ಸಮಾಜದಲ್ಲಿ ಶಾಂತಿ, ಸಾಮರಸ್ಯ, ಸಾಮಾಜಿಕ ನ್ಯಾಯ ಮತ್ತು ಸಮಾನತೆ ನೆಲೆಸಬೇಕಾದರೆ ದೇಶಕ್ಕೆ ಸಂವಿಧಾನ ಅಗತ್ಯ. ಸಂವಿಧಾನದ ಅಗತ್ಯ ಏನು ಎಂದು ಪ್ರಶ್ನಿಸುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಆಶಯ ಅರ್ಥವಾದರೆ ಮಾತ್ರ ಅದರ ಅವಶ್ಯಕತೆ ಅರಿವಾಗುತ್ತದೆ;-ತಹಶೀಲ್ದಾರ್ ಕೆಎಂ ಗುರುಬಸವರಾಜ್

0
100

ರಾಜ್ಯದ ಅರ್ಥವ್ಯವಸ್ಥೆ ಸಂಪೂರ್ಣ ಕುಸಿದಿದ್ದು ವಾರ್ಷಿಕ 25 ಸಾವಿರ ಕೋಟಿ ರೂ. ಸಾಲ ಮಾಡಿ ವೇತನ, ಪಿಂಚಣಿ ಪಾವತಿಸುವ ಅನಿವಾರ್ಯತೆ ಎದುರಾಗಿದೆ ಎಂದು ಶಾಸಕ ಹಾಗೂ ಸಿಎಲ್‌ಪಿ ಕಾರ್ಯದರ್ಶಿ ಈ.ತುಕಾರಾಮ್ ಬೇಸರ ವ್ಯಕ್ತಪಡಿಸಿದರು.
ಅವರು ಪಟ್ಟಣದ ಛತ್ರಪತಿ ಶಿವಾಜಿ ವಿದ್ಯಾಮಂದಿರದ ಆವರಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದರು. ಬಡತನ, ಅಪೌಷ್ಟಿಕತೆ, ಅನಕ್ಷರತೆ ದೇಶವನ್ನು ಕಾಡುತ್ತಿದೆ. ಶಾಸಕಾಂಗದಲ್ಲಿ ಮೌಲ್ಯಗಳು ಕುಸಿಯುತ್ತಿವೆ. ಮಹಾತ್ಮರ ತ್ಯಾಗ ಬಲಿದಾನದಿಂದ ದೊರೆತ ಸ್ವಾತಂತ್ರದ ಸದುಪಯೋಗ, ಸಂವಿಧಾನದ ಆಶಯಗಳ ಈಡೇರಿಕೆಯ ಕುರಿತು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು

ನಂತರ ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸಂವಿಧಾನ ರಚನೆ, ಆಶಯಗಳು ಸೇರಿದಂತೆ ಹಲವು ಮಹತ್ವದ ಸಂಗತಿಗಳನ್ನು ವಿವರಿಸಿ ಮಾತನಾಡಿ

ಸಂವಿಧಾನ ನ್ಯಾಯಾಲಯ ಹಾಗೂ ಕಾನೂನು ಮಾಡುವವರಿಗೆ ಮಾತ್ರ ಸಂಬಂಧಿಸಿದ್ದು ಎನ್ನುವ ತಪ್ಪು ಕಲ್ಪನೆ ಇದೆ. ಇದಕ್ಕೆ ಸಂವಿಧಾನ ಅರಿವಿನ ಕೊರತೆಯೇ ಪ್ರಮುಖ ಕಾರಣ ಎಂದು ತಹಶೀಲ್ದಾರ್, ಕೆಎಂ ಗುರುಬಸವರಾಜ್ ಹೇಳಿದರು

ಪಟ್ಟಣದ ಶ್ರೀ ಛತ್ರಪತಿ ವಿದ್ಯಾಮಂದಿರ ಶಾಲೆಯ ಮೈದಾನದಲ್ಲಿ 74ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದ ಇಂದಿನ ಸಮಸ್ಯೆ ಮತ್ತು ಸವಾಲುಗಳಿಗೆ ಭಾರತೀಯ ಸಂವಿಧಾನ ಕಾರಣ ಅಲ್ಲ. ಬದಲಿಗೆ ಆಡಳಿತಗಾರರು ಸಂವಿಧಾನವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ವಿಫಲರಾಗಿದ್ದಾರೆ. ಅದರ ಮೂಲ ತತ್ವ ಮತ್ತು ಆಸೆಗಳನ್ನು ಅರ್ಥ ಮಾಡಿಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಂವಿಧಾನದಲ್ಲಿರುವ ತತ್ವ ಮತ್ತು ಆಶಯಗಳು ಬಹು ಮೌಲ್ಯದಿಂದ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಎಲ್ಲ ರೀತಿಯ ಅಸಮಾನತೆ ಹೋಗಲಾಡಿಸಬಹುದು. ಸ್ವಾತಂತ್ರ್ಯ ನಂತರ ಭಾರತದಲ್ಲಿ ಸಂವಿಧಾನ ರಚನೆ ಹಾಗೂ ಅದನ್ನು ಸ್ವೀಕಾರ ಮಾಡಿದ್ದು ಬಹು ದೊಡ್ಡ ಸಾಧನೆಯಾಗಿದೆ. ಭಾರತದ ಸಂವಿಧಾನ ಅತ್ಯಂತ ಪ್ರಸ್ತುತವಾದುದ್ದು ಎಂಬ ಹೆಗ್ಗಳಿಕೆ ಇದೆ. ಪ್ರತಿ ವಿದ್ಯಾರ್ಥಿಯೂ ಸಂವಿಧಾನ ಓದಿ ಅರ್ಥೈಸಿಕೊಳ್ಳುವ ಅಗತ್ಯವಿದೆ ಎಂದರು.

ಜಾತ್ಯತೀತ ಸಮಾಜ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯ ನೀಡುವುದು ಸಂವಿಧಾನದ ಮೂಲ ಉದ್ದೇಶ. ಇದರ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂವಿಧಾನ ಬಗ್ಗೆ ಪ್ರತಿಶಾಲಾ ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿಯು ತಿಳಿಯುವಂತಾಗಬೇಕು ಎಂದರು.

ರೈತ ಸಂಘದಿಂದ ಜನರಿಗೆ ಕಾಯಕಯೋಗಿ ಪ್ರಶಸ್ತಿ ನೀಡಲಾಯಿತು. ಅಂತಾರಾಷ್ಟ್ರೀಯ ಜಾಂಬೂರಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಸೌಟ್ಸ್ ಮತ್ತು ಗೈಡ್ಸ್‌ನ ಕಾರ್ಯದರ್ಶಿ ಜಿ.ಎಸ್ .ಸೋಮಪ್ಪ, ಖಜಾಂಚಿ ಜಾವೇದ್‌ ಪ್ರಮಾಣ ಪತ್ರಗಳನ್ನು ವಿತರಿಸಿದರು.

ಈ ಸಂಧರ್ಭದಲ್ಲಿ ತಾ.ಪಂ.ಇಒ ಷಡಾಕ್ಷರಯ್ಯ, ಪುರಸಭೆ ಅಧ್ಯಕ್ಷೆ ಅನಿತಾ ವಸಂತ್ ಕುಮಾರ್, ಉಪಾಧ್ಯಕ್ಷ ವೀರೇಶ ಸಿಂಧೆ, ಮುಖ್ಯಾಧಿಕಾರಿ ಖಾಜಾ ಮೈನುದ್ದೀನ್, ಸಿಪಿಐ ಹಾಲೇಶ, ಆರ್‌ಎಫ್‌ಒಗಳಾದ ಆರ್.ಉಮೇಶ, ಗಿರೀಶ್ ಕುಮಾರ್, ಪಿಡಬ್ಲ್ಯುಡಿ ಎಇಇ ಕೃಷ್ಣಾನಾಯ್ಕ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ, ಬಿಸಿಯೂಟ ಎಡಿ ಶ್ರೀಧರ್ ಮೂರ್ತಿ, ಪಶುಸಂಗೋಪನೆ ಇಲಾಖೆ ಎಡಿ ಡಾ.ವಲಿಭಾಷಾ, ಟಿಪಿಇಒ ಷಪ್ಪ, ಪುರಸಭೆ ಸದಸ್ಯರಾದ ಕೆಎ.ಸುರೇಶ, ಸಂತೋಷ್, ಸಿ.ಅಶೋಕ, ಎಲ್.ಎಚ್.ಶಿವಕುಮಾರ್, ದೇವೇಂದ್ರಪ್ಪ, ಪಂಪಾಪತಿ ಇತರರು ಇದ್ದರು. ಬಿಇಒ ಮೈಲೇಶ ಬೇವೂರ್, ಶಿಕಕ ಪ್ರದೀಪ್ ಕುಮಾರ್ ನಿರ್ವಹಿಸಿದರು.

LEAVE A REPLY

Please enter your comment!
Please enter your name here