ಮುಟ್ಟಿನ ನೈರ್ಮಲ್ಯ ಕುರಿತು ಹೆಣ್ಣುಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಅರಿವು ನೀಡಬೇಕು; ಅಧ್ಯಕ್ಷೆ ನಾಡಿಗರ ಹಂಪಮ್ಮ ಹಳ್ಳದಪ್ಪ,

0
313

ಸಂಡೂರು:17:ಪೆ:-ತಾಲೂಕಿನ ತಾಳೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಬನ್ನಿಹಟ್ಟಿ ಪಂಚಾಯತಿ ಮತ್ತು ತಾಳೂರು ಪಂಚಾಯತಿ ಸಹಯೋಗದಲ್ಲಿ ಆಯೋಜಿಸಲಾದ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇದೊಂದು ಒಳ್ಳೆಯ ಅಭಿಯಾನ ಮಕ್ಕಳಿಂದ ಮುದುಕರ ವರೆಗೂ ಆರೋಗ್ಯವನ್ನು ಕಾಪಾಡಲು ಈ ಅಭಿಯಾನ ಹಮ್ಮಿಕೊಂಡಿರುವುದು ಸಂತೋಷದ ವಿಷಯ,ಮುಂದಿನ ದಿನಗಳಲ್ಲಿ ಅನುಷ್ಠಾನ ಸಮರ್ಪಕವಾಗಿ ಆಗಬೇಕಿದೆ ಎಂದು ಅವರು ತಿಳಿಸಿದರು,

ಬನ್ನಿ ಹಟ್ಟಿ ಗ್ರಾ.ಪಂ ಅಧ್ಯಕ್ಷೆ ನೀಲಮ್ಮ ಎರ್ರಪ್ಪ ಅವರು ಶುಚಿ ಪ್ಯಾಡ್ ಗಳನ್ನು ಉಚಿತವಾಗಿ ಪೂರೈಸಿದರೆ ಶುಚಿತ್ವದ ಕಡೆ ಹೆಣ್ಣುಮಕ್ಕಳು ಹೆಚ್ಚು ಗಮನ ಕೊಡುವರು, ಅಂಗಡಿಗೆ ಹೋಗಿ ತರಲು ಸಂಕೋಚ ಎನಿಸುವುದು, ಇದನ್ನು ತಪ್ಪಿಸಲು ಶುಚಿ ಪ್ಯಾಡ್ ಗಳನ್ನು ಉಚಿತವಾಗಿ ಪೂರೈಸಿ ಎಂದು ಸಲಹೆ ನೀಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಕ್ಷಯರೋಗ ಮುಕ್ತತೆ, ಮಾನಸಿಕ ಆರೋಗ್ಯ, ರಕ್ತದೊತ್ತಡ, ಮಧುಮೇಹ ಕುರಿತು, ಅಪ್ತ ಸಮಾಲೋಚಕ ಪ್ರಶಾಂತ್ ಕುಮಾರ್ ಅವರು ಹದಿಹರೆಯದವರ ಅರೋಗ್ಯ, ಸ್ನೇಹ ಕ್ಲಿನಿಕ್ ಬಗ್ಗೆ ಮಾಹಿತಿ, ಅಂಗನವಾಡಿ ಮೇಲ್ವಿಚಾರಕಿ ಚೇತನಗೌಡ್ರು ಅವರು ಅನಿಮಿಯಾ, ಬಾಲ್ಯ ವಿವಾಹ, ಅಪೌಷ್ಟಿಕತೆ ಬಗ್ಗೆ ಮಾಹಿತಿ ನೀಡಿದರು,

ಈ ಸಂದರ್ಭದಲ್ಲಿ ಎರಡೂ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಪಕ್ಕಿರಪ್ಪ, ಸದಸ್ಯರಾದ ಕನಕಪ್ಪ, ಆಶಾ ಕಾರ್ಯಕರ್ತೆ ಶಾಂತಮ್ಮ, ಲಕ್ಷ್ಮಿ,ಭಾಗ್ಯ,ಮಂಗಳ,ನೀಲಮ್ಮ,ರೇಣುಕಾ,ನಿಂಗಮ್ಮ, ಅಂಗನವಾಡಿ ಕಾರ್ಯಕರ್ತೆ ಸುನಂದ,ರುದ್ರಮ್ಮ,ಚಂದ್ರಕಲಾ,ಸುಶೀಲಮ್ಮ, ಪಾರ್ವತಿ, ಅರುಣಾ,ವೀಣಾ, ಪಕ್ರುಭಿ, ಯಂಕಮ್ಮ,ಈರಮ್ಮ, ರೀಡ್ಸ್ ನ ಸಿಬ್ಬಂದಿ ಯಲ್ಲಮ್ಮ ಮತ್ತು ಕೆ.ಹೆಚ್.ಪಿ.ಟಿ ಸಿಬ್ಬಂದಿ ವಿನೋದ, ಗ್ರಾ.ಪಂ ಸಿಬ್ಬಂದಿ ಕತಿಯಪ್ಪ, ಕಲ್ಲಪ್ಪ, ಮೋಲಾಲಿ, ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಪ್ರತಿನಿಧಿಗಳು, ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here