ಕರ್ನಾಟಕ ಭೂ ಕಂದಾಯ ನಿಯಮ ತಿದ್ದುಪಡಿ; ಹಕ್ಕುಬದಲಾವಣೆ ಆಕ್ಷೇಪಣಾ ಅವಧಿ 30ದಿನಗಳ ಬದಲಿಗೆ 7 ದಿನಗಳಿಗೆ ಇಳಿಕೆ

0
470

ನೊಂದಣಿ ದಾಖಲೆಗಳಾದ ಕ್ರಯ, ವಿಭಾಗ, ದಾನ, ಹಕ್ಕು ಮತ್ತು ಬಿಡುಗಡೆ ದಾಖಲೆಗಳ ಆಕ್ಷೇಪಣಾ ಅವಧಿಯು ಈ ಮೊದಲು 30 ದಿನಗಳಿರುವುದನ್ನು 7 ದಿನಗಳಿಗೆ ಹಾಗೂ ನೊಂದಣಿಯಲ್ಲದ ದಾಖಲೆಗಳಾದ ಪೌತಿ, ಮೈನರ್ ಗಾರ್ಡಿಯನ್ ಮತ್ತು ವಿಲ್ ಗಳಿಗೆ ಈಮೊದಲು ಇದ್ದ 30 ದಿನಗಳ ಅವಧಿಯನ್ನು 15ದಿನಗಳಿಗೆ ಇಳಿಸಿ ಕರ್ನಾಟಕ ಭೂ ಕಂದಾಯ ನಿಯಮಗಳು 1966ರ ನಿಯಮ 64(3) ಹಾಗೂ ನಿಯಮ 66 ಗಳಿಗೆ ಸರ್ಕಾರದ ಅಧಿಸೂಚನೆ ಸಂ/ಆರ್.ಡಿ.26/ಎಲ್.ಜಿ.ಪಿ/2022 ದಿನಾಂಕ: 29.09.2022 ರನ್ವಯ ತಿದ್ದುಪಡಿ ಮಾಡಿ ಅಧಿಸೂಚನೆಯನ್ನು ದಿನಾಂಕ: 13.10.2022 ರಂದು ಕರ್ನಾಟಕ ರಾಜ್ಯಪತ್ರದ ಭಾಗ-4ಎ ರಲ್ಲಿ ಪ್ರಕಟಿಸಿರುತ್ತಾರೆ.

ಸರ್ಕಾರದ ಈ ಆದೇಶದ ಮೇರೆಗೆ ನೊಂದಣಿ ದಾಖಲೆಗಳಿಗೆ (ಕ್ರಯ, ವಿಭಾಗ, ದಾನ, ಹಕ್ಕು ಮತ್ತು ಬಿಡುಗಡೆ) ಆಕ್ಷೇಪಣಾ ಅವಧಿ 30 ದಿನಗಳ ಬದಲಾಗಿ 7 ದಿನಗಳಿಗೆ ಹಾಗೂ ನೊಂದಣಿಯಲ್ಲದ (ಪೌತಿ, ಮೈನರ್ ಗಾರ್ಡಿಯನ್ ಮತ್ತು ವಿಲ್) ದಾಖಲೆಗಳಿಗೆ 30 ದಿನಗಳ ಬದಲಾಗಿ 15 ದಿನಗಳಿಗೆ ಇಳಿಸಿದ್ದು, ಈ ಸೌಲಭ್ಯವನ್ನು ಪಡೆದುಕೊಳ್ಳಲು  ಸಾರ್ವಜನಿಕರಿಗೆ ತಿಳಿಸಿದೆ.

ತಹಶೀಲ್ದಾರ್, ಕೊಟ್ಟೂರು

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here