15 ಸಾವಿರ ಪ್ರಾಥಮಿಕ ಶಿಕ್ಷಕರ ನೇಮಕಾತಿ ತಾತ್ಕಾಲಿಕ ಆಯ್ಕೆ ಪಟ್ಟಿ ರದ್ದು: ಕರ್ನಾಟಕ ಹೈಕೋರ್ಟ್

0
113

ಬಳ್ಳಾರಿ:ಜ:31:- ಲಕ್ಷಾಂತರ ಜನ ಅರ್ಹ ಅಭ್ಯರ್ಥಿಗಳು ತಮ್ಮ ಕನಸಿನ ವೃತ್ತಿಯಾದ ಶಿಕ್ಷಕ ವೃತ್ತಿಗೆ ಸೇರಿಸಿಕೊಳ್ಳುವ ತವಕ ಇದೀಗ ರಾಜ್ಯ ಸರ್ಕಾರ ಮಾಡಿದ ಯಡವಟ್ಟಿನಿಂದ ಹುದುಗಿಹೋಗಿದೆ ಎಂದು
ವೆಂಕಟೇಶ್ ಹೆಗಡೆ, ವಕೀಲರು
ಕೆಪಿಸಿಸಿ ಮಾಧ್ಯಮ ವಕ್ತಾರರು, ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಜಂಟಿ ಸಂಯೋಜಕರು ಆರೋಪಿಸಿದ್ದಾರೆ

ರಾಜ್ಯ ಹೈಕೋರ್ಟ್ ನೀಡಿರುವ ತೀರ್ಪಿನಂತೆ ಒಟ್ಟು 13,363 ಹುದ್ದೆ ಭರ್ತಿಗೆ ಆಯ್ಕೆಮಾಡಿದ್ದ ಅಂತಿ ಅಭ್ಯರ್ಥಿಗಳ ಪಟ್ಟಿಯನ್ನು ಹೈಕೋರ್ಟ್ ರದ್ದುಮಾಡಿ, ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ ಆಗುವಂತೆ ಮಾಡಿದೆ. ಈ ಮೂಲಕ ರಾಜ್ಯ ಸರ್ಕಾರದ ಮತ್ತೊಂದು ಅತಿ ದೊಡ್ಡ ವೈಫಲ್ಯ ಬಯಲಾಗಿದೆ. ಪಿಎಸ್‌ಐ ನೇಮಕಾತಿಯಲ್ಲೂ ಇದೇ ರೀತಿಯ ಯಡವಟ್ಟನ್ನು ರಾಜ್ಯ ಸರ್ಕಾರ ಮಾಡಿತ್ತು. ಕಿಕ್ ಬ್ಯಾಕ್ ಪಡೆದುಕೊಂಡು ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ನಗೆಪಾಟಲಿಗೆ ಈಡಾಗಿತ್ತು. ನಿಯತ್ತಾಗಿ ಪರೀಕ್ಷೆ ಬರೆದವರು ದಿಕ್ಕು ತೋಚದಂತೆ ಆಗಿದ್ದರು.
ಇಲ್ಲೂ ಸಹ ಇದೀಗ ಇಂತಹದ್ದೇ ಫಲಿತಾಂಶಕ್ಕೆ ರಾಜ್ಯ ಸರ್ಕಾರ ಎಡೆಮಾಡಿಕೊಟ್ಟಿದೆ. ಹಲವು ವರ್ಷಗಳಿಂದ ಲಕ್ಷಾಂತರ ಅರ್ಹ ಪದವೀಧರರು ನೇಮಕಾತಿಗಾಗಿ ಕಾಯ್ದಿದ್ದರು. ಅಂತೂ ನೇಮಕಾತಿಗೆ ಸರ್ಕಾರ ಮುಂದಾಯಿತಲ್ಲಾ ಎಂತಲೂ ಖುಷಿಪಟ್ಟಿದ್ದರು. ಆದರೆ, ನೇಮಕಾತಿ ವೇಳೆ ಅತಿಯಾದ ಸ್ವಜನ ಪಕ್ಷಪಾತ, ಅಕ್ರಮ ಎಸಗಿದ್ದು ಬಯಲಾಗಿತ್ತು. ಈ ಪೈಕಿ ಒಂದು ನ್ಯಾಯಾಲಯದ ಮುಂದೆ ಯಾವುದೇ ಅನುಮಾನಗಳಿಗೆ ಎಡೆ ಇಲ್ಲದೆ ಸಾಬೀತಾದ ಹಿನ್ನೆಲೆಯಲ್ಲಿ ರಾಜ್ಯದ ಹೈ ಕೋರ್ಟ್ ಇಡೀ ನೇಮಕಾತಿಯನ್ನು ರದ್ದುಮಾಡಿ ಆದೇಶ ಹೊರಡಿಸಿದೆ.

ರಾಜ್ಯ ಸರ್ಕಾರದ ಅಕ್ರಮ, ಯಡವಟ್ಟಿನ ಕಾರಣದಿಂದ 1768 ಇಂಗ್ಲೀಷ್, 5450 ಗಣಿತ, 4521 ಸಮಾಜ ವಿಜ್ಞಾನ, 1624 ಜೀವ ಶಾಸ್ತ್ರದ ಶಿಕ್ಷಕರ ನೇಮಕಕ್ಕೆ ಎಳ್ಳು ನೀರು ಬಿಟ್ಟಂತಾಗಿದೆ.
ಈ ಖಾಲಿ ಹುದ್ದೆ ನೇಮಕಾತಿಗೆ ಫೆ.22, 2022ರಲ್ಲಿ ಆದೇಶ ಹೊರಡಿಸಿತ್ತು. 70 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ನ.18, 2022ರಂದು ಅಂತಿಮ ಆಯ್ಕೆಪಟ್ಟಿ ಪ್ರಕಟಗೊಂಡಿತ್ತು. ಆಯ್ಕೆ ಪಟ್ಟಿಯಲ್ಲಿ ಹಲವು ದೋಷಗಳು ಕಂಡುಬಂದಿದ್ದವು. ಕೆಲವರಂತೂ ಸಂದರ್ಶನಕ್ಕೇ ಹಾಜರಾಗದವರು ಆಯ್ಕೆಪಟ್ಟಿಯಲ್ಲಿ ಜಾಗ ಪಡೆದುಕೊಂಡಿದ್ದರು.
ಆಯ್ಕೆ ಪ್ರಕ್ರಿಯೆಯಲ್ಲಿ ಸಲ್ಲಿಕೆಯಾದ ಪ್ರಮಾಣ ಪತ್ರಗಳ ಪೈಕಿ ಕೆಲ ವಿವಾಹಿತರು ತಮ್ಮ ಪತಿಯ ಆದಾಯ ಪ್ರಮಾಣ ಪತ್ರದ ಬದಲು ತಂದೆಯ ಆದಾಯ ಪ್ರಮಾಣ ಪತ್ರ ನೀಡಿ ಅರ್ಹತೆ ಗಿಟ್ಟಿಸಿದ್ದಾರೆ ಎಂದು 20 ಜನ ಮಹಿಳಾ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಹೈಕೋರ್ಟ್ ಇಡೀ ನೇಮಕಾತಿಗೆ ತಡೆ ಒಡ್ಡಿದೆ. ಸರ್ಕಾರದ ಯಡವಟ್ಟು ಇದೀಗ 70 ಸಾವಿರ ಜನರ ಕನಸಿಗೆ ತಣ್ಣೀರಿರೆಚಿದೆ ಎಂದು ಹೇಳಿದರು

LEAVE A REPLY

Please enter your comment!
Please enter your name here