ಸಾಧನೆಗೆ ಮಿತಿ ಇಲ್ಲ ಸಾಧಕರಿಗೆ ಕೊನೆ ಇಲ್ಲ- ತುಮಟಿ ಶ್ರೀನಿವಾಸಿ

0
11

ಸಂಡೂರು: ಮಾ: 27: ಸಾಧನೆಗೆ ಮಿತಿ ಇಲ್ಲ ಸಾಧಕರಿಗೆ ಕೊನೆ ಇಲ್ಲ ಈ ಸಂದೇಶದಂತೆ ಜೆ.ಸಿ.ಐ. ವ್ಯಕ್ತಿತ್ವ ವಿಕಸನ ಅಂತರಾಷ್ಟ್ರೀಯ ಸಂಸ್ಥೆಯಲ್ಲಿ ಸಾಧನೆ ಮಾಡುವ ಸಾಧಕರಿಗೆ ಗುರುತಿಸುವಂತಹ ಮಹತ್ತರ ಕಾರ್ಯವನ್ನು ಜೆ.ಸಿ.ಐ. ವ್ಯಾಲಿ ಸಂಸ್ಥೆ ಗೌರವಿಸುವಂತಹ ಮಹತ್ತರ ಕಾರ್ಯವನ್ನು ನೆರವೇರಿಸುತ್ತಿದೆ ಎಂದು ಯೋಗ ಗುರುವಾದ ತುಮಟಿ ಶ್ರೀನಿವಾಸ ತಿಳಿಸಿದರು.

ಅವರು ಇಂದು ಪಟ್ಟಣದ ಗುರುಭವನದಲ್ಲಿ ಜೆ.ಸಿ.ಐ. ವ್ಯಾಲಿ ಸಂಸ್ಥೆ ಹಮ್ಮಿಕೊಂಡಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ 2024ರ ಅಧ್ಯಕ್ಷನನ್ನಾಗಿ ಜೆ.ಸಿ.ಐ. ವ್ಯಾಲಿ ಸಂಸ್ಥೆಯ ಸದಸ್ಯರು ಅವಿರೋಧವಾಗಿ ಆಯ್ಕೆ ಮಾಡುವ ಮೂಲಕ ಸಾಧನೆ ಮಾಡುವ ಮತ್ತು ಸಾಧಕರನ್ನು ಗುರುತಿಸುವಂತಹ ಕಾರ್ಯದ ಜೊತೆಗೆ ಸಮಾಜದ ಸೇವೆಯನ್ನು ಮಾಡಲು ಹಿರಿಯರ ಮಾರ್ಗದರ್ಶನದಲ್ಲಿ ಸಾಗುತ್ತೇನೆ, ಈ ವರ್ಷದಲ್ಲಿ ನನ್ನ ಕನಸುಗಳಾದ ವ್ಯವಸ್ಥಾಪಕ ತರಬೇತಿ, ಗ್ರೋತ್ ಅಂಡ್ ಡೆವಲಪ್ ಮೆಂಟ್, ಕಮ್ಯೂನಿಟಿ ಡೆವಲಪ್ ಮೆಂಟ್ ಪ್ರೋಗ್ರಾಂ ಮತ್ತು ವ್ಯಾಪಾರ ತರಬೇತಿಗಳನ್ನು ನೀಡುವುದು ಜೊತೆಗೆ ಉಚಿತವಾಗಿ ನೇತ್ರ ತಪಾಸಣೆ ಶಿಬಿರ, ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವುದು, ಶಾಲಾ ಮಕ್ಕಳಿಗೆ ಪರೀಕ್ಷೆಯ ಜಾಗೃತಿ ಮತ್ತು ಅದರ ಭಯವನ್ನು ಓಡಿಸಲು ತರಬೇತಿ, ಕಾಲೇಜು ಮತ್ತು ಸಾರ್ವಜನಿಕವಾಗಿ ಯುವಕರಿಗೆ ಭಾಷೆ, ಕಲೆಗಳನ್ನು ತಿಳಿಸುವಂತಹ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಉತ್ತಮ ಸೇವೆಯನ್ನು ಮಾಡಲಾಗುವುದು, ಅಲ್ಲದೆ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದುರ ಜೊತೆಗೆ ಘಟಕಗಳನ್ನು ಪ್ರಾರಂಭಿಸಿ ವಲಯ, ರಾಜ್ಯ ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಬೆಳವಣ ಗೆಯನ್ನು ಸಾಧಿಸುವಂತಹ ಗುರಿಯನ್ನು ಹೊಂದಿದ್ದೇವೆ ಎಂದರು.

ಜೆ.ಸಿ.ಐ. ಪದಗ್ರಹಣ ಸಮಾರಂಭಕ್ಕೆ ವಿ.ವಿ. ಸಂಘದ ಸದಸ್ಯರಾದ ಜೆ.ಸಿ.ಕರಿಬಸವರಾಜ ಬಾದಾಮಿ, ರಾಷ್ಟ್ರೀಯ ತರಬೇತುದಾರರಾದ ಡಾ.ಕೇದರೇಶ್ವರ ದಂಡಿನ್, ನೂತನ ಅಧ್ಯಕ್ಷರಿಗೆ ಪ್ರಮಾಣವಚನ ಬೋಧಸಿದರು, ಹಾವಣಗಿಯ ಚನ್ನವೀರೇಶ್ ನೂತನ ಸದಸ್ಯರಿಗೆ ಪದಗ್ರಹಣ ಬೋಧಿಸಿದರು, ಕೊಟ್ರಪ್ಪ ಸೋಗಿ, ಸಂತೋಷ್, ಇತರರು ಉಪಸ್ಥಿತರಿದ್ದರು, ಅಧ್ಯಕ್ಷತೆಯನ್ನು ಜೆ.ಸಿ. ಫಿರೋಜ್ ವಹಿಸಿದ್ದರು, ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಮಂಗಳಗೌರಿ ನೆರವೇರಿಸಿದರು, ಹೇಮಂತ ಬಿ.ಎಂ., ಬಿ.ಎಂ.ಶಿವಕುಮಾರ್ ವಂದಿಸಿದರು.

LEAVE A REPLY

Please enter your comment!
Please enter your name here