ನಕಲಿ ಗೊಬ್ಬರ ಬೀಜ ಔಷಧಿ ಮಾರಾಟ ಮಾಡಿದರೆ ಕಠಿಣ ಕ್ರಮ..!!

0
268

ವಿಜಯನಗರ/ಕೊಟ್ಟೂರು:05:-ಕೂಡ್ಲಿಗಿ ಹಾಗೂ ಕೊಟ್ಟೂರು ತಾಲೂಕಿನ ಎಲ್ಲಾ ಕೃಷಿ ಪರಿಕರಗಳ ಮಾರಟಗಾರರು ಯಾವುದೇ ಕಾರಣಕ್ಕೂ ಪರವನಿಗೆಯಿಲ್ಲದೆ ಗೊಬ್ಬರ ಬೀಜ ಕ್ರೀಮಿನಾಶಕಗಳನ್ನು ಮಾರಾಟ ಮಾಡುವಂತಿಲ್ಲ, ಮಾರಾಟ ಮಾಡಿದವರ ವಿರುದ್ಧ ದೂರ ಬಂದಲ್ಲಿ ಕೂಡಲೇ ಅವರ ಅಂಗಡಿಯ ಪರವಾನಿಗೆ ರದ್ದು ಪಡಿಸಿ ದೂರು ದಾಖಾಲಿಸಲಾಗುವದು ಎಂದು ವಿಜಯನಗರ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಶರಣಪ್ಪ ಮುದಗಲ್ ಎಚ್ಚರಿಕೆ ನೀಡಿದರು.
ಇಂದು ಕೊಟ್ಟೂರಿನ ಗುರುದೇವ ಶಾಲೆಯಲ್ಲಿ ನಡೆದ ಕೊಟ್ಟೂರು ಹಾಗೂ ಕೂಡ್ಲಿಗಿ ತಾಲೂಕಿನ ಬೀಜ,ಕೀಟನಾಶಕ, ಗೊಬ್ಬರ ಮಾರಟಗಾರರ ಸಭೆಯಲ್ಲಿ ಮಾತನಾಡುತ್ತಾ ಕೆಲವು ಹಳ್ಳಿಗಳಲ್ಲಿ ಪ್ರಮುಖ ಕಂಪನಿಗಳ ಹೆಸರಿನಲ್ಲಿ ನಕಲಿ ರಸಗೊಬ್ಬರವನ್ನು ಲಾರಿಯಲ್ಲಿ ತುಂಬಿಕೊಂಡು ಬಂದು ಕಡಿಮೆ ಧರದಲ್ಲಿ ಮಾರಾಟ ಮಾಡಿರುವುದು ದೂರಗಳು ಕಂಡು ಬಂದಿದ್ಧು ರೈತರು ಹಾಗೂ ರಸಗೊಬ್ಬರ ಅಂಗಡಿ ಮಾಲೀಕರು ಇಲಾಖೆ ಗಮನಕ್ಕೆ ತಂದು ಇಲಾಖೆ ಅಧಿಕಾರಿಗಳಿಗೆ ಸಹಕರಿಸಬೇಕೆಂದು ಕೋರಿದರು.

ಕೊಟ್ಟೂರು ತಾಲೂಕಿಗೆ ಹಂಚಿಕೆಯಾಗಿರುವ ರಸಗೊಬ್ಬರವು ಬೇರೆ ತಾಲೂಕಿನ ರೈತರಿಗೆ ಮಾರಾಟಮಾಡಬಾರದು ಅಲ್ಲದೆ ಯಾವುದೇ ಕಾರಣಕ್ಕೂ ಲಾರಿಗಳಲ್ಲಿ ಗೊಬ್ಬರ ತಂದು ಹಳ್ಳಿಗಳಲ್ಲಿ ಮಾರಾಟ ಮಾಡುವಂತಿಲ್ಲ ಹಾಗೂ ನಕಲಿ ಬಿತ್ತನೆ ಬೀಜ ಯಾವುದೇ ಹಳ್ಳಿಗೆ ಬಂದಲ್ಲಿ ಸಮೀಪದ ಪೋಲಿಸ್ ಠಾಣೆಗೆ ಅಥವಾ ಕೃಷಿ ಇಲಾಖೆ ಗೆ ಮಾಹಿತಿ ನೀಡಿ.ಅಂತಹ ಮಾಲನ್ನೂ ತರುವ ಗಾಡಿಗಳನ್ನೂ ಸೀಜ್ ಮಾಡಿ ಕೇಸ್ ದಾಖಲಿಸಲಾಗುವುದು. ಎಂದರು.

ಈ ಸಂದರ್ಭದಲ್ಲಿ ಕೂಡ್ಲಿಗಿ ತಾಲೂಕು ಸಹಾಯಕ ಕೃಷಿ ನಿರ್ದೇಶಕ ವಾಮದೇವ ಕೆ, ಜಿಲ್ಲಾ ಜಾಗೃತದಳ ಕೋಶ ಸಹಾಯಕ ಕೃಷಿ ನಿರ್ದೇಶಕರು ನಾಗರಾಜ್ ಕೃಷಿ ಅಧಿಕಾರಿಗಳಾದ ನೀಲಾನಾಯ್ಕ್, ಪುಷ್ಪ ಅಲ್ನಾವರ್ ಶ್ಯಾಮಸುಂದರ್, ಚೈತ್ರಾ ಗುರುಬಸವರಾಜ್ ಹಾಗೂ ಕೊಟ್ಟೂರು ಕೂಡ್ಲಿಗಿ ತಾಲೂಕಿನ ಕೃಷಿ ಪರಿಕರಗಳ ಮಾರಾಟಗಾರರು ಉಪಸ್ಥಿತರಿದ್ದರು.

ವರದಿ: ಶಿವರಾಜ್ ಗಡ್ಡಿ

LEAVE A REPLY

Please enter your comment!
Please enter your name here