ಉದೋ ಉದೋ ಬಿಕ್ಕಿ ಮರಡಿ ದುರ್ಗಾಂಬಿಕೆ!

0
236

ಕೊಟ್ಟೂರು:ಮೇ:16:-ಪಟ್ಟಣದ ಕೆರೆಯ ಹತ್ತಿರ ಇರುವ ಬಿಕ್ಕಿ ಮರಡಿ ದುರ್ಗಾಬಿಕಾ ದೇವಿಯ ರಥೋತ್ಸವ ಇಂದು ಅದ್ದೂರಿಯಾಗಿ ಜರುಗಲಿದೆ. ಹಿನ್ನೆಲೆ: ದುರ್ಗಾಂಬಿಕೆ ನೆಲೆ ನಿಂತ ಸ್ಥಳದಲ್ಲಿ ಅನೇಕ ಬಿಕ್ಕಿ ಮರಗಳು ಇರುವ ಹಿನ್ನೆಲೆಯಲ್ಲಿ ಈ ದೇವಸ್ಥಾನಕ್ಕೆ ಬಿಕ್ಕಿ ಮರಡಿ ದುರ್ಗಾಂಬಿಕೆ ಎಂದು ಹೆಸರು ಬಂತು ಎನ್ನುತ್ತಾರೆ ಹಿರಿಯರು, ಅಡ್ಡಪಲ್ಲಕ್ಕಿಯಲ್ಲಿ ದುರ್ಗಾಂಬಿಕಾ ದೇವತೆಯ ಮೂರ್ತಿಯನ್ನು ಕೂರಿಸಿಕೊಂಡು ಮರೂರು, ಚಪ್ಪರದಹಳ್ಳಿ, ಹಾಗೂ ಇನ್ನಿತರ ಹಳ್ಳಿಗಳಲ್ಲಿ ಮನೆ ಮನೆಗೆ ಹೋಗಿ ಉಡಿಯನ್ನು ತುಂಬಲಾಗುತ್ತದೆ ನಂತರ ಮೂಲ ನೆಲೆಯಾದ ಕೆರೆಯ ಹತ್ತಿರದಲ್ಲಿರುವ ದೇವಸ್ಥಾನಕ್ಕೆ ಬಂದು ನೆಲೆಯಾಗುತ್ತಾಳೆ. ನಂತರ ಮೂಲ ತವರು ಮನೆಯಾದ ಜಾಗಟೆಗೇರಿಗೆ ಮುಂಜಾನೆ ಸುಮಾರು 4.00 ಗಂಟೆಗೆ ಪ್ರತಿಯೊಂದು ಮನೆ ಮನೆಗೆ ಹೋಗಿ ಭಕ್ತರು ಹೋಳಿಗೆ ಉಡಿ ಅಕ್ಕಿಯನ್ನು ತುಂಬಲಾಗುತ್ತದೆ. ನಂತರ ಮತ್ತೆ ಕೆರೆ ಹತ್ತಿರವಿರುವ ದೇವಸ್ಥಾನಕ್ಕೆ ಬಂದು ನೆಲೆಯಾಗಿ ಪೂಜೆ ಕಾರ್ಯಕ್ರಮಗಳನ್ನು ನೆರವೇರಿಸಿ, ಸಾಯಂಕಾಲ ರಥದ ಮೇಲೆ ಮೂರ್ತಿಯನ್ನು ಕೂರಿಸಿ ಪಟಾಕ್ಷಿಯ ಹರಾಜು ಕೂಗಿದ ನಂತರ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ನೂತನ ರಥ: ಹಿಂದಿನ ವರ್ಷ ಭಕ್ತರ ದೇಣಿಗೆಯ ಮೂಲಕ ಸುಮಾರು 25 ಲಕ್ಷದ ಖರ್ಚು ಮಾಡಿ ನೂತನ ರಥವನ್ನು ನಿರ್ಮಾಣ ಮಾಡಿದ್ದು ಹಿಂದಿನ ವರ್ಷ ಕೊರೋನಾ ಇರುವ ಹಿನ್ನೆಲೆಯಲ್ಲಿ ರಥೋತ್ಸವವು ನಿಂತಿತ್ತು ಈ ವರ್ಷ ಅದ್ದೂರಿಯಾಗಿ ರಥೋತ್ಸವ ಈ ವರ್ಷ ಅದ್ದೂರಿಯಾಗಿ ರಥೋತ್ಸವ ಜರುಗಲಿದೆ ಎಂದು ಎಚ್ ಪಕೀರಪ್ಪ ತಿಳಿಸಿದರು.

ರಥದ ವಿಶೇಷತೆ:ಈ ರಥಕ್ಕೆ ಜೀವಂತ ಕೋಳಿಯನ್ನು ಭಕ್ತರು ರಥಕ್ಕೆ ತೂರುತ್ತಾರೆ. ತೂರಿದ ಕೋಳಿಯನ್ನು ಭಕ್ತರು ಹಾರಿಸಿಕೊಂಡು ಮನೆಯಲ್ಲಿ ಸಾಕಿ ಮುಂದಿನ ವರ್ಷ ಏಳಿಗೆ ಯಾದ ಕೋಳಿಯನ್ನು ಮತ್ತೆ ರಥಕ್ಕೆ ಭಕ್ತರು ತೂರುವುದು ವಿಶೇಷವಾಗಿದೆ.

ಈ ರಥವು ಕೊಟ್ಟೂರು ಪಟ್ಟಣದ ಸುತ್ತಮುತ್ತಲಿನ ಸುತ್ತಮುತ್ತಲಿನ ಕೊನೆಯ ಕಳಸದ ರಥೋತ್ಸವವಾಗಿದ್ದು ಹೊಸದಾಗಿ ಮದುವೆ ಯಾದ ಜೋಡಿಗಳು ಬಂದು ರಥೋತ್ಸವಕ್ಕೆ ಭಾಗಿಯಾಗಿ ದರ್ಶನವನ್ನು ಪಡೆದು ಕೆರೆಯ ದಂಡೆಯಲ್ಲಿ ಖಾರ, ಮಂಡಕ್ಕಿ ತಿನ್ನುವುದು ಇಲ್ಲಿನ ಸಂಪ್ರದಾಯವಾಗಿದೆ ಎನ್ನುತ್ತಾರೆ ಹಿರಿಯರು,

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here