ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ ಆಯೋಗದ ಅಧ್ಯಕ್ಷ ಸಂಡೂರಿಗೆ ಆಗಮನ

0
106

ಸಂಡೂರು:ಆ:20:-
ಎಸ್ ಸಿ ,ಎಸ್ ಟಿ ಸಮುದಾಯಕ್ಕೆ, ಮೀಸಲಾತಿಯಲ್ಲಿ ಆಗಿರುವ ಅನ್ಯಾಯ ಕುರಿತು ಮಾತನಾಡಲು ನಾಗಮೋಹನ್ ದಾಸ್ ವಿಶ್ರಾಂತ ನ್ಯಾಯಮೂರ್ತಿಗಳು ಸಂಡೂರಿಗೆ ಅಕ್ಟೋಬರ್ 22 ರಿಂದ ಆಗಮಿಸಲಿದ್ದು, ಭಾರತದ ಸಂವಿಧಾನ ಸಾಮಾಜಿಕ ನ್ಯಾಯ ಮತ್ತು ಸಮುದಾಯಗಳ ಅಭಿವೃದ್ಧಿ ಕುರಿತು ಮಾತನಾಡಲಿದ್ದಾರೆ ಎಂದು ವಾಲ್ಮೀಕಿ ಸಮಾಜದ ಮುಖಂಡ ಜಯಣ್ಣ ನವಲೂಟಿಯವರು ತಿಳಿಸಿದರು.

ವಾಲ್ಮೀಕಿ ಸಮಾಜದ ಅನೇಕ ಮುಖಂಡರುಗಳು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದರು.

ಕಾರ್ಯಕ್ರಮ ಬೆಳಗ್ಗೆ 10 ಗಂಟೆ 30 ಆರಂಭವಾಗಲಿದ್ದು ಶಾಸಕರು, ಸ್ಥಳೀಯ ಸ್ವಾಮೀಜಿಗಳು ಸೇರಿದಂತೆ ಸಮಾಜದ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜೆ ಬಿ ಟಿ ಬಸವರಾಜ್, ಟಿ. ವಾಸಣ್ಣ, ಭೀಮಲಿಂಗಪ್ಪ, ನಾಗರಾಜ್ ಬಂಡ್ರಿ, ಮಲ್ಲಿಕಾರ್ಜುನ ಕಾಲಿಂಗೇರಿ, ವಸಂತ ಕುಮಾರ್, ತುಮಟಿ ನಾಗರಾಜ್, ಬೊಮ್ಮಯ್ಯ ವೇಸ್ಕೊ, ನಾಗರಾಜ್, ಶಾಮಿಯಾನ ಅಂಜಿನಪ್ಪ, ವಕೀಲರ ಸಂಘದ ಕುಮಾರಸ್ವಾಮಿ, ವಿಜಯ್ ಕುಮಾರ್, ಕೃಷ್ಣಪ್ಪ ಪರಶುರಾಮ್ , ರಾಮನಾಯಕ್ , ದಲಿತ ಸಂಘಟನೆ ಮುಖಂಡರಾದ ಐಹೊಳೆ ನಿಂಗಪ್ಪ, ಶಿವಲಿಂಗಪ್ಪ, ಆರ್ ಕೆ ಹೆಗಡೆ, ಕಾಶಪ್ಪ, ಕವಲೆರು ನಾಗರಾಜ ಸೇರಿದಂತೆ ವಿವಿಧ ಸಮಾಜಗಳ ಅನೇಕ ಮುಖಂಡರು ಭಾಗವಹಿಸಿದ್ದರು.

ವಿರೋದ:-
ಪತ್ರಿಕಾಗೋಷ್ಠಿ ನಡೆಸಿದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ವಾಲ್ಮೀಕಿ ಸಮಾಜದ ಮುಖಂಡರಾದ ವಿ. ಅಂಬರೀಶ್ ಅವರು ಜಯಣ್ಣ ಅವರು ವಾಲ್ಮೀಕಿ ಸಮಾಜದ ಮುಖಂಡರು ಎಂದು ಹೇಳಿಕೊಳ್ಳುವುದು ಸರಿಯಲ್ಲ ಇಡೀ ವಾಲ್ಮೀಕಿ ಸಮಾಜದ ಬಂಧುಗಳು ಒಪ್ಪಿಕೊಂಡ್ಡಿಲ್ಲ,ಈ ನಿರ್ಣಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸ್ವಯಂ ಘೋಷಿತ ಅಧ್ಯಕ್ಷರಾಗಿರೋದಕ್ಕೆ ನಮ್ಮ ಬೆಂಬಲವಿಲ್ಲ ಅಧ್ಯಕ್ಷ ಸ್ಥಾನದಲ್ಲಿ ನಮಗೆ ನ್ಯಾಯ ಸಿಗದಿದ್ದರೆ ಸದರಿ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ತೋರಿಸಿ ಪ್ರತಿಭಟನೆ ನಡೆಸುವುದಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here