ವಿಜಯನಗರ ಜಿಲ್ಲೆ: ಸಂಗ್ರಹಿಸಿದ 4.76ಟನ್ ಪ್ಲಾಸ್ಟಿಕ್ ಜಿಂದಾಲ್ ಸಿಮೆಂಟ್ ಕಾರಖಾನೆಗೆ ರವಾನೆ

0
159

ವಿಜಯನಗರ(ಹೊಸಪೇಟೆ),ನ.18: ವಿಜಯನಗರ ಜಿಲ್ಲಾಡಳಿತ,ಜಿಪಂ ಮತ್ತು ಕೇಂದ್ರ ಸರಕಾರದ ಯವಜನಸೇವಾ ಹಾಗೂ ಕ್ರೀಡಾ ಸಚಿವಾಲಯದ ನೆಹರು ಯುವಕೇಂದ್ರದಿಂದ ಅಜಾದಿ ಕಾ ಅಮೃತ್ ಮಹೋತ್ಸವ ಅಂಗವಾಗಿ ಅ.2ರಿಂದ ಅ.31ರವರೆಗೆ ಹಮ್ಮಿಕೊಂಡಿದ್ದ ವಿಶೇಷ ಸ್ವಚ್ಛ ಭಾರತ ಕಾರ್ಯಕ್ರಮದಡಿ ಪ್ಲಾಸ್ಟಿಕ್ ಸಂಗ್ರಹ ಕಾರ್ಯಕ್ರಮದಡಿ ಜಿಲ್ಲೆಯಲ್ಲಿ 4763 ಕೆಜಿ ಪ್ಲಾಸ್ಟಿಕ್ ಸಂಗ್ರಹಿಸಲಾಗಿತ್ತು.
4.76 ಟನ್ ಎಲ್ಲ ಪ್ಲಾಸ್ಟಿಕ್ ವಸ್ತುಗಳನ್ನು ಮತ್ತು ಮರುಬಾಳಿಕೆಯಾಗದ ಪ್ಲಾಸ್ಟಿಕ್ ವಸ್ತುಗಳನ್ನು ಕಮಲಾಪುರ ಸಮೀಪದ ದರೋಜಿ ಪ್ರಕೃತಿ ನಿರೂಪಣಾ ಕೇಂದ್ರದ ಆವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಚ್ಛ ಭಾರತ ಸಮಾರೋಪ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಜೆಎಸ್‍ಡಬ್ಲ್ಯೂ ಸಿಮೆಂಟ್ ಕಾರಖಾನೆಗೆ ಕಳುಹಿಸಿಕೊಟ್ಟರು.
ಸಂಗ್ರಹಿಸಿದ ಪ್ಲಾಸ್ಟಿಕ್‍ಗಳನ್ನು ತುಂಬಿದ ವಾಹನಗಳಿಗೆ ಡಿಸಿ ಅನಿರುದ್ಧ ಶ್ರವಣ್ ಅವರು ಹಸಿರು ನಿಶಾನೆ ನೀಡುವುದರ ಮೂಲಕ ಕಳುಹಿಸಿಕೊಟ್ಟರು.
ನೆಹರು ಯುವಕೇಂದ್ರದ ಜಿಲ್ಲಾ ಅಧಿಕಾರಿ ಮೊಂಟು ಪಾತರ್ ಅವರು ಅವಳಿ ಜಿಲ್ಲೆಗಳಲ್ಲಿ 11 ಟನ್ ಪ್ಲಾಸ್ಟಿಕ್ ವಸ್ತುಗಳ ಸಂಗ್ರಹ ಗುರಿ ಇಟ್ಟುಕೊಳ್ಳಲಾಗಿತ್ತು; 13.8 ಟನ್ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ರಮೇಶ, ವಿವಿಧ ನಗರ ಸ್ಥಳೀಯ ಸಂಸ್ಥೆಗಳ ಪೌರಾಯುಕ್ತರು,ಮುಖ್ಯಾಧಿಕಾರಿಗಳು ಮತ್ತು ಎಂಜನಿಯರ್‍ಗಳು ಹಾಗೂ ಸಿಬ್ಬಂದಿ ಇದ್ದರು.

LEAVE A REPLY

Please enter your comment!
Please enter your name here