ಸ್ವಚ್ಛ ಕೈ ತೊಳೆಯುವುದರಿಂದ ಆರೋಗ್ಯ ಮಟ್ಟ ಸುಧಾರಣೆ; ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ,

0
108

ಸಂಡೂರು: ನ:15: ತಾಲೂಕಿನ ತೋರಣಗಲ್ಲು ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಅಂಗವಾಗಿ ಸ್ವಚ್ಛ ಕೈತೊಳೆಯುವ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸಲಾಯಿತು,
ಈ ಕಾರ್ಯಕ್ರಮ ಉದ್ದೇಶಿಸಿ ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ ಅವರು ಮಾತನಾಡಿ ಮಕ್ಕಳ ಆರೋಗ್ಯ ಮಟ್ಟ ಸುಧಾರಣೆಗೆ ವೈಯಕ್ತಿಕ ಸ್ವತ್ಛತೆಯೂ ಮುಖ್ಯ, ಕೈತೊಳೆಯುವ ವಿಧಾನಗಳ ಬಗ್ಗೆ ಪ್ರಾತ್ಯಕ್ಷಿಕೆ ಮಾಡಿ ತೋರಿಸಿದ್ದು ಉಪಯುಕ್ತವಾಗಲಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಮಾತನಾಡಿ ಸೋಪು ನೀರಿನಿಂದ ಸ್ವಚ್ಛವಾಗಿ ಕೈತೊಳೆಯುವುದರಿಂದ ಹಲವಾರು ಕಾಯಿಲೆಗಳನ್ನು ತಡೆಯಬಹುದು, ಬ್ಯಾಕ್ಟೀರಿಯ ಮತ್ತು ವೈರಸ್ ಹಾಗೂ ಲಾಡಿ, ಕೊಕ್ಕೆ, ಜಂತುಹುಳುಗಳು ಕೈತೊಳೆಯುವುದರಿಂದ ನಮ್ಮ ದೇಹ ಸೇರುವುದನ್ನು ತಪ್ಪಿಸುತ್ತವೆ, ಕೈತೊಳೆಯುವುದರಿಂದ ಅತಿಸಾರ ಭೇದಿ ಮಾತ್ರವಲ್ಲದೆ ಹೊಟ್ಟೆ ನೋವು,ಲಿವರ್, ರಕ್ತ ಹೀನತೆ ಯಂತಹ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರಿಯಾಗುವುದು, ಶೌಚಾಲಯಕ್ಕೆ ಹೋಗಿ ಬಂದ ನಂತರ, ಊಟಕ್ಕೆ ಮುಂಚೆ ಕೈತೊಳೆಯುವ ಅಭ್ಯಾಸ ಮಾಡಿಕೊಳ್ಳಬೇಕು ಮತ್ತು
ಕೈತೊಳೆಯುವ ಸಮಯದಲ್ಲಿ ಸರ್ಕಾರ ನಿಗದಿ ಮಾಡಿದ ಆರು ಸ್ಟೆಪ್ ಗಳನ್ನು ಕಡ್ಡಾಯವಾಗಿ ಅನುಸರಿಸುವಂತೆ ತಿಳಿಸಿದರು,ಹಾಗೆ ಶಾಲೆಯ ಅಡುಗೆ ತಯಾಕರು ಸ್ವಚ್ವತೆಗೆ ಗಮನಕೊಡುವಂತೆ ತಿಳಿಸಿದರು,

ನಂತರ ಆಶಾ ಕಾರ್ಯಕರ್ತೆ ಅನಸೂಯಾ ಮತ್ತು ದೇವಮ್ಮ ಅವರು ಸ್ವಚ್ಚ ಕೈತೊಳೆಯುವ ಆರು ವಿಧಾನಗಳನ್ನು ತೋರಿಸಿದ ಹಾಗೆ ಅಡುಗೆ ತಯಾರಕರು ಮತ್ತು ಮಕ್ಕಳು ಪ್ರಾತ್ಯಕ್ಷಿಕೆ ಮಾಡಿ ತೋರಿಸಿದರು,

ಈ ಸಂದರ್ಭದಲ್ಲಿ ಶಾಲೆಯ ಸಹ ಶಿಕ್ಷಕರಾದ ವಿಶ್ವನಾಥ್, ಅಶೋಕ್, ಅಂಗನವಾಡಿ ಕಾರ್ಯಕರ್ತೆ ಜಯಪ್ರಧ, ಆಶಾ ಕಾರ್ಯಕರ್ತೆ,ಲಕ್ಷ್ಮಿ,ಪಾರ್ವತಿ, ಅಡುಗೆ ತಯಾರಕರಾದ ಭಾಗ್ಯ,ರಾಧಮ್ಮ,ಹುಚ್ಚಮ್ಮ, ಲಲಿತಾ ಮತ್ತು ಮಕ್ಕಳು ಹಾಜರಿದ್ದರು

LEAVE A REPLY

Please enter your comment!
Please enter your name here