ಸಂಜೀವಿನಿ ಸಮಾಜ ಅಭಿವೃದ್ಧಿ ಸಂಸ್ಥೆ (ರಿ) ವತಿಯಿಂದ ಎಕ್ಸಾಮಿನೇಷನ್-2022ರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ

0
250

ಕೊಟ್ಟೂರು ಸಂಜೀವಿನಿ ಟ್ಯಾಲೆಂಟ್ ಸರ್ಚ್ ಎಕ್ಸಾಮಿನೇಷನ್ -2022ರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಗಂಗೋತ್ರಿ ಬಿ.ಎಸ್.ಡಬ್ಲ್ಯೂ. ಪದವಿ ಕಾಲೇಜ್ ನಲ್ಲಿ ದಿನಾಂಕ 1೦ ಡಿಸೆಂಬರ್ 2022ರಂದು ನಡೆಸಲಾಯಿತು.

ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀಮತಿ ನಿರ್ಮಲ ಶಿವನಗುತ್ತಿ ಪ್ರಾಚಾರ್ಯರು ಭಾಗೀರಥಿ ಪದವಿ ಪೂರ್ವ ಕಾಲೇಜು ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶಾಲೆಗಳು ಮಕ್ಕಳಿಗೆ ಕೇವಲ ಅಂಕಗಳಾಧರಿತವಾಗಿ ಪಾಠವನ್ನು ಮಾಡದೆ ಅಂಕಗಳನ್ನು ಗಳಿಸುವುದು ಮಾತ್ರವಲ್ಲದೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಮೂಲಕ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸಬೇಕು ಪೋಷಕರು ಸಹ ಒತ್ತಡ ಏರದೆ ಮಕ್ಕಳ ಓದಿಗೆ ಪ್ರೋತ್ಸಾಹ ನೀಡಬೇಕು ಎಂದು ಉದ್ಘಾಟನಾ ನುಡಿಗಳನ್ನು ಆಡಿದರು.

ನಂತರ ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿ ಆಗಮಿಸಿದಂತಹ ಡಾ. ಅರುಣ್ ಜೋಳದ ಕೂಡ್ಲಿಗಿ ಪ್ರಾಧ್ಯಾಪಕರು ಜಾನಪದ ವಿಶ್ವವಿದ್ಯಾಲಯ ಗೋಟಗೋಡೆ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಹಲವಾರು ನಿದರ್ಶನಗಳ ಮೂಲಕ ಮಕ್ಕಳಿಗೆ ಸಮಾಜದ ಸನ್ನಿವೇಶಗಳನ್ನು ವಿವರಿಸಿತ್ತ ಸಮಗ್ರ ವ್ಯಕ್ತಿತ್ವವನ್ನು ಹೊಂದಿದಂತಹ ಡಾ. ಬಿ.ಆರ್ ಅಂಬೇಡ್ಕರ್ ಅವರ ಕುರಿತು ಅವರ ಬಾಲ್ಯ ಜೀವನ ಹಾಗೂ ಅವರು ಬೆಳೆದು ಬಂದ ದಾರಿಯನ್ನು ಮತ್ತು ಸಮಾಜದ ವಾಸ್ತವಿಕ ಅಂಶಗಳನ್ನು ಕಥನ ರೂಪದಲ್ಲಿ ವಿವರಿಸಿದರು.

ಹಾಗೆಯೇ ಕಾರ್ಯಕ್ರಮದಲ್ಲಿ ಮತ್ತೋರ್ವ ಅತಿಥಿಗಳಾಗಿ ಆಗಮಿಸಿದಂತಹ ಶ್ರೀ ದೇವಕೊಳದ ಆನಂದ ಶಿಕ್ಷಣ ಸಂಯೋಜಕರು ಶಿಕ್ಷಣ ಇಲಾಖೆ ಕೊಟ್ಟೂರು, ಇವರು ಪ್ರಸ್ತುತ ಮಕ್ಕಳ ಸ್ಥಿತಿಗತಿ ಹಾಗೂ ಅವರ ಮನಸ್ಥಿತಿ ಕುರಿತು ತಮ್ಮ ನೈಜ ನಿದರ್ಶನಗಳನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು, ನಂತರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಸಲಾಯಿತು ತಾಲೂಕು ಮಟ್ಟದ ಪರೀಕ್ಷೆಯಲ್ಲಿ ತಾಲೂಕಿಗೆ ಹಾಗೂ ಶಾಲೆಗೆ ಪ್ರಥಮ ದ್ವಿತೀಯ ಸ್ಥಾನದಲ್ಲಿ ಪಡೆದ ಮಕ್ಕಳಿಗೆ ಸನ್ಮಾನ ಮಾಡಿ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.

ತಾಲೂಕು ಮಟ್ಟಕ್ಕೆ ಬಿ.ಕೆ.ವಿ.ಪ್ರೌಢ ಶಾಲೆ ನಿಂಬಳಗೆರೆಯ ವಿದ್ಯಾರ್ಥಿನಿ ಬಿ.ಎನ್. ದಿವ್ಯ ಹಾಗೂ ಎಂ.ಅರ್.ಎಸ್.ಎಸ್. ಪ್ರೌಢ ಶಾಲೆ ಅಲಬೂರಿನ ವಿದ್ಯಾರ್ಥಿನಿ ಪೂಜಾ ಇವರು ಪ್ರಥಮ ಸ್ಥಾನವನ್ನೂ ಹಂಚಿಕೊಂಡಿದ್ದಾರೆ. ಹಾಗೂ ಎಂ.ಅರ್.ಎಸ್.ಎಸ್. ಪ್ರೌಢ ಶಾಲೆ ಅಲಬೂರಿನ ವಿದ್ಯಾರ್ಥಿನಿ ನಾಗವೇಣಿ ಎನ್. ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ, ಮತ್ತು ಕೊಟ್ಟೂರು ತಾಲೂಕಿನ14 ಗ್ರಾಮೀಣ ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಶಾಲಾ ಹಂತದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದಂತಹ ಸಂಜೀವಿನಿ ಸಂಸ್ಥೆಯ ಗೌರವಾಧ್ಯಕ್ಷರಾದಂತಹ ಮರುಳಪ್ಪ ಕೆ. ಇವರು ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದಂತಹ ಎಲ್ಲರಿಗೂ ವಂದಿಸಿದರು. ಕಾರ್ಯಕ್ರಮದ ಪ್ರಸ್ತಾವಿಕ ನುಡಿಗಳನ್ನು ಶಶಿಕಿರಣ್ ಕೆ. ಅವರು ನುಡಿದರು. ಕಾರ್ಯಕ್ರಮವನ್ನು ಶ್ರೀಮತಿ ರಾಧಿಕಾ ಪಂಪಾಪತಿ ನಿರೂಪಿಸಿದರು, ಸ್ವಾಗತವನ್ನು ಕುಮಾರಿ ವೀಣಾ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗಂಗೋತ್ರಿ ಶಿಕ್ಷಣ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ರಚನಾ ರಜತ್, ಶಿಕ್ಷಣ ಸಂಯೋಜಕ ಶ್ರೀ ನಿಂಗಪ್ಪ ಮತ್ತು ಎಲ್ಲಾ ಪ್ರೌಢಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕರು, ಗಂಗೋತ್ರಿ ಕಾಲೇಜಿನ ಉಪನ್ಯಾಸಕರಾದ ಶ್ರೀ ಪ್ರಫುಲ್ ಚಂದ್ರ ಎಂ.ಎಸ್, ಕೊಟ್ರೇಶ ಪಿ.ಕೆ.ಎಂ,ಶಿವಕುಮಾರ್ ಎ.ಎಂ.ಪೂರ್ಣಚಂದ್ರ, ಶಂಭುಲಿಂಗಯ್ಯ, ವಿನಯ, ಭರತ್, ನಾಗರಾಜ್ ದಿವ್ಯ ಉಪಸ್ಥಿತಿ ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here