ಚಿತ್ತಾಪುರದಲ್ಲಿ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ ಉದ್ಘಾಟನೆ

0
151

ಕಲಬುರಗಿ,ಆ.17:-ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ, ಕಲಬುರಗಿ, ಕರ್ನಾಟಕ
ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಕಲಬುರಗಿ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ ಕಲಬುರಗಿ ಇವುಗಳ ಸಹಯೋಗದೊಂದಿಗೆ ಅಮೃತ ಸ್ವ-ಸಹಾಯ ಕಿರು ಉದ್ಯಮ ಯೋಜನೆಯಡಿ ಸ್ವ-ಸಹಾಯ ಗುಂಪುಗಳ ಸದಸ್ಯರಿಗೆ ಚಿತ್ತಾಪುರ ತಾಲೂಕು ಪಂಚಾಯತ್ ಕಚೇರಿಯಲ್ಲಿ ಮೂರು ದಿನಗಳ ಕಾಲ ಏರ್ಪಡಿಸಲಾಗಿದ್ದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ತರಬೇತಿ ಕಾರ್ಯಕ್ರಮವನ್ನು ಚಿತ್ತಾಪೂರ ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶ್ರೀಮಂತ ಅವರು ಬುಧವಾರ ಉದ್ಘಾಟಿಸಿದರು.

ನಂತರ ಅವರು ಮಾತನಾಡಿ, ಉದ್ಯಮಶೀಲತಾ ಕಾರ್ಯಕ್ರಮಗಳ ರೂಪರೇಷೆಗಳ ಕುರಿತು ಮಾಹಿತಿ ನೀಡಿದಲ್ಲದೇ ಸ್ವ-ಸಹಾಯ ಗುಂಪುಗಳ ಸದಸ್ಯರು/ಸಂಘಗಳು ಸ್ವಂತ ಉದ್ಯಮವನ್ನು ಸ್ಥಾಪನೆ ಮಾಡಿದ್ದಲ್ಲಿ ಮಾತ್ರ ಉದ್ಯಮ ಅಭಿವೃಧ್ಧಿ ಮತು ್ತ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಚಿತ್ತಾಪೂರ ಮಹಿಳಾ ಮತು ್ತ ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸುಲೋಚನಾ ಅವರು ಮಾತನಾಡಿ, ಕೈಗಾರಿಕಾ ಇಲಾಖೆಯಿಂದ ಸೀಗುವ ಸೌಲಭ್ಯಗಳ ಹಾಗೂ ವಿವಿಧ ಯೋಜನೆಯ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಆಳಂದ ಶಿಶು ಅಭಿವೃಧ್ಧಿ ಯೋಜನಾಧಿಕಾರಿ ರಾಜಕುಮಾರ ರಾಠೋಡ ಅವರು ಮಾತನಾಡಿದರು.

ಸಿಡಾಕ್ ಉಪನ್ಯಾಸಕ ಸೈಯದ್ ಅಶ್ಫಾಖ್ ಅಹ್ಮದ್ ಮಾತನಾಡಿ, ಮಹಿಳೆಯರು ಉದ್ಯಮ ಪ್ರಾರಂಭಿಸುವ
ಪೂರ್ವ ಯೋಜನಾ ವರದಿ ತಯಾರಿಸಬೇಕು. ಇದರಿಂದ ಸುಲಭವಾಗಿ ನಿರ್ಣಯ ಕೈಗೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಇತರೆ ಗಣ್ಯರು ಉಪಸ್ಥಿತರಿದ್ದರು. ಸಿಡಾಕ್ ತರಬೇತಿದಾರ ಜಯಶ್ರೀ ಎಸ್. ಪಾಟೀಲ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here