ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಸ್ವಚ್ಛತೆಯಲ್ಲಿ ತೊಡಗಿದ “ಹಸಿರು ಹೊನಲು” ತಂಡ: ಜನರಿಂದ ಮೆಚ್ಚುಗೆ.

0
321

ಕೊಟ್ಟೂರು:ಡಿ:14:- ಪಟ್ಟಣದಲ್ಲಿ ಸೋಮವಾರ ನಡೆದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ಕಾರ್ತಿಕೋತ್ಸವ ಮತ್ತು ಬೆಳ್ಳಿ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತರು ಸಂಭ್ರಮದಲ್ಲಿದ್ದರೆ ,ಇಲ್ಲಿನ ಹಸಿರು ಹೊನಲು ತಂಡದ ಸದಸ್ಯರು ಶ್ರೀ ಸ್ವಾಮಿ ದೇವಸ್ಥಾನ ಮುಂಭಾಗ ಮತ್ತು ಅಕ್ಕಪಕ್ಕ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಕೊಂಡು ಭಕ್ತಿ ಅರ್ಪಿಸುವ ಮೂಲಕ ಉತ್ಸವಕ್ಕೆ ಆಗಮಿಸಿದ ಭಕ್ತರಿಗೆ ಸ್ವಚ್ಛತೆಯ ಜಾಗೃತಿ ಮೂಡಿಸಿದರು.

ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ವೇಳೆ ಭಕ್ತರು ದೀಪಗಳಿಗೆ ಎಣ್ಣೆ ಮತ್ತು ಅಗ್ನಿ ಕುಂಡಕ್ಕೆ ಕೊಬುರಿ ಆರ್ಪಿಸಿ ನಂತರ ಪ್ಲಾಸ್ಟಿಕ್ ಕವರ್ ಗಳನ್ನು
ನಿರ್ಲಕ್ಷ್ಯ ದಿಂದ ಎಲ್ಲೆಂದರಲ್ಲಿ ಎಸೆದ ಪರಿಣಾಮ, ಬೆಳ್ಳಿ ರಥೋತ್ಸವ ಮುಂದೆ ಸಾಗುತ್ತಿದ್ದಂತೆ ದೇವಸ್ಥಾನ ಮುಂಭಾಗದಲ್ಲಿ ಭಕ್ತಿಗಿಂತ ಹೆಚ್ಚಾಗಿ ಪ್ಲಾಸ್ಟಿಕ್ ತ್ಯಾಜ್ಯವೇ ರಾರಾಜಿಸುತ್ತಿತ್ತು

ತಕ್ಷಣ, ಇದನ್ನು ಮನ ಗಂಡ ಸ್ಥಳೀಯ ಹಸಿರು ಹೊನಲು ತಂಡದ ಸದಸ್ಯರು ಪೊರಕೆ ಇಡಿದು, ಅಸಂನ್ಮುಖಿಗಳಾಗಿ ಸ್ವಚ್ಛತೆ ಮಾಡುತ್ತ ಕಾರ್ತಿಕೋತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ, ಧ್ವನಿ ವರ್ದಕ ಮತ್ತು ಸ್ಲೋಗನ್ ಮೂಲಕ ಹಾಗೂ ಹಾಡಿನ ಮೂಲಕವು ಸ್ವಚ್ಛತೆಯ ಪ್ರಜ್ಞೆ ಮೂಡಿಸುತ್ತ ಮದ್ಯರಾತ್ರಿಯಿಂದ ಬೆಳೆಗಿನ ಜಾವದವರೆಗೆ
ಸ್ವಚ್ಛತೆ ಮಾಡಿ,ಶ್ರೀ ಸ್ವಾಮಿಗೆ ಭಕ್ತಿ ಸಮರ್ಪಿಸಿ ಅನೇಕ ಪ್ರಜ್ಞವಂತ ನಾಗರಿಕರ ಪ್ರಶಂಸೆಗೆ ಪಾತ್ರರಾದರು.

ಮಂಗಳವಾರ ಬೆಳಿಗ್ಗೆ ಶ್ರೀ ಸ್ವಾಮಿಗೆ ಹರಕೆ ಹೊತ್ತ ಭಕ್ತರು, ದೀಡ್ ನಮಸ್ಕಾರ ಹಾಕುತ್ತ ಹರಕೆ ತೀರಿಸಲು ದೇವಸ್ಥಾನ ಮುಂಭಾಗಕ್ಕೆ ಆಗಮಿಸುತ್ತಿದ್ದಂತೆ ರಾತ್ರಿ ನೋಡಿದ ತ್ಯಾಜ್ಯ, ಆಗ ಅಲ್ಲಿಲ್ಲದನ್ನು ಕಂಡು ಹರ್ಷದಿಂದ ಶ್ರೀ ಸ್ವಾಮಿಗೆ ಹರಕೆ ತೀರಿಸಿ,ಕಾರಣ ತಿಳಿದು ಹಸಿರು ಹೊನಲು ತಂಡದ ಕಾರ್ಯವನ್ನು ಶ್ಲಾಘಿಸಿದರು.

ಹಸಿರು ಹೊನಲು ತಂಡ ಸದಸ್ಯರು ಉದ್ಯೋಗಿಗಳು ಮತ್ತು ಪದವಿದರರು ಹಾಗೂ ಸರ್ಕಾರಿ ನೌಕರರಿದ್ದು ಯಾವುದೇ ಬಿಗುಮಾನಗಳಿಗೆ ಒಳಗಾಗದೆ ಮತ್ತು ನಿಸ್ವಾರ್ಥ ಸೇವಾ ಮನೋಭಾವದೊಂದಿಗೆ ಕಾರ್ಯೋನ್ಮುಖರಾಗಿ ತೊಡಗಿಕೊಂಡು ಸದಾ ಪಟ್ಟಣದ ಸ್ವಚ್ಛತೆ ಮತ್ತು ಪರಿಸರ ಕಾಳಜಿ ಮೂಡಿಸುವುದೆ ಅವರ ಕಾರ್ಯ.

-ಹಸಿರು ಹೊನಲು ತಂಡದ ಕಾರ್ಯ ಅವಲೋಕಿಸಿದ ಪ್ರತ್ಯಕ್ಷ ದರ್ಶಿಗಳ ಹೇಳಿಕೆ.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here