ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಲೇರಿಯಾ ದಿನ ಜಾಗೃತಿ

0
268

ಸಂಡೂರು: ಏ: 25: ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಲೇರಿಯಾ ದಿನ ಕುರಿತು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು

ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ
ವಿಶ್ವ ಮಲೇರಿಯಾ ದಿನ ಕುರಿತು ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಡಾ.ಸಾದಿಯ ಮಾತನಾಡಿದರು, ಮಲೇರಿಯಾ ಭಯ ಈಗ ಇಲ್ಲ, ಇಲಾಖೆಯ ಅವಿರತ ಶ್ರಮದಿಂದ ಪ್ರಕರಣಗಳು ಕಡಿಮೆಯಾಗಿವೆ, ನಮ್ಮ ಕ್ಷೇತ್ರದಲ್ಲಂತು ಶೂನ್ಯ ಹಂತಕ್ಕೆ ತಲುಪಿದ್ದೇವೆ, ಹೊರ ರಾಜ್ಯಗಳಿಂದ ವಲಸೆ ಬಂದ ಎರಡು ಪ್ರಕರಣಗಳು ಮಾತ್ರ ವರದಿಯಾಗಿವೆ, 2025 ಕ್ಕೆ ಮಲೇರಿಯಾ ಮುಕ್ತ ರಾಜ್ಯ ರೂಪಿಸಲು ಪ್ರಯತ್ನಿಸಲಾಗುತ್ತಿದೆ ಎಂದು ತಿಳಿಸಿದರು,

ಈ ಸಂದರ್ಭದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ ಶೂನ್ಯ ಮಲೇರಿಯಾ ರಾಷ್ಟ್ರ ರೂಪಿಸಲು ಸಾರ್ವಜನಿಕರು ಕೈಜೋಡಿಸಬೇಕಿದೆ, ಯಾರಿಗೆ ಆಗಲಿ ಜ್ವರ ,ಚಳಿ, ತಲೆನೋವು, ಬೆವರು, ಬಿಟ್ಟು ಬಿಟ್ಟು ಜ್ವರ ಬರುವುದು ಕಂಡೊಡನೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು, ಮಲೇರಿಯಾಕ್ಕೆ ಎಂದು ದೃಡಪಟ್ಟರೆ 4 ರಿಂದ 14 ದಿನಗಳ ಪೂರ್ಣ ಚಿಕಿತ್ಸೆ ಪಡೆಯಬೇಕು, ಮೊದಲಿನಂತೆ ಹೆಚ್ಚು ಪ್ರಕರಣಗಳು ಇರದಿದ್ದರೂ ಈ ವರ್ಷದ ಘೋಷ ವಾಕ್ಯದಂತೆ ಮಲೇರಿಯಾ ನಿಯಂತ್ರಣಕ್ಕೆ “ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣ, ನವೀನ ವಿಧಾನಗಳನ್ನು ಅಳವಡಿಸಿ ಅನುಷ್ಠಾನಗೊಳಿಸಿ ಮಲೇರಿಯಾ ನಿಯಂತ್ರಣ ಮಾಡಿ ಜೀವಗಳನ್ನು ಉಳಿಸೋಣ” ಎಂಬ ವಾಕ್ಯದ ಅಡಿಯಲ್ಲಿ ಇಲಾಖೆ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದರು,

ಈ ಸಂದರ್ಭದಲ್ಲಿ ಕೇಂದ್ರದ ಡಾ. ಗೋಪಾಲ್ ರಾವ್, ಡಾ.ರಜಿಯಾ ಬೇಗಂ, ಡಾ.ಪ್ರಿಯಾಂಕಾ, ಸಿಬ್ಬಂದಿಯವರಾದ ಶಕೀಲ್, ಮಂಜುನಾಥ್, ನಿಜಾಮ್, ಸಂಗೀತಾ, ವೆಂಕಟೇಶ,ಗೀತಾ, ನಾಗರತ್ನ, ವೆಂಕಪ್ಪ,ಭಾಗ್ಯ,ರತ್ನಮ್ಮ, ವಿಜಯಲಕ್ಷ್ಮಿ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here