ಮಕ್ಕಳು ಬಾಲ ಕಾರ್ಮಿಕರಾಗದಂತೆ ತಡೆಯುವುದು ನಮ್ಮೆಲ್ಲರ ಜವಬ್ದಾರಿ.

0
213

ಸಂಡೂರು:ಜೂನ್:28:- ಮಕ್ಕಳು ಬಾಲ ಕಾರ್ಮಿಕರಾಗದಂತೆ ತಡೆಯುವುದು ಶಿಕ್ಷಕರಾದ ನಮ್ಮ ಕರ್ತವ್ಯ ಹೇಗೋ ಹಾಗೆಯೇ ಗ್ರಾಮ ಮಟ್ಟದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷ,ಸದಸ್ಯ,ಪಿಡಿಒ ಹಾಗೂ ಗ್ರಾಮದ ಎಲ್ಲಾ ಮುಖಂಡರ ಜವಬ್ದಾರಿಯೂ ಇರುತ್ತದೆ ಎಂದು ಕರ್ನಾಟಕ ರಾಜ್ಯ ಶಿಕ್ಷಕರ ಸಂಘದ ಸಂಡೂರು ತಾಲೂಕು ಘಟಕದ ಉಪಾಧ್ಯಕ್ಷೆ ಮಧುಕುಮಾರಿ ತಿಳಿಸಿದರು.

ತಾಲೂಕಿನ ಸುಶೀಲಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜಿಲ್ಲಾ ಪಂಚಾಯತ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಸ್ನೇಹಿ ಪಂಚಾಯತ್ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮಕ್ಕಳನ್ನು ಜಾಗೃತಗೊಳಿಸುವ ದೃಷ್ಠಿಯಿಂದ 10 ವಾರಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಅನೇಕ ವಿಷಯಗಳನ್ನಿಟ್ಟುಕೊಂಡು ಮಕ್ಕಳಲ್ಲಿ ಅರಿವು ಮೂಡಿಸಲಾಗುತ್ತಿದೆ. 6 ವರ್ಷದಿಂದ 14 ವರ್ಷದವರೆಗಿನ ಮಕ್ಕಳು ಶಾಲೆಯಲ್ಲಿರಬೇಕು ಬದಲಾಗಿ ಯಾವುದೇ ಕೆಲಸಗಳಲ್ಲಿ ತೊಡಗಿದರೆ ಅವರನ್ನು ನಾವು ಬಾಲ ಕಾರ್ಮಿಕರು ಎಂದು ಕರೆಯುತ್ತೇವೆ.

ಈ ಪದ್ಧತಿಯಿಂದ ಅವರನ್ನು ವಿಮೋಚನೆಗೊಳಿಸವುಲ್ಲಿ ಪೋಷಕರ ಪಾತ್ರವೂ ಬಹಳ ಮುಖ್ಯವಾಗಿದೆ ಎಂದರು. ಮಕ್ಕಳ ಮನೆಮನೆಗೆ ತೆರಳಿ ಬಾಲ ಕಾರ್ಮಿಕರ ಮಾಹಿತಿಯನ್ನು ಸಂಗ್ರಹಿಸುವುದು ಮತ್ತು ಪೋಷಕರ ಮನವೊಲಿಸುವುದು ಕೂಡಾ ಮುಖ್ಯ. ಇದರಿಂದ ಮಕ್ಕಳು ಮುಖ್ಯವಾಹಿನಿಗೆ ಬರುತ್ತಾರೆ.ಮಕ್ಕಳು ಉತ್ತಮ ಶಿಕ್ಷಣ ಪಡೆಯುವ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪರಶುರಾಮ್ ಚೌಕಳಿ ಮಾತನಾಡಿ ಶಿಕ್ಷಣದಲ್ಲಿ ಇಂದು ಸಾಕಷ್ಟು ಸುಧಾರಣೆಯಾಗಿದೆ. ಹಿಂದೆ ಬೇಸಾಯದಲ್ಲಿ ತೊಡಗಿದವರ ಮಕ್ಕಳು ಇಂದು ವಿದ್ಯಾವಂತರಾಗುತ್ತಿದ್ದಾರೆ.ಶಿಕ್ಷಕರು ಕೂಡಾ ಮಕ್ಕಳಲ್ಲಿ ಕಲಿಕಾ ಸಾಮಥ್ರ್ಯ ಮತ್ತು ಆಸಕ್ತಿಯನ್ನು ಹೆಚ್ಚಿಸುವ ಮೂಲಕ ಶಿಕ್ಷಣದೆಡೆಗೆ ಸೆಳೆಯುಂತಾಗಬೇಕು. ಪ್ರಾಥಮಿಕ ಹಂತದ ಶಿಕ್ಷಣವು ಗಟ್ಟಿಗೊಂಡರೆ ಮುಂದೆ ಭವಷ್ಯ ಕೂಡಾ ಉಜ್ವಲವಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕ್ಯಾನ್ಸರ್ ತಜ್ಞ ಡಾ. ಇಬ್ರಾಹಿಂ ನಾಗನೂರು ಅವರನ್ನು ಸನ್ಮಾನಿಸಲಾಯಿತು. ರೋಷನಿ ಮತ್ತು ಮಕ್ಕಳ ತಂಡದಿಂದ ನೃತ್ಯ ಕಾರ್ಯಕ್ರಮವನ್ನು ಕೂಡಾ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಿಆರ್‍ಪಿ ಶೇಖರ್ ಪಾಟೀಲ್ ,ಗ್ರಾಮ ಪಂಚಾಯಿತಿ ಅಧ್ಯಕ್ಷ ಎಲ್.ಅಮರೇಶ್,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತಮ್ಮಣ್ಣ,ಶಾಲೆಯ ಪ್ರಭಾರಿ ಮುಖ್ಯ ಗುರುಗಳಾದ ಷಣ್ಮುಖಪ್ಪ,ಗ್ರಾಮ ಪಂಚಾಯಿತಿ ಸದಸ್ಯರಾದ ಸವಿತಾ, ಶಾರದಾಬಾಯಿ, ಆದೆಪ್ಪ,ದಾವು ನಾಯಕ್,ರಾಮಘಡ ಶಾಲೆಯ ಮುಖ್ಯ ಗುರು ಶ್ರೀನಿವಾಸ್ ನಾಯಕ್,ಸಿದ್ದಾಪುರ ಜಂಬಣ್ಣ,ಜೈಸಿಂಗ್ ಪುರ ರಾಜಣ್ಣ, ಎಸ್‍ಡಿಎಂಸಿ ಅಧ್ಯಕ್ಷ ಶ್ರೀನಿವಾಸ್,ಶಿಕ್ಷಕ ಗಾಳೆಪ್ಪ,ಮುಖಂಡರಾದ ಪಕ್ಕೀರಪ್ಪ, ಚನ್ನವೀರ,ಸ್ಮಯೋರ್ ಸಂಸ್ಥೆಯ ಪ್ರತಿನಿಧಿ ಯರ್ರೆಮ್ಮ,ಇದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಅನಿತಾ ನಿರೂಪಿಸಿದರು. ರೇಷ್ಮಾ ಸ್ವಾಗತಿಸಿದರು. ವಿದ್ಯಾರ್ಥಿ ಸುನೀಲ್ ಪ್ರಾರ್ಥಿಸಿದರು.

ವರದಿ-:-ಪಿ.ವಿ.ಕಾವ್ಯ, ಸಂಡೂರು

LEAVE A REPLY

Please enter your comment!
Please enter your name here