ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ಹೆಣ್ಣಿಗಿದೆ; ಪ್ರಾಂಶುಪಾಲ ಶ್ರೀ ವೀರೇಶ್

0
359

ಸಂಡೂರು:ಜ:24:-ತಾಲೂಕಿನ ತೋರಣಗಲ್ಲು ಗ್ರಾಮದ ಅಲ್ಪ ಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ಆರ್.ಕೆ.ಎಸ್.ಕೆ ಕಾರ್ಯಕ್ರಮದ ಅಡಿಯಲ್ಲಿ ಅಯೋಜಿಸಲಾದ “ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ” ಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲ ವೀರೇಶ್ ಅವರು ಗಂಡು ಹೆಣ್ಣು ಎಂಬ ಬೇದ ತಾರತಮ್ಯ ಬೇಡ ಸಮಾನವಾಗಿ ಕಾಣಬೇಕು,ವಿದ್ಯಾಭ್ಯಾಸ ಕೊಡಿಸಿದರೆ ಸಾಕು ರಾಷ್ಟ್ರಪತಿ, ಮುಖ್ಯ ಮಂತ್ರಿ, ಲೋಕಸಭಾ ಸ್ಪೀಕರ್,ರಾಜ್ಯಪಾಲ, ಡಿ.ಸಿ, ತಹಶಿಲ್ದಾರರ್ ನಂತಹ ಅನೇಕ ಉನ್ನತ ಸ್ಥಾನ ಅಲಂಕರಿಸಿ ತನ್ನನ್ನು ತಾನು ಸಾಬೀತು ಪಡಿಸುವಳು, ಹಾಳಾದ ವರದಕ್ಷಿಣೆ ಪಿಡುಗು ನಾಶವಾಗುವುದು ಎಂದು ಅವರು ತಿಳಿಸಿದರು, ಈ ವರ್ಷದ ಹತ್ತನೆಯ ತರಗತಿಯಲ್ಲಿ ಅತಿ ಹೆಚ್ಚು ಮಾರ್ಕ್ಸ್ ಪಡೆದು ನಮ್ಮ ಶಾಲೆಗೆ ಕೀರ್ತಿ ತರುವಂತೆ ಸಲಹೆ ನೀಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಹೆಣ್ಣು ಗಂಡಿನ ಲಿಂಗಾನುಪಾತದ ವ್ಯತ್ಯಾಸಗಳ ಬಗ್ಗೆ ವಿವರ ನೀಡಿದರು, ಒಂದು ಸಾವಿರ ಪುರುಷರಿಗೆ ಒಂದು ಸಾವಿರದ ಹದಿನಾರು ಇರ ಬೇಕಿತ್ತು ಆದರೆ ಇದು ಒಂಬೈನೂರ ಮೂವತ್ತೆರಡು ಇದೆ ಈ ಅಸಮತೋಲನ ವನ್ನು ಸರಿ ಪಡಿಸಲು ಹೆಣ್ಣಾಗಲಿ ಗಂಡಾಗಲಿ ಕುಟುಂಬಕ್ಕೆ ಎರಡು ಮಕ್ಕಳು ಎಂಬ ಸೂತ್ರ ಪಾಲನೆ ಮಾಡಬೇಕು, ಹೆಣ್ಣು ಸಂತತಿ ಕಡಿಮೆ ಯಾದರೆ ಉದ್ಭವಿಸುವ ಹೆಣ್ಣು ಮಕ್ಕಳ ಮಾರಾಟ, ಲೈಂಗಿಕ ದೌರ್ಜನ್ಯ, ಬಹು ಪತಿತ್ವ ಇಂತಹ ಕೀಳು ಸಮಸ್ಯೆಗಳು ಕಾಣ ಬೇಕಾಗಬಹುದು, ಲಿಂಗ ತಾರತಮ್ಯ ಮಾಡುವುದನ್ನೆ ಮೊದಲು ಬಿಡ ಬೇಕು ಸಮಾನ ಆಸಕ್ತಿಗನುಗುಣವಾಗಿ ಓದಿಸ ಬೇಕು, ಅವರಿಗಿಷ್ಷವಾದ ಕ್ಷೇತ್ರದಲ್ಲಿ ಮುಂದುವರಿಯಲು ಬಿಡ ಬೇಕು, ಅವರಿಗಿಷ್ಟವಿಲ್ಲದ ಕ್ಷೇತ್ರದಲ್ಲಿ ಹೋಗಲು ಒತ್ತಡ ಹಾಕ ಬಾರದು, “ಬೇಟಿ ಬಚಾವೋ, ಬೇಟಿ ಪಡಾವೋ” ಎಂಬ ಸರ್ಕಾರದ ಘೋಷಣೆಯಂತೆ ನೋಡಿಕೊಳ್ಳಬೇಕು, ಇದಕ್ಕಾಗಿ ಸರ್ಕಾದ ಸುಕನ್ಯಾ ಸಂವೃದ್ಧಿ , ಭಾಗ್ಯಲಕ್ಷ್ಮಿ ಯೋಜನೆಗಳು ತುಂಬಾ ಸಹಕಾರಿಯಾಗಿವೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಮಕ್ಕಳಿಂದ ಡ್ರಾಯಿಂಗ್ ಸ್ಪರ್ಧೆ ಏರ್ಪಡಿಸಲಾಗಿದ್ದು ಅದರಲ್ಲಿ ಭ್ರೂಣ ಹತ್ಯೆ ಮಹಾ ಪಾಪ ಎಂಬ ಚಿತ್ರಕ್ಕೆ ಪ್ರಥಮ ಸ್ಥಾನ ಕು:ತೇಜಸ್ವಿನಿ, ಹೆಣ್ಣು ಬಾಳಿನ ಬೆಳಕು ಚಿತ್ರಕ್ಕೆ ದ್ವಿತೀಯ ಸ್ಥಾನ ಕು: ಸುಹಾನ, ಮತ್ತು ಹೆಣ್ಣು ಮಗು ಉಳಿಸಿ ಚಿತ್ರಕ್ಕೆ ತೃತೀಯ ಸ್ಥಾನ ಪ್ರೇರಣಾ ಅವರಿಗೆ ಘೋಷಿಸಿ ಅವರಿಗೆ ಪ್ರಾಂಶುಪಾಲರು ಬಹುಮಾನಗಳನ್ನು ನೀಡಿದರು,

ಈ ಸಂದರ್ಭದಲ್ಲಿ ಆರ್.ಕೆ.ಎಸ್.ಕೆ ಆಪ್ತ ಸಮಾಲೋಚಕ ಪ್ರಶಾಂತ್ ಕುಮಾರ್, ಶಾಲೆಯ ಸಹ ಶಿಕ್ಷಕರಾದ ಹನುಮಂತಪ್ಪ, ರಿಹಾನಾ ಬೇಗಮ್, ಅಕ್ಬರ್ ಅಲಿ, ಸವಿತಾ, ಷಣ್ಮುಖ, ಗೌಸಿಯಾ ಖಾನಮ್, ಭಾಗ್ಯಮ್ಮ,ರೂಪಾ ಕೆ.ಎಮ್, ಶಶಿರೇಖಾ, ಬೋಧಕೇತರ ಸಿಬ್ಬಂದಿ ವೀರೇಶ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here