ಘೋರ್ಪಡೆ ನಗರದಲ್ಲಿ “ವಿಶ್ವ ಮಲೇರಿಯಾ ದಿನ-2023″ಆಚರಣೆ

0
38

ಸಂಡೂರು: ಏ: 25: ತೋರಣಗಲ್ಲು ರೈಲ್ವೆ ನಿಲ್ದಾಣದ ಘೋರ್ಪಡೆ ನಗರದಲ್ಲಿ “ವಿಶ್ವ ಮಲೇರಿಯಾ ದಿನ-2023″ರ ಆಚರಣೆ ಅಂಗವಾಗಿ ಜಾಗೃತಿ ಕಾರ್ಯಕ್ರಮ ನಡೆಯಿತು, ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಘೋರ್ಪಡೆ ನಗರದ ಲ್ಲಿ ವಿಶ್ವ ಮಲೇರಿಯಾ ದಿನ ಆಚರಿಸಿ ಸಾರ್ವಜನಿಕರಿಗೆ ಮಲೇರಿಯಾ ಬಗ್ಗೆ ಜಾಗೃತಿ ಮೂಡಿಸಲಾಯಿತು,

ಕಾರ್ಯಕ್ರಮ ಕುರಿತು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಮಾತನಾಡಿ 2007 ರಿಂದ ವಿಶ್ವ ಮಲೇರಿಯಾ ದಿನವನ್ನು ಆಚರಿಸಲಾಗುತ್ತಿದೆ, ಮಲೇರಿಯಾ ನಿಯಂತ್ರಣ ಸಾಧಿಸಲು ಎಲ್ಲಾ ರೀತಿಯಿಂದಲೂ ಇಲಾಖೆ ಶ್ರಮಿಸುತ್ತಿದೆ,ರಾಜ್ಯದಲ್ಲಿ 2025 ಕ್ಕೆ ಮತ್ತು ದೇಶದಲ್ಲಿ 2030 ಕ್ಕೆ ಶೂನ್ಯ ಮಲೇರಿಯಾ ರಾಷ್ಟ್ರವಾಗಿಸಲು ಪಣ ತೊಟ್ಟಿದೆ, ಸದ್ಯ ನಮ್ಮ ಕ್ಷೇತ್ರದಲ್ಲಿ ಮಲೇರಿಯಾ ಪ್ರಕರಣಗಳು ಇಲ್ಲ ಆದರೆ ಹೊರ ರಾಜ್ಯಗಳಿಂದ ಬಂದ ಜನರಲ್ಲಿ ಕಂಡು ಬಂದಿದೆ, ಮುಂಜಾಗ್ರತಾ ಕ್ರಮವಾಗಿ ತೋರಣಗಲ್ಲು ವ್ಯಾಪ್ತಿಯಲ್ಲಿ ಕಳೆದ ತಿಂಗಳಲ್ಲಿ ಒಳಾಂಗಣ ಕೀಟನಾಶಕ ದ್ರಾವಣ ಸಿಂಪಡಿಸಲಾಗಿದೆ, ನೀರಿನ ತೊಟ್ಟಿ, ನಿಂತ ನೀರಿನಲ್ಲಿ ಲಾರ್ವಾಹಾರಿ ಮೀನುಗಳನ್ನು ಬಿಡಲಾಗಿದೆ, ಆಧ್ಯತೆ ಮೇರೆಗೆ ಕೀಟ ನಾಶಕ ಲೇಪಿತ ಸೊಳ್ಳೆ ಪರದೆಗಳನ್ನು ವಿತರಣೆ ಮಾಡಲಾಗಿದೆ, ಹಾಗೆ ಎಲ್ಲಾ ಕಡೆಯೂ ಜಾಗೃತಿ ಕಾರ್ಯ ಕೈಗೊಂಡಿದೆ, ಉದ್ಯೋಗ ಅರಸಿ ಬರುವ ವಲಿಸಿಗರ ಮೇಲೂ ಕಣ್ಗಾವಲು ಇಟ್ಟಿದೆ, ಯಾರಿಗೆ ಆಗಲಿ ಜ್ವರ ,ಚಳಿ, ತಲೆನೋವು, ಬೆವರು, ಬಿಟ್ಟು ಬಿಟ್ಟು ಜ್ವರ ಬರುವುದು ಕಂಡೊಡನೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳ ಬೇಕು, ಮಲೇರಿಯಾ ಎಂದು ದೃಡಪಟ್ಟರೆ 4 ರಿಂದ 14 ದಿನಗಳ ಪೂರ್ಣ ಚಿಕಿತ್ಸೆ ಪಡೆಯಬೇಕು, ಮೊದಲಿನಂತೆ ಹೆಚ್ಚು ಪ್ರಕರಣಗಳು ಇರದಿದ್ದರೂ ಈ ವರ್ಷದ ಘೋಷ ವಾಕ್ಯದಂತೆ ಮಲೇರಿಯಾ ನಿಯಂತ್ರಣಕ್ಕೆ “ಶೂನ್ಯ ಮಲೇರಿಯಾ ಗುರಿಯನ್ನು ತಲುಪೋಣ, ನವೀನ ವಿಧಾನಗಳನ್ನು ಅಳವಡಿಸಿ ಅನುಷ್ಠಾನಗೊಳಿಸಿ ಮಲೇರಿಯಾ ನಿಯಂತ್ರಣ ಮಾಡಿ ಜೀವಗಳನ್ನು ಉಳಿಸೋಣ” ಎಂಬ ವಾಕ್ಯದ ಅಡಿಯಲ್ಲಿ ಇಲಾಖೆ ಕ್ರಮ ಕೈಗೊಂಡಿದೆ, ಪ್ರತಿಯೊಬ್ಬರೂ ಶೂನ್ಯ ಮಲೇರಿಯಾ ದೇಶವಾಗಿಸಲು ಶ್ರಮಿಸ ಬೇಕಿದೆ, ಸ್ವಯಂ ರಕ್ಷಣೆ ವಿಧಾನಗಳಾದ ಮಸ್ಕಿಟೋ ಕಾಯಿಲ್ ಬಳಸುವುದು, ಕ್ರೀಮ್ ಗಳ ಲೇಪನ, ಮನೆಯಲ್ಲಿ ಸೊಳ್ಳೆಗಳನ್ನು ನಿಯಂತ್ರಿಸುವುದು, ಸೊಳ್ಳೆ ಉತ್ಪತ್ತಿಯಾಗುವ ಸ್ಥಳಗಳನ್ನು ಸ್ವಚ್ಛವಾಗಿಡುವುದು, ಮಲಗುವಾಗ ಸೊಳ್ಳೆ ಪರದೆಗಳನ್ನು ಬಳಸುವುದು, ಮೈತುಂಬ ಬಟ್ಟೆ ಧರಿಸುವುದು, ಸಂಜೆ ವೇಳೆ ಬಾಗಿಲು,ಕಿಟಿಕಿಗಳಿಗೆ ಕರ್ಟನ್ ಹಾಕುವುದು, ಮನೆಯ ಸುತ್ತ ಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ಮಾಡಿದಲ್ಲಿ ಮಲೇರಿಯಾ ನಿಯಂತ್ರಣ ಸಾಧ್ಯವಿದೆ ಎಂದು ಅವರು ತಿಳಿಸಿದರು,

ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಸೊಳ್ಳೆ ನಿಯಂತ್ರಣದ ಕರಪತ್ರಗಳನ್ನು ವಿತರಣೆ ಮಾಡಲಾಯಿತು,

ಈ ಕಾರ್ಯಕ್ರಮದಲ್ಲಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,ಆಪ್ತ ಸಮಾಲೋಚಕ ಪ್ರಶಾಂತ್, ಆರೋಗ್ಯ ಸುರಕ್ಷಣಾಧಿಕಾರಿ ಭಾಗ್ಯಲಕ್ಷ್ಮಿ, ಆಶಾ ಕಾರ್ಯಕರ್ತೆ ರಾಜೇಶ್ವರಿ, ಹುಲಿಗೆಮ್ಮ,ಆಶಾ, ಶ್ರೀದೇವಿ,ಪದ್ಮಾ, ಮಂಜುಳಾ, ತೇಜಮ್ಮ,ಗೋವಿಂದಮ್ಮ, ರೇಖಾ, ಅಂಗನವಾಡಿ ಕಾರ್ಯಕರ್ತೆ ಮಾಬುನ್ನಿ,ಪೀರಮ್ಮ, ಮಂಜುನಾಥ್, ರಾಜೇಶ್ ಮೋಹಿತ್, ಸುರೇಶ್ ಬಾಬು, ಶಂಶದ್,ಶಾಹಿದಾ,ರೇಣುಕಾ, ಪುಷ್ಪ, ವಿಶಾಲಾ,ದಾನಮ್ಮ,ಜ್ಯೋತಿ,ಭವಾನಿ, ಶೀಲಾದೇವಿ ಇತರರು ಹಾಜರಿದ್ದರು

LEAVE A REPLY

Please enter your comment!
Please enter your name here