ಆಂಧ್ರ ಪ್ರದೇಶದ ಕಾಲುವೆಯಿಂದ ಕರ್ನಾಟಕಕ್ಕೆ ನೀರು ಹರಿಸಿದ ಸಿರುಗುಪ್ಪ ಯುವ ನಾಯಕ ಬಿ. ಮುರಳಿ ಕೃಷ್ಣ

0
865

ಬಳ್ಳಾರಿ ಮಾ.16 ಸಿರುಗುಪ್ಪ ಕ್ಷೇತ್ರದಲ್ಲಿ ಒಳಪಡುವ ಸುಮಾರು 20 ರಿಂದ 22 ಹಳ್ಳಿಗಳಿಗೆ ತಾಳೂರಿನಿಂದ ಕೂಡದರಹಾಳ್ ವರೆಗೆ ಭತ್ತ ಮತ್ತು ಇತರೆ ಬೆಳೆಯನ್ನು ಬೆಳೆದ ಗ್ರಾಮಗಳ ರೈತರು ಕಳೆದ ಕೆಲವು ದಿನಗಳಿಂದ ಈ ಬೇಸಿಗೆಯ ಬೆಳೆಯಾಗಿ ಬೆಳೆದಿರುವ ಭತ್ತ , ಮತ್ತು ಇನ್ನಿತರೆ ಬೆಳೆಗಳಿಗೆ ನೀರು ಸ್ಥಗಿತಗೊಂಡು ನೀರಿನ ತುಂಬಾ ಅಭಾವ ಎದುರಿಸುತ್ತಿದ್ದರು. ಈ ಭಾಗದ ರೈತರು ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಯುವ ನಾಯಕ ಬಿ.ಮುರಳಿ ಕೃಷ್ಣ ಅವರನ್ನು ಸಂಪರ್ಕಿಸಿದಾಗ, ನೀರಿನ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದ ಬೆಳೆಗಳಿಗೆ ನೀರನ್ನ ಹರಿಸುವಂತೆ ಮನವಿ ಮಾಡಿದರು, ತಕ್ಷಣವೇ ಆ ಮನವಿಯನ್ನು ಸ್ಪಂದಿಸಿದ ಬಿ.ಮುರುಳಿ ಕೃಷ್ಣ ಅವರು ಆಂಧ್ರ ಪ್ರದೇಶದ ಕಾರ್ಮಿಕ ಸಚಿವ ಗುಮ್ಮನೂರು ಜಯರಾಮ್ ರವರನ್ನು ರೈತರೊಂದಿಗೆ ತೆರಳಿ ನೀರಿನ ಸಮಸ್ಯೆಯನ್ನು ಕುರಿತು ಚರ್ಚಿಸಿ ನೀರುನ್ನು ಹರಿಸುವಂತೆ ಮಾತನಾಡಿದರು.

ಖುದ್ದಾಗಿ ತಾವೇ ತೆರಳಿ ಯುವ ನಾಯಕ ಬಿ.ಮುರುಳಿ ಕೃಷ್ಣ ಅವರು ಆಂಧ್ರ ಪ್ರದೇಶದ ಕಾರ್ಮಿಕ ಸಚಿವರೊಂದಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಕಾಲುವೆ ಮೇಲೆಯೇ ಇದ್ದು , ಅಧಿಕೃತವಾಗಿ ಎಸ್ಟೇಪ್ ಮೂಲಕ ರೈತರ ಕಾಲುವೆಗೆ ನೀರುಹರಿಸಿದರು. ರೈತರಿಗೆ ಸಮರ್ಪಕವಾಗಿ ನೀರು ತಲುಪುವವರೆಗೆ ಸ್ವತಃ ತಾವೆ ಜವಾಬ್ದಾರಿಯನ್ನು ವಹಿಸಿಕೊಂಡು ರೈತರ ಬೇಡಿಕೆಯನ್ನು ಈಡೇರಿಸಿದರು, ರೈತರ ಬಹುದೊಡ್ಡ ಸಮಸ್ಯೆಯನ್ನು ಬಗೆಹರಿಸಿ ನೀರನ್ನು ಬಿಡಿಸಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ರೈತರ ಯಾವುದೇ ತುರ್ತು ಸಮಸ್ಯೆ ಬಂದಾಗ ನನ್ನನ್ನು ಸಂಪರ್ಕಿಸಿ ಸದಾ ಸಿದ್ಧನಾಗಿ ನಿಮ್ಮ ಜೊತೆ ನಿಲ್ಲುತ್ತೇನೆ ಎಂದು ಭರವಸೆಯನ್ನ ನೀಡಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಟಿ.ಎಂ.ಚಂದ್ರಶೇಖರಯ್ಯ ಸ್ವಾಮಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಂ. ಗೋಪಾಲ್ ರೆಡ್ಡಿ ಹಿರಿಯ ಮುಖಂಡರಾದ ಹರಿವರ್ಧನ ರೆಡ್ಡಿ ಎಪಿಎಂಸಿ ಸದಸ್ಯರಾದ ಮಾಜಿ ಗಜಗಿನಾಳ ವೀರೇಶ್ ಗೌಡ ನಗರಸಭೆ ಮಾಜಿ ಅಧ್ಯಕ್ಷರಾದ ಕೆ.ವೆಂಕಟರಾಮ ರೆಡ್ಡಿ ಹಾಗೂ ಸದಸ್ಯರಾದ ಎಂ.ಡಿ.ಕಮಲ್ ಹುಸೇನ್, ಬಾಜಿ ರಾಮ, ಸೀನಪ್ಪ, ಮಹೇಶ್ ಗೌಡ, ದೊಡ್ಡ ಸುಂಕಪ್ಪ , ಹಾಗೂ ಕಾಂಗ್ರೆಸ್ ಮುಖಂಡರುಗಳಾದ ದಶರಥ ರೆಡ್ಡಿ, ಅಯ್ಯಾಳಪ್ಪ ನಾಡಂಗ,ಎಂ. ವೀರೇಶ,ದೇಶನೂರು ಆದಮ್ ಭಾಷಾ, ಹಾವಿನಾಳ್ ಮಹೇಶ್, ಕಾಶಿಂ,ಜಿಲಾನ್ ಹಾಗೂ ಕಾಂಗ್ರೆಸ್ ಮುಖಂಡರು, ಗ್ರಾಮಗಳ ರೈತರು, ಅಧಿಕಾರಿಗಳು ಹಾಗೂ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here