ನರೇಗಾ ಕಾಮಗಾರಿ ಸ್ಥಳದಲ್ಲಿ ಮತದಾನ ಪ್ರತಿಜ್ಞಾವಿಧಿ ಬೋಧನೆ; ಜಿಪಂ ಸಿಇಒ ಸದಾಶಿವಪ್ರಭು

0
116

ಕೊಟ್ಟೂರು ತಾಲೂಕು ಕಂದಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಿಮ್ಮಲಾಪುರ ಗ್ರಾಮದ ಅರಣ್ಯ ಪ್ರದೇಶದಲ್ಲಿ ನರೇಗಾದಡಿ ಕೈಗೊಂಡಿದ್ದ ನೀರು ಮತ್ತು ಮಣ್ಣು ಸಂರಕ್ಷಣಾ ಕಾಮಗಾರಿ ಸ್ಥಳದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಮತದಾನ ಮಾಡಬೇಕು. ಯಾವುದೇ ಕಾರಣಕ್ಕೂ ಮತದಾನದಿಂದ ದೂರ ಉಳಿಯಬಾರದು. ಮತದಾನ ಮಾಡುವುದು ಪ್ರತಿಯೊಬ್ಬ ಮತದಾರನ ಕರ್ತವ್ಯ ಎಂದು ಹೇಳಿದರು. ಕಾಮಗಾರಿ ಸ್ಥಳದಲ್ಲಿ ಇದ್ದ 210 ನರೇಗಾ ಕೂಲಿಕಾರರಿಗೆ ಮತದಾನದ ಪ್ರತಿಜ್ಞಾವಿಧಿ ಬೋಧಿಸಿದರು.

■ಆರೋಗ್ಯ ಶಿಬಿರದಲ್ಲಿ ಭಾಗಿ:
ತಾಲೂಕಿನ ದೂಪದಹಳ್ಳಿ ಗ್ರಾಮದ ನಾಲಾ ಹೂಳೆತ್ತುವ ನರೇಗಾ ಕಾಮಗಾರಿ ಸ್ಥಳದಲ್ಲಿ ಗ್ರಾಮ ಪಂಚಾಯಿತಿ ಅಮೃತ ಅಭಿಯಾನದಡಿ 220 ಕೂಲಿಕಾರರ ಆರೋಗ್ಯ ತಪಾಸಣಾ ನಡೆಸಲಾಯಿತು. ಈ ವೇಳೆ ಮಾನ್ಯ ಸಿಇಒ ಸದಾಶಿವ ಪ್ರಭು ಅವರು ಮಾತನಾಡಿ, ಬೇಸಿಗೆ ಸಂದರ್ಭ ಕಾರಣ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಯಾವುದೇ ಕಾರಣಕ್ಕೂ ಉದಾಸೀನ ತೋರದೆ, ಜ್ವರ, ಶೀತದಂತಹ ಅನಾರೋಗ್ಯದ ಲಕ್ಷಣ ಕಂಡುಬಂದ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ತೆರಳಿ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

■ಬಾಲ್ಯ ವಿವಾಹ ಮಾಡದಿರಿ
ಇದೇ ವೇಳೆ ಮಾನ್ಯ ಸಿಇಒ ಸದಾಶಿವಪ್ರಭು ಅವರು, ತಾಲೂಕಿನ ಅಲಬೂರು ಹಾಗೂ ಕೋಗಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ನರೇಗಾ ಕಾಮಗಾರಿ ಸ್ಥಳಗಳಿಗೆ ತೆರಳಿ ಕೂಲಿಕಾರರೊಂದಿಗೆ ಮತದಾನ ಪ್ರತಿಜ್ಞಾವಿಧಿ ಬೋಧಿಸಿ, ಕೂಲಿಕಾರರಿಂದ ಕೂಂದು ಕೊರತೆ ಆಲಿಸಿದರು.

ತಂದೆ ತಾಯಿಗಳು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಯಾವುದೇ ಕಾರಣಕ್ಕೂ ಬಾಲ್ಯವಿವಾಹ ಮಾಡಬಾರದು. ಇದರಿಂದ ಶಿಕ್ಷೆಗೆ ಗುರಿಯಾಗುತ್ತೀರಿ. ಮಕ್ಕಳನ್ನು ತಮ್ಮ ಜೊತೆಗೆ ಕೆಲಸಕ್ಕೆ ಕರೆದುಕೊಂಡು ಹೋಗದೆ ಶಾಲೆಗೆ ಕಳುಹಿಸಬೇಕು. ಉತ್ತಮ ಶಿಕ್ಷಣ ಕೊಡಿಸಿ, ಭವಿಷ್ಯ ರೂಪಿಸಬೇಕು ಎಂದು ಕಿವಿಮಾತು ಹೇಳಿದರು.

ತಾಲೂಕು ಪಂಚಾಯಿತಿ ಐಇಸಿ ಸಂಯೋಜಕ ಪ್ರಭುಕುಮಾರ್ ಉಪ್ಪಾರ್, ಪಿಡಿಒಗಳಾದ ಮಾರುತೇಶ್, ಮಾಧವಿ, ಶಶಿಧರ್, ಜಯಮ್ಮ, ತಾಂತ್ರಿಕ ಸಹಾಯಕರಾದ ಶ್ರೀಧರ್, ಚಂದ್ರಶೇಖರ್, ರಾಘವೇಂದ್ರ, ಬಿಎಫ್ಟಿ, ಜಿಕೆಎಂ, ಗ್ರಾಪಂ ಸಿಬ್ಬಂದಿಗಳು ಇದ್ದರು.

LEAVE A REPLY

Please enter your comment!
Please enter your name here