ತರಳು ಬಾಳು ಹುಣ್ಣುಮೆ,ಧಾರ್ಮಿಕ ಕಾರ್ಯಕ್ರಮ ಯಶಸ್ವಿಗೊಳಿಸಲು ಮುಂಚೂಣಿಯಲ್ಲಿರುವೆ: ಎಸ್.ಭೀಮಾನಾಯ್ಕ್

0
419

ಕೊಟ್ಟೂರು ಪಟ್ಟಣದಲ್ಲಿ ಜ.28 ರಂದು ನಡೆಯುವ ತರಳುಬಾಳು ಹುಣ್ಣುಮೆ ಧಾರ್ಮಿಕ ಕಾರ್ಯಕ್ರಮದಲ್ಲಿ ಸ್ವತಃ ಮುಂಚೂಣಿಯಲ್ಲಿ ನಿಂತು ಅದ್ದೂರಿಯಾಗಿ ಯಶಸ್ವಿಗೊಳಿಸುವೆ ಎಂದು ಕ್ಷೇತ್ರದ ಶಾಸಕ ಎಸ್.ಭೀಮಾನಾಯ್ಕ್ ಭರವಸೆ ನೀಡಿದರು.

ಶುಕ್ರವಾರ ಪ್ರವಾಸಿ ಮಂದಿರದಲ್ಲಿ ಪತ್ರಿಕೆಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ನಡೆಸಿದ ಪತ್ರಿಕೆ ಗೋಷ್ಠಿಯಲ್ಲಿ ಸಮ್ಮಿಶ್ರ ಸರ್ಕಾರ ಇದ್ದಂತ ವೇಳೆಯಲ್ಲಿ 22 ಕೆರೆಗೆ ನೀರು ತುಂಬಿಸುವ ಯೋಜನೆ ರೂಪಿಸಿದ್ದರು ಅನುದಾನ ನೀಡದೆ.

ಬಿಜೆಪಿ ಸರ್ಕಾರದಲ್ಲಿ ಸಿದ್ದಗೊಂಡ ಪಕ್ಕದ ತಾಲೂಕಿನ ಬಿಜೆಪಿ ಶಾಸಕರ ಕ್ಷೇತ್ರಕ್ಕೆ ಅನುದಾನ ನೀಡಿ ಬಿಜೆಪಿ ಸರ್ಕಾರ ತಾರತಮ್ಯ ತೋರಿದೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ತಡೆಯೊಡ್ಡಿದ್ದಾರೆ , ಈ ಹಿನ್ನೆಲೆ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಗೋವಿಂದ ಕಾರಜೋಳ ಅವರನ್ನು ಪ್ರಶ್ನಿಸುವುದಾಗಿ ಹೇಳಿರುವೆ ವಿನಾ.

ಯಾವುದೇ ಕಾರಣಕ್ಕು ತರಳಬಾಳು ಹುಣ್ಣುಮೆಗೆ ಅಡ್ಡಿಪಡಿಸುವ ವಿಚಾರ ಹೇಳಿಲ್ಲ, ಅದು ಧಾರ್ಮಿಕ ವಿಚಾರ ಅದರಲ್ಲಿ ನಾನು ಸ್ವತಃ ಮುಂದೆ ನಿಂತು ಕಾರ್ಯಕ್ರಮ ನಡೆಸುವೆ ಹಾಗೆ ಎಲ್ಲಾರು ಪಕ್ಷತೀತವಾಗಿ ಈ ಕಾರ್ಯದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಇದರಲ್ಲಿ ರಾಜಕೀಯ ಬೇಡ ಎಂದರು.

ಕಪ್ಪು ಬಾವುಟ ವಿಚಾರ ಸಾದುಲಿಂಗಾಯಿತ ಸಮುದಾಯದ ಜನರು ಅನ್ಯತ ಭಾವಿಸಬಾರದು ಎಂದು ಮನವಿ ಮಾಡಿಕೊಂಡರು.

ನಂತರ ತರಳಬಾಳು ಹುಣ್ಣುಮೆ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಸಾದಲಿಂಗಾಯತ ಸಮುದಾಯದೊಂದಿಗೆ ಕಾರ್ಯಕ್ರಮದ ರೂಪರೇಷಗಳ ಬಗ್ಗೆ ಚರ್ಚಿಸಿದರು.

ಈ ವೇಳೆ ಸಾದುಲಿಂಗಾಯಿತ ಸಮುದಾಯದ ತರಳು ಬಾಳು ಹುಣ್ಣುಮೆ ಕಾರ್ಯಕ್ರಮದ ಅಧ್ಯಕ್ಷರಾದ ಡಾ.ಬಿ.ಸಿ.ಮೂಗಪ್ಪ, ಸಾವಜ್ಜಿ ರಾಜೇಂದ್ರ ಪ್ರಸಾದ್ , ವಾಮದೇವಪ್ಪ, ಬಿ.ಆರ್.ವಿಕ್ರಮ್, ತೋಟದ ರಾಮಣ್ಣ ಮುಂತಾದವರು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here