ಕೆಟ್ಟ ಅಲೋಚನೆಗಳನ್ನು ತ್ಯಜಿಸುವ ಪಣದೊಂದಿಗೆ ಹೊಳಿ ಆಚರಿಸಲು ಕೂಡ್ಲಿಗಿ ಡಿವೈಎಸ್ಪಿ ಮಲ್ಲಪ್ಪ ವಿ,ಮಲ್ಪಾಪುರ ಕರೆ.

0
176

ಹಗರಿಬೊಮ್ಮನಹಳ್ಳಿ, ಮಾ,4
ನಮ್ಮಲ್ಲಿರುವ ಕೆಟ್ಟ ಆಲೋಚನೆಗಳನ್ನು ತ್ಯಜಿಸುವ ಮೂಲಕ ಈ ಸಲದ ಹೊಳಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಕೂಡ್ಲಿಗಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಮಲ್ಲಪ್ಪ ವಿ.ಮಲ್ಲಾಪುರ ಸಾರ್ವಜನಿಕರಿಗೆ ಕರೆ ನೀಡಿದ್ದಾರೆ.

ಶನಿವಾರ ಸಂಜೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಜರುಗಿದ ಹೊಳಿ ಹಬ್ಬದ ಆಚರಣೆಯ ಶಾಂತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉತ್ತರ ಭಾರತ ದಂತೆ ಉತ್ತರ ಕರ್ನಾಟದಲ್ಲೂ ಅದ್ದೂರಿಯಾಗಿಯೇ ಹೊಳಿಯನ್ನು ಆಚರಣೆ ಮಾಡಲಾಗುತ್ತೆ. ಹೀಗಾಗಿ ಹೊಳಿ ಆಚರಣೆಯ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಡುವಂತಹ
ಅಹಿತಕರ ಘಟನೆಗಳು ಕಂಡು ಬಂದರೇ ಕಠಿಣ ಕಾನೂನು ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಸರ್ಕಲ್ ಇನ್ಸ್ ಪೆಕ್ಟರ್ ಮಂಜಣ್ಣ ಮಾತನಾಡಿ, ನಮ್ಮ ಭಾರತ ಜಾತ್ಯಾತೀತ ರಾಷ್ಟ್ರ ಹೀಗಾಗಿ ಹಬ್ಬದಾಚರಣೆಯಲ್ಲಿ ಭಾಗವಹಿಸಲು ಎಲ್ಲರಿಗೂ ಅವಕಾಶವಿದೆ. ನಮ್ಮ ಹಬ್ಬ, ಆಚರಣೆಗಳ ಹಿಂದೆ ಒಂದೊಂದು ಮಹತ್ವಪೂರ್ಣವಾದ ಸಂದೇಶ ಇರುತ್ತದೆ. ಅಂತಹ ಸಂದೇಶಗಳನ್ನು ಪಾಲಿಸಿಕೊಂಡು, ಯಾರಿಗೂ ತೊಂದರೆ ಆಗದಂತೆ ಹೊಳಿ ಆಚರಣೆ ಮಾಡುವಂತೆ ವಿನಂತಿಸಿಕೊಂಡರು.

ಹಿರಿಯ ಪತ್ರಕರ್ತರಾದ ಹುಳ್ಳಿಪ್ರಕಾಶ, ಪುರಸಭೆ ಸದಸ್ಯ ಡಿಎಂ.ಅಜಿಜುಲ್ಲಾ, ಕನ್ನಿಹಳ್ಳಿ ಚಂದ್ರಶೇಖರ, ವಕೀಲ ಚಂದ್ರಶೇಖರ, ಕೆಎಂ.ಶಿವಶಂಕಯ್ಯ ಪಟ್ಟಣದಲ್ಲಿ ಹಬ್ಬದ ಆಚರಣೆಯ ವಿವರಗಳನ್ನು ಸಾರ್ವಜನಿಕರ ಪರವಾಗಿ ಸಭೆಗೆ ತಿಳಿಸಿದರು.

ಪಿಎಸ್ಐ ಗಂಗಣ್ಣ ಅಧ್ಯಕ್ಷತೆಯಲ್ಲಿ ಜರುಗಿದ ಶಾಂತಿ ಸಭೆಯಲ್ಲಿ ನಾಣಿಕೆರಿ ದೈವಸ್ಥರ ಮುಖಂಡರಾದ ಬಾರಿಕರ ಬಾಪೂಜಿ, ಪುರಸಭೆ ಸದಸ್ಯರಾದ ಬಣಕಾರ ಸುರೇಶ, ದೀಪಕ್ ಸಾ ಕಾಠರೆ, ಮುಖಂಡರಾದ ಬೆಳ್ಳಕ್ಕಿ ರಾಮಣ್ಣ, ಸಂದೀಪ್ ಶಿವಮೊಗ್ಗ, ಪೆಟಿಗಿ ಹನುಮಂತರಾವ್, ಭರತ್, ಆನಂದ ಪೂಜರ್, ಅಜ್ಜಿ ಖಾನಾವಾಳಿ ನಾಗರಾಜ, ಕೆಎಂ.ಶಿವಶಂಕರಯ್ಯ, ಪೂಜಾರ ಸಂತೋಷ, ಜಾಧವ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ವಿಶೇಷ ಪೇದೆ ಮಲ್ಲೇಶ ನಾಯ್ಕ್ ನಿರೂಪಿಸಿದರು.

  • ಹುಳ್ಳಿಪ್ರಕಾಶ, ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here