ತೋರಣಗಲ್ಲು ಗ್ರಾಮದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ

0
148

ಸಂಡೂರು:ಜು:26:-ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಸಹಕಾರದೊಂದಿಗೆ “ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ”ಯ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಮಾನವ ಕಳ್ಳ ಸಾಗಾಣಿಕೆ ಮಾಡುವುದು ದೇಶದ ಘನತೆಗೆ ಧಕ್ಕೆ ತರುವ ಕೃತ್ಯ, ಕಳ್ಳ ಸಾಗಾಣಿಕೆಗೆ ಬಲಿಯಾಗುವ ಬಹುತೇಕರು ಮಹಿಳೆಯರು ಮತ್ತು ಮಕ್ಕಳು ಇರುತ್ತಾರೆನ್ನಬಹುದು, ಸಾಗಾಣಿಕೆಗೆ ಬಲಿಯಾದವರೆಲ್ಲಾ ಲೈಂಗಿಕ ದೌರ್ಜನ್ಯ ಕೃತ್ಯಕ್ಕೆ ಬಳಸಿಕೊಳ್ಳುವ, ಅಥವಾ ಜೀತ ಪದ್ಧತಿ ಒಳಪಡಿಸುವುದು, ಅಥವಾ ಮಕ್ಕಳಿಂದ ಭಿಕ್ಷಾಟನೆ ಮಾಡಿಸುವುದು, ಬಾಲ ಕಾರ್ಮಿಕ ಪದ್ದತಿಗೆ ನೂಕುವುದು, ಇಂತಹ ಎಲ್ಲ ಕೃತ್ಯಗಳು ಮನುಕುಲಕ್ಕೆ ಅಗೌರವ ತರುವ ವಿಷಯ, ಪ್ರತಿಯೊಬ್ಬ ಮಾನವರಿಗೆ ಸ್ವತಂತ್ರವಾಗಿ ಗೌರವದಿಂದ ಬದುಕುವ ಹಕ್ಕಿದೆ, ಸರ್ಕಾರ ಮಾನವ ಕಳ್ಳ ಸಾಗಾಣಿಕೆ ಮಾಡುವವರಿಗೆ ಕಠಿಣವಾದ ಶಿಕ್ಷೆ ಇದ್ದರೂ ಕೃತ್ಯಗಳು ಬೆಳಕಿಗೆ ಬಂದಾಗ, ಸಾಗಾಣಿಕೆಯನ್ನು ತಡೆಗಟ್ಟಿ ಬಲಿಯಾದವರಿಗೆ ಸಹಜವಾಗಿ ಬದುಕುವ ಪುನರ್ ವಸತಿ ಕಲ್ಪಿಸುವ ಕ್ರಮ ಕೈಗೊಳ್ಳುತ್ತಿದೆ,ಸಾಗಾಣಿಕೆ ಕೃತ್ಯಗಳು ಎಲ್ಲಿಯಾದರೂ ಕಂಡುಬಂದಾಗ ಉಚಿತ ಸಹಾಯವಾಣಿ 1098 ಅಥವಾ18883737888 ಸಂಖ್ಯೆಗೆ ಕರೆ ಮಾಡಿ ಎಲ್ಲಾ ವಿವರಗಳ ಮಾಹಿತಿ ನೀಡಿ ಇಂತಹ ಕಾನೂನು ಬಾಹಿರ ಚಟುವಟಿಕೆಗಳನ್ನು ಹತ್ತಿಕ್ಕಲು ಮತ್ತು ಸಂವಿಧಾನಲ್ಲಿ ನೀಡಿರುವ ಸಮಾನತೆಯನ್ನು ಸಾಧಿಸಲು ಜನರ ಸಹಕಾರ ಬೇಕಿದೆ, ಹಾಗೂ ಮಾನವ ಕಳ್ಳ ಸಾಗಾಣಿಕೆಯನ್ನು ತಡೆಯಲು ಸರ್ಕಾರೇತರ ಸಂಸ್ಥೆಗಳ ಪಾತ್ರವೂ ದೊಡ್ಡದಿದೆ, ಸಂಸ್ಥೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕಿದೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಲಕ್ಷ್ಮಿಕಂಕಣವಾಡಿ ಅವರು ಮಾತನಾಡಿ ಮಕ್ಕಳನ್ನು ಒಂಟಿ ಒಂಟಿಯಾಗಿ ಆಡಲು ಬಿಡಬಾರದು, ಕುಟುಂಬದವರ ನಿಗಾವಣೆ ಮುಖ್ಯ,ಅಂಗನವಾಡಿಗೆ ಬಿಡುವಾಗ ಮತ್ತು ಕರೆದುಕೊಂಡು ಹೋಗುವಾಗ ಪೋಷಕರು ಜೊತೆಗೆ ಬರಬೇಕು, ಅಪರಿಚಿತ ವ್ಯಕ್ತಿಗಳ ಚಟುವಟಿಕೆಗಳ ಬಗ್ಗೆ ಅನುಮಾನಾಸ್ಪದವಾಗಿ ಕಂಡು ಬಂದಲ್ಲಿ ಪೋಲಿಸ್ ನವರಿಗೆ ಸೂಕ್ಷ್ಮವಾಗಿ ತಿಳಿಸಿ, ಅಥವಾ100 ಕರೆ ಮಾಡಿ ಎಂದು ತಿಳಿಸಿದರು,

ಕಾರ್ಯಕ್ರಮದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆಯಲು ಪ್ರಾಮಾಣಿಕ ಪ್ರಯತ್ನ ಮಾಡುವ ಪ್ರತಿಜ್ಞೆಯನ್ನು ಬಿ.ಹೆಚ್.ಇ.ಒ ಶಿವಪ್ಪ ಅವರು ಬೋಧಿಸಿದರು, ಎಲ್ಲರೂ ಪ್ರತಿಜ್ಞೆಯನ್ನು ಕೈಗೊಂಡರು, ಗ್ರಾಮಸ್ಥರಾದ ರಾಜಶೇಖರ್, ಸಿದ್ದಯ್ಯ ಸ್ವಾಮಿ, ಕವಿತಾ, ಪಾರ್ವತಮ್ಮ, ಲಕ್ಷ್ಮೀ, ಜ್ಯೋತಿ,ಅಕ್ಕಮಹಾದೇವಿ, ಕರೆಮ್ಮ, ಅಳ್ಳಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಶಂಕ್ರಮ್ಮ, ತಿಮ್ಮಕ್ಕ, ಜಯಪ್ರದ,ಮಲ್ಲಮ್ಮ,ಪ್ರತಿಭಾ, ರುದ್ರಮ್ಮ, ಭಾಗ್ಯಮ್ಮ, ಸ್ವಾತಿ,ಎರ್ರಮ್ಮ ಇತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here