲಿ ಯಾರು ಇಲ್ಲದ ಸಮಯ ನೋಡಿ ಬೀಗ ಮುರಿದು ಸರಣಿ ಮನೆಗಳ್ಳತನ ಮಾಡಿ, ನಗ-ನಾಣ್ಯ ದೋಚಿರುವ ಘಟನೆ ಜುಲೈ-18 ಹಾಗೂ ಜುಲೈ 19 ಬೆಳಗಿನ 5:45 ಗಂಟೆಯ ಮಧ್ಯಅವಧಿಯಲ್ಲಿ ನಡೆದಿದ್ದು, ಜುಲೈ-19 ಮಂಗಳವಾರ ಬೆಳಕಿಗೆ ಬಂದಿದೆ.

ಹೂಡೇಂ ಗ್ರಾಮದ ವೇಣುಗೋಪಾಲ ತಂದೆ ಎನ್.ಎಂ ಬೋರಯ್ಯ ವಾಲ್ಮೀಕಿ ಜನಾಂಗ ಕಾರ್ ಚಾಲಕನ ಮನೆ ಬೀಗ ಮುರಿದು ಕಳವು ಮಾಡಲಾಗಿದೆ. ಮನೆಗ ಬೀಗ ಹಾಕಿರುವುದನ್ನು ಗಮನಿಸಿದ್ದ ಕಳ್ಳರು ಈ ಕೃತ್ಯ ಮಾಡಿದ್ದಾರೆ ಎಂದು ಶಂಕಿಸಲಾಗಿದ್ದು, ಮನೆಯವರು ಮನೆಗೆ ಬೀಗ ಹಾಕಿಕೊಂಡು ಬೇರೆಡೆಗೆ ಹೋಗಿದ್ದರಿಂದ ಇಂತಹ ಘಟನೆ ನಡೆದಿದೆ.

ಮನೆಯ ಬಾಗಿಲ ಡೋರ್ ಲಾಕ್ ಕಿತ್ತು ಒಳನುಗ್ಗಿರುವ ಕಳ್ಳರು ಗಾಡ್ರೇಜ್ ಬೀರ್ ನ ಬೀಗ ಸಹ ಮುರಿದು ಅದರಲ್ಲಿದ್ದ ಎರಡು ಬಂಗಾರದ ಕಿವಿಯೋಲೆಗಳು ಅಂದಾಜು ತೂಕ 5 ಗ್ರಾಂ ಅಂದಾಜು ಬೆಲೆ ರೂ 4000/-ಗಳು, ಎರಡು ಬಂಗಾರದ ಬೆಂಡೋಲೆ ಅಂದಾಜು ತೂಕ 5 ಗ್ರಾಂ ಅಂದಾಜು ಬೆಲೆ ರೂ 4000/-ಗಳು, ಬಂಗಾರದ ನಾನ್‌ಚೈನ್ ಮತ್ತು ಪದಕ ಅಂದಾಜು ತೂಕ 30 ಗ್ರಾಂ ಅಂದಾಜು ರೂ 97000/-ಗಳು, ಹಣ 39500/-ರೂಗಳು ಅಂದಾಜಿಸಲಾಗಿದೆ. ಕಳುವಾದ ತನ್ನ ಆಭರಣ ಮತ್ತು ನಗದು ಹಣ ಹಾಗೂ ಕಳುವು ಮಾಡಿದ ಕಳ್ಳರನ್ನು ಪತ್ತೆಮಾಡಿಕೊಡಬೇಕೇಂದು ವೇಣುಗೋಪಾಲ ತಂದೆ ಎನ್.ಎಂ ಬೋರಯ್ಯ ನೀಡಿದ ದೂರಿನ ಮೇರೆಗೆ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here