ಸುಂದರ ಮತ್ತು ಸುಸಜ್ಜಿತ ರಸ್ತೆ ನಿರ್ಮಿಸಿದ ಲೋಕೋಪಯೋಗಿ ಇಲಾಖೆಗೆ ಸಾರ್ವಜನಿಕರಿಂದ ಪ್ರಶಂಸೆ ಮತ್ತು ಮೆಚ್ಚುಗೆ;

0
351

ರೇಣುಕಾ ಟಾಕೀಸ್ ನೂತನ ರಸ್ತೆಗೆ ರೋಡ್ ಬ್ರೇಕ್ ಮತ್ತು
ಡಿವೈಡರ್ ಅಳವಡಿಸಿ ಅಪಘಾತ ತಡೆಯುವಂತೆ ಸಾರ್ವಜನಿಕರ ಮನವಿ.

ಕೊಟ್ಟೂರು: ಹಲವು ವರ್ಷಗಳಿಂದ ಕಿಷ್ಕಿಂದಿಯಂತೆ ಟ್ರಾಫಿಕ್ ಕಿರಿಕಿರಿಯಾಗಿದ್ದ ಪಟ್ಟಣದ ರೇಣುಕಾ ಚಿತ್ರಮಂದಿರ ಮುಂಭಾಗದ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಅಗಲಿಕರಿಸಿ 3.ಕೋಟಿಗೂ ಹೆಚ್ಚಿನ ವೆಚ್ಚದಲ್ಲಿ ರಸ್ತೆಯನ್ನು ನಿರ್ಮಾಣ ಮಾಡಿ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿಯನ್ನು ದೂರ ಮಾಡಿದ್ದಾರೆ.

ಸುಂದರ ಮತ್ತು ಸುಸಜ್ಜಿತವಾದ ರಸ್ತೆಯನ್ನು ನಿರ್ಮಾಣ ಮಾಡಿರುವ ಲೋಕೋಪಯೋಗಿ ಇಲಾಖೆಯ ಬಗ್ಗೆ ವಾಹನ ಸವಾರರು ಮತ್ತು ಸಾರ್ವಜನಿಕರಿಂದ ಇಂದು ಪ್ರಶಂಸೆ ಮತ್ತು ಮೆಚ್ಚುಗೆ ಕೇಳಿಬರುತ್ತಿವೆ.

ಹಾಗೆ ನ್ಯಾಷನಲ್ ರಸ್ತೆಯಂತಿರುವ ಈ ರಸ್ತೆಯಲ್ಲಿ ಎಲ್ಲಿಯೂ ರೋಡ್ ಬ್ರೇಕ್ ಇಲ್ಲದೆ ಇರುವುದರಿಂದ ಪಡ್ಡೆ ಹುಡುಗರು ಮನ ಬಂದಂತೆ ಬೈಕ್ ಸವಾರಿ ಮಾಡಲು ಮುಂದಾಗಿದ್ದು ಮಕ್ಕಳು ಮತ್ತು ಪಾದಚಾರಿಗಳು ಭಯದಲ್ಲಿ ನಡೆದಾಡುವ ದುಸ್ಥಿ ಇಲ್ಲಿ ನಿರ್ಮಾಣವಾಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯ.

ಹಳೆಯ ನಾಡ ಕಚೇರಿಯಿಂದ ಉಜ್ಜಯಿನಿ ರಸ್ತೆಯ ಪಿ.ಎಲ್.ಡಿ ಬ್ಯಾಂಕ್ ವರೆಗೆ ಈ ರಸ್ತೆಗೆ ಏಳೆಂಟು ಉಪ ರಸ್ತೆಗಳು ಸಂದಿಸುತ್ತವೆ. ಆದರೆ ಈ ಮುಖ್ಯ ರಸ್ತೆಯಲ್ಲಿ ಡಿವೈಡರ್ ಅಳವಡಿಕೆ ಇಲ್ಲದಿರುವುದರಿಂದ ವಾಹನ ಸವಾರರು ಅಡ್ಡಾದಿಡ್ಡ ಸಾಗಿ ಅಪಘಾತಕ್ಕೆ ಒಳಗಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

ಶೀಘ್ರ ಸಂಬಂಧ ಪಟ್ಟ ಅಧಿಕಾರಿಗಳು ರಸ್ತೆಗೆ ರೋಡ್ ಬ್ರೇಕ್ ಮತ್ತು ಡಿವೈಡರ್ ಅಳವಡಿಕೆ ಮಾಡಿ ಇಲ್ಲಿ ಮುಂದಾಗುವಂತಹ ಅವಘಡಗಳನ್ನು ತಪ್ಪಿಸಬೇಕು ಎಂಬುದು ಸಾರ್ವಜನಿಕರ ಮನವಿಯಾಗಿದೆ.

■ಅಳೆಯ ನಾಡ ಕಚೇರಿಯಿಂದ ಉಜ್ಜಯಿನಿ ರಸ್ತೆ ಪಿ.ಎಲ್.ಡಿ ಬ್ಯಾಂಕ್ ವರೆಗೆ ನಿರ್ಮಾಣಗೊಂಡ ನೂತನ ರಸ್ತೆಯ ಅಗಲಿಕರ ಸಂದರ್ಭದಲ್ಲಿ ಸುಸಜ್ಜಿತ ರಸ್ತೆ ಮತ್ತು ಮದ್ಯದಲ್ಲಿ ಡಿವೈಡರ್ ಅಳವಡಿಕೆ ಮಾಡುವುದಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹೇಳಿದ್ದರು
ಆದರೆ ಇಂದು ಡಿವೈಡರ್ ಇಲ್ಲದೆ ರಸ್ತೆಯಾಗಿದ್ದು ಇದು ಅಪಘಾತಕ್ಕೆ ಎಡೆಯಾಗಿದೆ.ಶೀಘ್ರ ಡಿವೈಡರ್ ನಿರ್ಮಿಸದಿದ್ದರೆ ಇಲ್ಲಿ ಉಂಟಾಗುವ ಅವಘಡಗಳಿಗೆ, ಸಂಪೂರ್ಣ ಲೋಕೋಪಯೋಗಿ ಇಲಾಖೆ ಕಾರಣವಾಗಬೇಕಾಗುತ್ತೆ.
◆ಪ್ರಜ್ಞಾವಂತ ನಾಗರಿಕ,
ಕೊಟ್ಟೂರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here