ಯುವ ಸಮುದಾಯಕ್ಕೆ ಹೆಚ್.ಐ.ವಿ ಸೋಂಕು ಮತ್ತು ಏಡ್ಸ್ ಕಾಯಿಲೆ ಕುರಿತು ಅರಿವು ಬೇಕೆ ಬೇಕು:ಐ.ಟಿ.ಐ ತರಬೇತಿ ಅಧಿಕಾರಿ ರವಿಸ್ವಾಮಿ,

0
162

ಸಂಡೂರು: ಡಿ: 1: ತಾಲೂಕಿನ ತೋರಣಗಲ್ಲು ಗ್ರಾಮದ ಸರ್ಕಾರಿ ಐ.ಟಿ.ಐ ಕಾಲೇಜಿನಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು, ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಕಿರಿಯ ತರಬೇತಿ ಅಧಿಕಾರಿ ರವಿಸ್ವಾಮಿ ಅವರು ಯುವ ಸಮುದಾಯಕ್ಕೆ ಹೆಚ್.ಐ.ವಿ ಸೋಂಕು ಮತ್ತು ಏಡ್ಸ್ ಕಾಯಿಲೆ ಕುರಿತು ಅರಿವು ಇರಬೇಕು, ರೋಗ ನಿರ್ಣಾಯಕ ವಿಷಯಗಳನ್ನು ಅರಿತಿರಬೇಕು, ಆದರ್ಶ ಜೀವನಶೈಲಿ ನಮ್ಮದಾಗಿರಬೇಕು, ಏಡ್ಸ್ ಮುಕ್ತ ವಿಶ್ವ ರೂಪಿಸಲು ಯುವಕರಿಗೆ ಕೆರೆ ನೀಡಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಅರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಹೆಚ್.ಐ.ವಿ ಸೋಂಕಿತರ ಸಂಖ್ಯೆ ನಿಯಂತ್ರಿಸಿ, ಹೊಸ ರೋಗಿಗಳ ಸಂಖ್ಯೆ ಶೂನ್ಯಕ್ಕೆ ತರುವ ಪ್ರಯತ್ನ ಮಾಡಲಾಗುತ್ತಿದೆ ಅದಕ್ಕಾಗಿ 2030 ಕ್ಕೆ ಏಡ್ಸ್ ಮುಕ್ತ ವಿಶ್ವ ರೂಪಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ, ಹೆಚ್.ಐ.ವಿ ಮತ್ತು ಏಡ್ಸ್ ಬಗ್ಗೆ ಎಚ್ಚರಿಕೆಯಿಂದ ಇರದ್ದಿದ್ದರೆ ಯಾರಿಗಾದರೂ ಹೆಚ್.ಐ.ವಿ ಬರಬಹುದು, ಹೆಚ್.ಐ.ವಿ ಯು ಸೋಂಕಿತ ವ್ಯಕ್ತಿಯಿಂದ ನಡೆಸುವ ಅಸುರಕ್ಷಿತ ಲೈಂಗಿಕತೆಯಿಂದ ಹರಡುತ್ತದೆ, ಮತ್ತು ಸೋಂಕಿತ ವ್ಯಕ್ತಿಯ ರಕ್ತವನ್ನು ಪರೀಕ್ಷಿಸಿಸದೇ ಪಡೆಯುವುದರಿಂದ,ಸಂಸ್ಕರಿಸದ ಸೂಜಿ,ಸಿರಂಜು,ಬ್ಲೇಡು ಇತರೆ ಹರಿತವಾದ ವಸ್ತುಗಳನ್ನು ಬಳಸುವುದರಿಂದ ಹಾಗೂ ಸೋಂಕಿತ ಗರ್ಭಿಣಿಯಿಂದ ಹುಟ್ಟುವ ಮಗುವಿಗೆ ಬರುತ್ತದೆ, ಯುವಕರು ಮದುವೆಗೆ ಮುಂಚೆ ಲೈಂಗಿಕತೆ ಬೇಡ, ಮತ್ತು ಸೋಂಕಿತರ ಜೊತೆಗೆ ವಾಸ ಮಾಡುವುದರಿಂದಾಗಲಿ, ಕೆಲಸ ಮಾಡುವುದರಿಂದಾಗಲಿ,ಊಟ ಬಟ್ಟೆ ಹಂಚಿಕೊಳ್ಳುವುದರಿಂದಾಗಲಿ, ಸೊಳ್ಳೆ, ಕೀಟ ಕಚ್ಚುವುದರಿಂದಾಗಲಿ, ಒಂದೇ ಸ್ನಾನದ ಮನೆ, ಅಡುಗೆ ಮನೆ ಬಳಸುವುದರಿಂದ ಹೆಚ್.ಐ.ವಿ/ಏಡ್ಸ್ ಬರುವುದಿಲ್ಲ ಎಂದು ತಿಳಿಸಿದರು,

1988 ರಿಂದ ವಿಶ್ವ ಏಡ್ಸ್ ದಿನ ಆಚರಿಸಿ ಜನರಿಗೆ ಹೆಚ್.ಐ.ವಿ ಮತ್ತು ಏಡ್ಸ್ ಬಗ್ಗೆ ಮಾಹಿತಿ ತಿಳಿಸಲಾಗುವುದು, ಹಾಗೆ ಸುರಕ್ಷಿತ ಲೈಂಗಿಕತೆ, ಕಾಂಡೋಮ್ ಬಳಕೆ ಬಗ್ಗೆ ಅರಿವು ಮೂಡಿಸಲಾಗುತ್ತದೆ ಸರ್ವರೂ ಇಲಾಖೆಯೊಂದಿಗೆ ಕೈಜೋಡಿಸಿದಲ್ಲಿ 2030 ಕ್ಕೆ ಏಡ್ಸ್ ಮುಕ್ತ ವಿಶ್ವ ಮಾಡಬಹುದು, 2023 ರ ಘೋಷಣೆಯಂತೆ ” ಸಮುದಾಯಗಳು ಮುನ್ನಡೆಸಲಿ” ಎಂಬ ಧ್ಯೇಯ ವಾಕ್ಯ ದೊಂದಿಗೆ ಏಡ್ಸ್ ನ್ನು ಕೊನೆಗೊಳಿಸೋಣ, ಜಾಗೃತಿ ಮೂಡಿಸುದನ್ನು ನಿರಂತರ ಮುಂದುವರೆಸೋಣ, ವಿಶ್ವವನ್ನು ಜಾಗೃತಿಯಿಂದ ಏಡ್ಸ್ ಮುಕ್ತ ಮಾಡೋಣ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಐ.ಸಿ.ಟಿ.ಸಿ ಸಮಾಲೋಚಕ ಶ್ರೀರಾಮುಲು ಮಾತನಾಡಿ ಕೇಂದ್ರ ರಕ್ತ ಪರೀಕ್ಷೆ ನಿರಂತರ ಮಾಡಲಾಗುತ್ತದೆ, ಸೋಂಕಿತರಿಗೆ ಎ.ಆರ್.ಟಿ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು, ನಂತರ ಆರ್.ಕೆ.ಎಸ್.ಕೆ ಸಮಾಲೋಚಕ ಪ್ರಶಾಂತ್ ಕುಮಾರ್ ರೋಗಿಗಳಲ್ಲಿ ಕಳಂಕ ,ತಾರತಮ್ಯ ಹೋಗಲಾಡಿಸಿ, ಮಾನವ ಹಕ್ಕುಗಳ ರಕ್ಷಣೆ ಮಾಡುವ ಕುರಿತು ಪ್ರತಿಜ್ಞೆ ಬೋಧಿಸಿದರು,

ಈ ಸಂದರ್ಭದಲ್ಲಿ ಕಾಲೇಜಿನ ಬೋಧಕಿ ತರ್ಜನಾ ಬೇಗಂ,ಪ್ರಯೋಗ ಶಾಲಾ ತಂತ್ರಜ್ಞ ಬಸವರಾಜ್, ವಿದ್ಯಾರ್ಥಿಗಳಾದ ವಿಜಯಕುಮಾರ್,ಮಲ್ಲಿಕಾರ್ಜುನ, ರಾಜೇಶ್,ಕಿರಣ್,ರಾಜು,ಅರುಣ್,ಇಂದ್ರಕುಮಾರ್, ಕುಮಾರ್‌ಸ್ವಾಮಿ ಇತರರು ಹಾಜರಿದ್ದರು,

LEAVE A REPLY

Please enter your comment!
Please enter your name here