ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೃತಿಗಳಿಂದ ಮೂಡಿದ ಶೋಭೆ ವಿಶಿಷ್ಟವಾದದ್ದು; ತಹಶೀಲ್ದಾರ್ ಹೆಚ್.ಜೆ.ರಶ್ಮಿ

0
98

ಸಂಡೂರು:ನ:22:- ಸಂಡೂರು ಪಟ್ಟಣದ ತಾಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಹೆಚ್.ಜೆ.ರಶ್ಮಿ ಯವರು ಕನಕದಾಸರ ಫೋಟೋಗೆ ಹೂಮಾಲೆಯನ್ನು ಹಾಕಿ ಪೂಜೆಯನ್ನು ನೆರವೇರಿಸಿ ಕನಕ ಜಯಂತಿಯನ್ನು ಆಚರಿಸಿದರು

ಕೊರೊನಾ ನಿಯಮಗಳನ್ನು ಅನುಸರಿಸಿ ಸರಳವಾಗಿ ಆಚರಿಸಿದ ಕನಕ ಜಯಂತಿಯ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರಶ್ಮಿ ಅವರು ಮಾತನಾಡುತ್ತ..

ಕನಕದಾಸರೆಂದರೆ ನೆನಪಾಗುವುದು ಸಂಗೀತದ ಮೂಲಕ ಕರ್ಣಾಮೃತ ಒದಗಿಸುವ ಅವರ ನೂರಾರು ರಚನೆಗಳು. ಕನಕದಾಸರು ಹದಿನೈದು – ಹದಿನಾರನೇ ಶತಮಾನಗಳಲ್ಲಿದ್ದ ಜನಪ್ರಿಯವಾದ ಭಕ್ತಿ ಪಂಥದ ಪ್ರಮುಖ ಹರಿದಾಸರಲ್ಲಿ ಒಬ್ಬರು. ಪುರಂದರದಾಸರ ಸಮಕಾಲೀನರಾಗಿದ್ದು ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಅಮೂಲ್ಯ ಕಾಣಿಕೆಗಳನ್ನಿತ್ತವರು.

ಕನಕದಾಸರು ಜನಿಸಿದ್ದು ಧಾರವಾಡ ಜಿಲ್ಲೆಯ ಬಾಡ ಎಂಬಲ್ಲಿ. ನಂತರ ಕಾಗಿನೆಲೆಯಲ್ಲಿ ನೆಲೆಸಿದಂತೆ ತೋರುತ್ತದೆ. ಅದು ಈಗ ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿದೆ. ಕನಕದಾಸರ ಕೀರ್ತನೆಗಳೆಲ್ಲವೂ ಕಾಗಿನೆಲೆಯ ಕೇಶವನ ಅಡಿದಾವಾರೆಗಳಿಗೇ ಅರ್ಪಿತ. ಅವರು ತಮಗೆ ದೊರೆತ ನಿಧಿಯಿಂದ ಕಾಗಿನೆಲೆಯ ನರಸಿಂಹ ದೇವಾಲಯವನ್ನು ಜೀರ್ಣೋದ್ದಾರ ಮಾಡಿದರು.ಬಾಡ ಗ್ರಾಮದಲ್ಲಿದ್ದ ಆದಿಕೇಶವ ಮೂರ್ತಿಯನ್ನು ತಂದು ಕಾಗಿನೆಲೆಯಲ್ಲಿ ಪ್ರತಿಷ್ಠೆ ಮಾಡಿದರೆಂದು ತಿಳಿದು ಬರುತ್ತದೆ. ಈ ರೀತಿ ತಿಮ್ಮಪ್ಪ ನಾಯಕನಾಗಿದ್ದವರು ತಮಗೆ ದೊರೆತ ನಿಧಿಯಿಂದ ಕನಕನಾಯಕರೆಂಬ ಹೆಸರನ್ನು ಪಡೆದು ಮುಂದೆ ಕನಕದಾಸರಾಗಿ ಕಂಗೊಳಿಸಿದರು. ಕನಕರು ‘ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರ’ ಎಂದು ಎಲ್ಲ ಜಾತಿ ಪದ್ಧತಿಗಳ ಮೂಲವನ್ನೇ ಪ್ರಶ್ನಿಸಿದವರು. ಕನಕದಾಸರು ವ್ಯಾಸರಾಯರ ನೆಚ್ಚಿನ ಶಿಷ್ಯರೂ ಹೌದು. ಹೇಳಿದರು

ಈ ಸಂಧರ್ಭದಲ್ಲಿ ತಹಶೀಲ್ದಾರ್ ರಶ್ಮಿ ಹಾಗೂ ಸಮಾಜದ ಮುಖಂಡರು, ವಿವಿಧ ರೈತ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು, ಸಮಾಜ ಕಲ್ಯಾಣ ಇಲಾಖೆಯ ಎನ್ ಕೆ ವೆಂಕಟೇಶ್, ಬಸವರಾಜ್ ಮಸೂತಿ, ಸತ್ಯಪ್ಪ ಶ್ರೀಪಾದಸ್ವಾಮಿ,ಮತ್ತು ಕಛೇರಿಯ ಅಧಿಕಾರಿಗಳು, ನೌಕರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here