ಇಬ್ಬನಿ ಸೊಬಗಿಗೆ ಗಂಟೆ ಏಳಾದರೂ ಉದಯಿಸದ ಸೂರ್ಯ.!

0
315

ಕೊಟ್ಟೂರು: ನ:23:- ಕದ ತೆರೆದುನೋಡಿದರೆ ಸೂರ್ಯ ಹಾಜರಿ ಹಾಕಿಲ್ಲ. ಚುಮು ಚುಮು ಚಳಿಗೆ ಮೈ ರೋಮವೆಲ್ಲ ನೆಟ್ಟಗೆ ನಿಂತಿವೆ. ಹೊರಗೆ ಬಂದು ನೋಡಿದರೆ ಎದುರಿಗೆ ಯಾರು ಬಂದರಾರ‍ಯರೂ ಕಾಣುತ್ತಿಲ್ಲ. ಬಿಸಿ ಬಿಸಿ ಕಾಫಿ ಹೀರಿದರೂ ಹೆಚ್ಚಾಗದ ಮೈ ಬಿಸಿ. ತಾಲೂಕಿನಲ್ಲಿ ಬುಧವಾರ ಮುಂಜಾನೆಯಿಂದ ಈ ಹಿತ ಅನುಭವ ಎಲ್ಲರನ್ನೂ ಆವರಿಸಿದೆ.

ಬುಧವಾರ ಗಂಟೆ ಏಳಾದರೂ ಇನ್ನು ಸೂರ್ಯೋದಯವಾಗದೆ ಇದ್ದದ್ದು ಜನರ ಅಚ್ಚರಿಗೆ ಕಾರಣವಾಯಿತು. ಮಲೆನಾಡಿನ ಪರ್ವತ ಶ್ರೇಣಿಗಳಲ್ಲಿ ಮಾತ್ರ ಕಾಣಬಹುದಾದ ಇಬ್ಬನಿ ಸೊಬಗನ್ನು ಕೊಟ್ಟೂರಿನಲ್ಲಿ ನೋಡಿದ ಜನ ಬೆರಗಾದರು.

ಕೇವಲ ಏಂಟತ್ತು ಅಡಿ ದೂರದಲ್ಲಿದ್ದವರು ಕಾಣದಿದ್ದಂತಹ ವಾತಾವರಣದಿಂದ ಪುಳಕಿತರಾದ ಜನತೆ ಸೂರ್ಯ ಯಾವಾಗ ಮೂಡುತ್ತಾನೋ? ಎಂದು ಆಕಾಶದತ್ತ ಕಣ್ಣಾಡಿಸುತ್ತಿದ್ದರು.

ಪಟ್ಟಣದ ಮೂಲಕ ಹಾದುಹೋಗಿರುವ ವಾಹನಗಳು ರಸ್ತೆಗಳಲ್ಲಿ ಹೆಡ್‌ಲೈಟ್‌ ಹಾಕಿಕೊಂಡೇ ಸಾಗುತ್ತಿದ್ದ ದೃಶ್ಯ ಕಂಡುಬಂತು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here