‘ಆರೈಕೆಯಲ್ಲಿ ಅಂತರವನ್ನು ಕಡಿತಗೊಳಿಸಿ’: ಎಫ್‍ಪಿಎಐ ವತಿಯಿಂದ ಆರೋಗ್ಯ ಕಾರ್ಯಕ್ರಮ

0
85

ಬಳ್ಳಾರಿ,ಫೆ.10 : ಬಳ್ಳಾರಿ ಜಿಲ್ಲೆಯ ಆರೋಗ್ಯ ಇಲಾಖೆ ಮತ್ತು ನಗರದ ಪ್ಯಾಮಿಲಿ ಪ್ಯ್ಲಾನಿಂಗ್ ಆಸೋಸಿಯಷನ್ ಆಫ್ ಇಂಡಿಯಾ ಶಾಖೆ ವತಿಯಿಂದ ‘ಆರೈಕೆಯಲ್ಲಿ ಅಂತರವನ್ನು ಕಡಿತಗೊಳಿಸಿ’ ಎಂಬ ಆರೋಗ್ಯ ಸುಧಾರಣೆ ಕಾಳಜಿ ಬಗ್ಗೆ ಶಿಬಿರವನ್ನು ರೂಪನಗುಡಿಯಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯವಾಗಿ ಗರ್ಭಕೋಶದ ಸೋಂಕುಹರಡುವಿಕೆ ಮತ್ತು ಗರ್ಭಕೋಶದ ಸಮಸ್ಯೆ, ಮಕ್ಕಳಪಡೆಯುವಲ್ಲಿ ಅಂತರವನ್ನು ಕಾಪಾಡಿಕೊಳ್ಳುವುದು, ಹೆರಿಗೆ ಸಮಯದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವುದು, ಊಟದಲ್ಲಿ ಅಪೌಷ್ಠಿಕತೆಯ ಕೂರತೆ ನಿಬಾಯಿಸುವುದರ ಬಗ್ಗೆ ಸಂಸ್ಥೆಯ ಕಾರ್ಯಕ್ರಮದ ಅಧಿಕಾರಿಯಾದ ಎಂ.ಉಮೇಶ್ ಕುಮಾರ್ ಮತ್ತು ವಿಜಯಲಕ್ಷ್ಮಿ ಅವರು ಮಾಹಿತಿ ನೀಡಿದರು.
ಎನ್.ಡಿ.ಸಿ. ಸಮುದಾಯದ ವೈದ್ಯಾಧಿಕಾರಿಗಳಾದ ಡಾ.ನಿಜಾಮುದ್ದೀನ್ ಅವರು ಮಾತನಾಡಿ, ಮಹಿಳೆಯರು ಈ ಕ್ಯಾನ್ಸರ್ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಹೊಂದಿ ಅದು ಉಲ್ಬಣವಾಗದಂತೆ ನೋಡಿಕೊಳ್ಳಬೇಕು ಎಂದು ಕರೆನೀಡಿದರು.
ಪುರುಷರೂ ಸಹ ದುಷ್ಚಟಗಳಿಂದ ದೂರ ಇದ್ದರೆ ಅದರಿಂದಾಗುವ ಕೆಟ್ಟ ಪರಿಣಾಮದಿಂದ ದೂರವಿರಬಹುದು ಎಂದು ಹೇಳಿದರು.

ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾದಿಕಾರಿಗಳಾದ ವಿರೇಂದ್ರ ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರೂಪನಗುಡಿ ಗ್ರಾಮಪಂಚಾಯ್ತಿ ಅದ್ಯಕ್ಷರಾದ ನಾಗರಾಜ, ಮುಖ್ಯ ಅತಿಥಿಗಳಾಗಿ ಜಿಲ್ಲಾ ಸರ್ವಕ್ಷಣಾ ಅಧಿಕಾರಿಗಳಾದ ಡಾ.ಮರಿಯಂಬಿ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ.ಶಾರದ, ದಂತ ತಜ್ಞರಾದ ಡಾ.ವಿಶಾಲಾಕ್ಷಿ ಹಾಗೂ ಎನ್.ಸಿ.ಡಿ. ಮೇಲ್ವಿಚಾರಕರಾದ ಡಾ.ಜಬೀನಾ ಭಾಗವಹಿದ್ದರು ಹಾಗೂ ಆರೋಗ್ಯ ಸಿಬ್ಬಂದಿವರ್ಗದವರು ಮತ್ತು ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸದರಿ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಎಫ್.ಪಿ.ಎ.ಆಯ್ ವತಿಯಿಂದ ಗರ್ಭಕೊರಳಿನ ಕ್ಯಾನ್ಸ್‍ರ್ ಅನ್ನು ಪತ್ತೆಹಚ್ಚುವ ಶಿಬಿರ ಮಾಡಲಾಯಿತು ಹಾಗೂ ಅಧಿಕ ಮಹಿಳೆಯರಿಗೆ ಪರೀಕ್ಷಿಸಲಾಯಿತು.

LEAVE A REPLY

Please enter your comment!
Please enter your name here